• ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ಪೈಪೋಟಿ ವಿಚಾರ
• ಸಿದ್ದರಾಮಯ್ಯ, ಡಿಕೆಶಿ ಕದನದಲ್ಲಿ ನಿಮಗೆ ಚಾನ್ಸ್ ಸಿಗುತ್ತಾ ಅಂತಾ ಮಾಧ್ಯಮಗಳ ಪ್ರಶ್ನೆ
• ಇಬ್ಬರ ಕದನದಲ್ಲಿ ಏಕೆ ನಮಗೂ ಸಾಮರ್ಥ್ಯ ಇದೆ ಎಂದ MBP
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣ಼ನ್ಯೂಸ್, ಬೆಳಗಾವಿ
ಬೆಳಗಾವಿ (ಜು.23): ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಪೈಪೋಟಿ ನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಮಧ್ಯೆ ಲಿಂಗಾಯತ ಸಮುದಾಯದ ಪ್ರಭಾವಿ ಕಾಂಗ್ರೆಸ್ ನಾಯಕ ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸದ್ದಿಲ್ಲದೇ ಸಿಎಂ ಖುರ್ಚಿಗೆ ಟವಲ್ ಹಾಕಿದ್ರಾ ಎಂಬ ಮಾತುಗಳು ಈಗ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಪಾಟೀಲ್ ಹೇಳಿದ ಅದೊಂದು ಮಾತು.
ಹೌದು! ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಇಂದು ಬೆಳಗಾವಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ರನ್ನು ಮಾಧ್ಯಮ ಪ್ರತಿನಿಧಿಗಳು ರಾಜ್ಯ ಕಾಂಗ್ರೆಸ್ ನಲ್ಲಿ ಸದ್ಯ ನಡೆಯುತ್ತಿರುವ ಸಿಎಂ ಹುದ್ದೆಯ ವಾರ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಡಿಕೆಶಿ ಇಬ್ಬರ ಕದನದಲ್ಲಿ ಎಂ.ಬಿ.ಪಾಟೀಲ್‌ಗೆ ಸಿಎಂ ಆಗುವ ಚಾನ್ಸ್ ಬರಬಹುದಾ ಎಂದು ಮಾಧ್ಯಮಗಳ ಪ್ರಶ್ನಿಸಿದಾಗ ಉತ್ತರಿಸಿದ ಎಂ.ಬಿ.ಪಾಟೀಲ್, 'ಇಬ್ಬರ ಕದನದಾಗ ಯಾಕಪಾ? ನಮಗೂ ಸಾಮರ್ಥ್ಯ ಇದೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ಕಾಡಂಚಿನ ಗ್ರಾಮದ ಯುವಕ: ನಾಲ್ವರ ಜೀವ ಉಳಿಸಿದ
ನೇರವಾಗಿಯೇ ಬರ್ತೀವಿ ಯಾವಾಗ ಬೇಕಾದಾಗ. ಎಂ.ಬಿ.ಪಾಟೀಲ್ ಇಬ್ಬರ ಕದನದಾಗ ಬರುವಂತದ್ದು ಬೇಕಾಗಿಲ್ಲ. ನಾವು ಬರಬೇಕು ಅಂದ್ರೆ ನೇರವಾಗಿಯೇ ಬರ್ತೀವಿ ಅಲ್ಲಾ. ಕದನದಲ್ಲಿ ಏಕೆ ಬರಬೇಕು ನಾವು?. ವಿ ಆರ್ ನಾಟ್ ಎ ಸೆಕೆಂಡ್ ಕ್ಲಾಸ್ ಸಿಟಿಜನ್ಸ್' ಎನ್ನುವ ಮೂಲಕ ತಾವು ಸಿಎಂ ಹುದ್ದೆಗೆ ಸಮರ್ಥ ಅಭ್ಯರ್ಥಿ ಎಂದು ಪರೋಕ್ಷವಾಗಿ ಎಂ.ಬಿ.ಪಾಟೀಲ್ ಸಮರ್ಥನೆ ಮಾಡಿಕೊಂಡಿದ್ದಾರೆ. ಸಿಎಂ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿ, 'ಕಾಂಗ್ರೆಸ್ ಪಕ್ಷದಲ್ಲಿ ಸರ್ವೇ ಸಾಮಾನ್ಯ ಪದ್ಧತಿ ಇದೆ. ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಣಯ ಮಾಡುತ್ತೆ.
ಕಾಂಗ್ರೆಸ್ ಪಕ್ಷ ಒಂದು ವೇಳೆ ಬಯಸಿದ್ರೆ, ಪಂಜಾಬ್ ರೀತಿ ಯಾರನ್ನು ಪ್ರಾಜೆಕ್ಟ್ ಮಾಡಿದ್ರೆ ಅವರೂ ಅದನ್ನ ಡಿಕ್ಲೇರ್ ಮಾಡ್ತಾರೆ. ಹೈಕಮಾಂಡ್ ಕೇಳುವ ಪ್ರಶ್ನೆ ನನ್ನ ಕೇಳಿದ್ರೆ ಹೇಗೆ? ಹೈಕಮಾಂಡ್ ಆ ನಿರ್ಣಯ ತಗೆದುಕೊಳ್ಳಬಹುದು, ತಗೆದುಕೊಳ್ಳದೇ ಇರಬಹುದು' ಎಂದರು. ಇನ್ನು ಉತ್ತರ ಕರ್ನಾಟಕದಲ್ಲಿ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ಮನಸು ಮಾಡಿದ್ರೆ ಲಿಂಗಾಯತ ಸಿಎಂ ಆಗಬಹುದು ಅಂತಾ ಮಾಧ್ಯಮಗಳ ಪ್ರಶ್ನೆಗೆ, 'ಯಾರೂ ಕೂಡ ಮೂಕ ಪ್ರೇಕ್ಷಕರಲ್ಲ. ಒಕ್ಕಲಿಗ ಇರಬಹುದು, ಲಿಂಗಾಯತ ಸಮುದಾಯ ಇರಬಹುದು. ಮುಸಲ್ಮಾನರು ಏಕೆ ಸಿಎಂ ಆಗಬಾರದು, ದಲಿತರು ಏಕೆ ಆಗಬಾರದು ಎಂದು ಎಂ.ಬಿ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ರಾಹುಲ್ ಗಾಂಧಿ 150 ಸೀಟ್ ಗೆಲ್ಲುವ ಟಾರ್ಗೆಟ್ ನೀಡಿದ್ದಾರಂತೆ: ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಸಿಎಂ ಹುದ್ದೆಗೆ ಪೈಪೋಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, 'ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ ಸ್ಪಷ್ಟವಾಗಿ ಹೇಳುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿ ಯಾವಾಗಲೂ ನಡೆದು ಬಂದ ಪದ್ಧತಿ ಇದೆ. ನಮ್ಮ ಸ್ವಂತ ಬಲದಿಂದ 130 ರಿಂದ 140 ಸೀಟ್ ಪಡೀತೆವೆ. ರಾಹುಲ್ ಗಾಂಧಿಯವರು 150 ಸೀಟ್ ಟಾರ್ಗೆಟ್ ಕೊಟ್ಟಿದ್ದಾರೆ. ಬಳಿಕ ಶಾಸಕಾಂಗ ಸಭೆಯಲ್ಲಿ ನಿರ್ಧಾರ ಕೈಗೊಂಡು ಸಿಎಂ ಯಾರಾಗಬೇಕೆಂದು ನಿರ್ಧಾರ. ಯಾರನ್ನ ಪ್ರಾಜೆಕ್ಟ್ ಮಾಡಬೇಕಾಗಿದೆ ಕಾಂಗ್ರೆಸ್ ನಿರ್ಧಾರ ಮಾಡುತ್ತೆ' ಎಂದರು.
ಇನ್ನು ಸಿದ್ದರಾಮೋತ್ಸವ ಅವರೆಲ್ಲರ ಅಭಿಮಾನಿಗಳ ಒತ್ತಾಯ ಮೇರೆಗೆ ಮಾಡುತ್ತಿದ್ದು, ಸಿದ್ದರಾಮಯ್ಯ ಗ್ರಾಮೀಣ ಭಾಗದಿಂದ ಬಂದು ಹಣಕಾಸು ಸಚಿವರಾಗಿ ಸಿಎಂ ಆದವರು. ಅನೇಕ ಜನರಿಗೆ ಒಳ್ಳೆಯ ಯೋಜನೆ ಕೊಟ್ಟಿದ್ದಾರೆ, ಪ್ರಶ್ನಾತೀತ ನಾಯಕರು. ಅವರಿಗೆ ಗೌರವ ಸಲ್ಲಿಸಬೇಕು ಎಂದು ಜನ್ಮದಿನ ಆಚರಣೆ ಅದರಲ್ಲಿ ಯಾವುದೇ ರಾಜಕೀಯ ಇಲ್ಲ' ಎಂದರು. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಆಕಾಂಕ್ಷಿ ಬಗ್ಗೆ ಒಕ್ಕಲಿಗ ಸಮಾವೇಶದಲ್ಲಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಸಿಎಂ ಯಾರಾಗಬೇಕೆಂದು ಆಯ್ಕೆಯಾದ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧಾರ ಮಾಡುತ್ತೆ.
ಹೀಗಾಗಿ ನಾನು ಬಯಸಿದರೂ ಆಗಲ್ಲ, ಮತ್ತೊಬ್ಬರೂ ಬಯಿಸಿದರೂ ಆಗಲ್ಲ. ಯಾರು ಸಿಎಂ ಆಗ್ತಾರೆ ಅಂತಾ ಕಾಂಗ್ರೆಸ್ ಪಕ್ಷ ನಿರ್ಧಾರ ಮಾಡುತ್ತೆ. ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾವೇಶದಲ್ಲಿ ಒಕ್ಕಲಿಗ ಸಮಾಜ ಕ್ರೋಢಿಕರಿಸಲು ಒಂದು ಅವಕಾಶ ಬರಬಹುದು ಎಂದಿದ್ದಾರೆ. ನಾವು ಅನೇಕ ಕಡೆ ಹೇಳ್ತೇವೆ. ದಿವಂಗತ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಆಗಿದ್ದಾಗ 176 ಸೀಟ್ ಬಂದಿದ್ವು. ತದನಂತರ ಕಾಲಾಂತರದಿಂದ ಲಿಂಗಾಯತರು ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಹಿನ್ನಡೆ ಆಗಿದೆ. ಲಿಂಗಾಯತರು ಸಹಜವಾಗಿ ಕಾಂಗ್ರೆಸ್ ಪಕ್ಷಕ್ಕೆ ಕೇಳ್ತಾರೆ.
ಬೆಳಗಾವಿ: ಕಾಡುಕೋಣ ಹಿಡಿಯಲು ಹೋಗಿ ಕೈ ಮೂಳೆ ಕಟ್: ತುತ್ತು ಅನ್ನಕ್ಕಾಗಿ ಅರಣ್ಯ ಇಲಾಖೆ ನೌಕರ ಪರದಾಟ
ದಲಿತ ಸಮಾಜದವರೂ ನಮ್ಮವರ‌್ಯಾರು ಸಿಎಂ ಆಗಿಲ್ಲ ಅಂತಾ ಕೇಳ್ತಾರೆ. ನಾಯಕ ಸಮಾಜದವರು, ಒಕ್ಕಲಿಗ ಸಮಾಜದವರು ಕೇಳ್ತಾರೆ. ಇದನ್ನ ದೊಡ್ಡದು ಮಾಡಬೇಕಿಲ್ಲ. ಎಲ್ಲ ಸಮುದಾಯ, ಎಲ್ಲಾ ವ್ಯಕ್ತಿಗಳಿಗೆ ಆಸೆ ಇರುತ್ತೆ, ಆದ್ರೆ ಕಾಂಗ್ರೆಸ್ ಪಕ್ಷ ನಿರ್ಧಾರ ಮಾಡುತ್ತೆ. ನಾನು ಯಾವಾಗಲೂ ಒಂದು ಮೆಂಟೇನ್ ಮಾಡಿಕೊಂಡು ಬಂದಿದ್ದೇನೆ. ನಾನು ಬಯಸಿದ್ರೆ ಮುಖ್ಯಮಂತ್ರಿ, ನಾಯಕ ಆಗಲ್ಲ. ಜನ ಬಯಸಬೇಕು ನಾವು ನಾಯಕರಾಗುತ್ತೇವೆ. ಪಕ್ಷ ಬಯಸಬೇಕು, ಶಾಸಕರು ಬಯಸಬೇಕು, ಹೈಕಮಾಂಡ್ ಬಯಸಬೇಕು ಆಗ ಸಿಎಂ ಆಗ್ತಾರೆ. ಹೀಗಾಗಿ ನಿಮ್ಮ ಟ್ರ್ಯಾಪ್‌ನಲ್ಲಿ ನಾವು ಬೀಳಲ್ಲ' ಎಂದರು.