Udupi: ನರೇಂದ್ರ ಮೋದಿ ಸರ್ಕಾರದ ಹಣ ಸಿದ್ದರಾಮಯ್ಯರದ್ದು ಹೆಸರು: ಶೋಭಾ ಕೆರಂದ್ಲಾಜೆ ಕಿಡಿ

By Sathish Kumar KHFirst Published Dec 24, 2022, 11:13 PM IST
Highlights

ಕೇಂದ್ರ ಸರಕಾರದ ಹಣದಲ್ಲಿ ನೀಡಿದ ಅಕ್ಕಿಯನ್ನು ರಾಜ್ಯದಲ್ಲಿ ನೀಡಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದ ಸರಕಾರದ ಹಣ, ಹೆಸರು ಸಿದ್ದರಾಮಯ್ಯರದ್ದು. ಇದು ಕಳೆದ ಬಾರಿ ಸಿದ್ದರಾಮಯ್ಯ ಮಾಡಿದ ಸಾಧನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

ಉಡುಪಿ (ಡಿ.24): ಸಿದ್ದರಾಮಯ್ಯನವರು ತಮ್ಮ ಸ್ವಂತ ಕಿಸೆಯಿಂದ ಅಕ್ಕಿಯನ್ನು ಖರೀದಿಸಿ, ಉಚಿತವಾಗಿ ನೀಡಿಲ್ಲ. ಕೇಂದ್ರ ಸರಕಾರದ ಹಣದಲ್ಲಿ ನೀಡಿದ ಅಕ್ಕಿಯನ್ನು ರಾಜ್ಯದಲ್ಲಿ ನೀಡಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದ ಸರಕಾರದ ಹಣ, ಹೆಸರು ಸಿದ್ದರಾಮಯ್ಯರದ್ದು. ಇದು ಕಳೆದ ಬಾರಿ ಸಿದ್ದರಾಮಯ್ಯ ಮಾಡಿದ ಸಾಧನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು. ಅವರು ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆದರೆ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ತಮ್ಮ ಮನೊಲಾಭಿಷೆಯನ್ನು ವ್ಯಕ್ತಪಡಿಸಿರುವ ಕುರಿತಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಕೇಂದ್ರ ಸರಕಾರ ದೇಶದ ಎಲ್ಲಾ ಪಡಿತರದಾರರಿಗೆ ಅಕ್ಕಿಯನ್ನು ನೀಡುತ್ತಿದೆ. ದೇಶದ 84 ಕೋಟಿ ಜನರಿಗೆ  ಕೇಂದ್ರ ಅಕ್ಕಿ ನೀಡುತ್ತಿದೆ. ಕೆಜಿಗೆ 36 ರುಪಾಯಿಗೆ ಅಕ್ಕಿಯನ್ನು ಖರೀದಿಸಿ 3 ರುಪಾಯಿಗೆ ರಾಜ್ಯಕ್ಕೆ ಕೊಡುತ್ತಿದೆ. ಕೇಂದ್ರ ಸರಕಾರ ವರ್ಷಕ್ಕೆ 1 ಲಕ್ಷ 60 ಸಾವಿರ ಕೋಟಿ ರೂ ಖರ್ಚು ಮಾಡುತ್ತದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ  1,84,000 ಕೋಟಿ ರೂ.ಯಲ್ಲಿ ಬೇಳೆ, ಗೋಧಿ ಕೊಡಲು ಹಣ ವಿನಿಯೋಗ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಜನರಿಗೆ ಮೋಸ ಮಾಡಲಾಗಲ್ಲ:  ಕಳದೆ ಬಾರಿಯಂತೆ ಜನರಿಗೆ ಮೋಸ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾದಾಗ ಜಾತಿ ವಾದ ಮಾಡಿ ಲಿಂಗಾಯಿತ ಧರ್ಮ ಒಡೆದರು. ಎಲ್ಲೂ ಹೆಸರಿಲ್ಲದ ಟಿಪ್ಪು ಹೆಸರು ಜಾರಿಗೆ ತಂದಿದ್ದು ಸಿದ್ದರಾಮಯ್ಯ, ಮುಸಲ್ಮಾನರಿಗೆ 10000 ಕೋಟಿ ರೂಪಾಯಿ ಹೆಚ್ಚುವರಿ ಕಾಯ್ದಿರಿಸುವುದಾಗಿ ಘೋಷಣೆ ಮಾಡಿದ್ದಾರೆ.ನೀವು ಯಾರಿಗೆ ಬೇಕಾದರೂ ದುಡ್ಡು ಕೊಡಿ ಆದರೆ ಹಣ ಸರ್ಕಾರದ ಬೊಕ್ಕಸದ್ದು ಎಂದು ನೆನಪಿರಲಿ, ನ್ಯಾಯಯುತವಾಗಿ ಎಲ್ಲಾ ಜಾತಿಯ ಬಡವರಿಗೆ ಸರ್ಕಾರದ ಹಣ ಸಲ್ಲಬೇಕು. ಒಂದು ಧರ್ಮಕ್ಕೆ ಹಣ ಘೋಷಣೆ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯನ ಬಗ್ಗೆ ರಾಜ್ಯದ ಜನಕ್ಕೆ ನನಗಿಂತ ಹೆಚ್ಚು ಗೊತ್ತಿದೆ ಎಂದರು.

ಕೇಂದ್ರದಿಂದ 28 ತಿಂಗಳು ಉಚಿತ ಆಹಾರ ಧಾನ್ಯ ವಿತರಣೆ: ಸಚಿವೆ ಶೋಭಾ ಕರಂದ್ಲಾಜೆ

ದೇಶದ ನಾಲ್ಕೈದು ರಾಜ್ಯದಲ್ಲಿ ರೂಪಾಂತರಿ ತಳಿ ಪತ್ತೆ: ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಮತ್ತೊಮ್ಮೆ ಕೋವಿಡ್ ಬಂದಿದೆ. ಒಂದು ವರದಿಯ ಪ್ರಕಾರ ಚೀನಾದಲ್ಲಿ ಪ್ರತಿ ದಿನ ಐದರಿಂದ ಹತ್ತು ಸಾವಿರ ಜನ ಸಾಯುತ್ತಿದ್ದಾರೆ. ವೈದ್ಯಕೀಯ ನೆರವು, ಆಹಾರ, ಔಷಧಿ ಸಿಗುತ್ತಿಲ್ಲ ಎಂದು ಮಾಹಿತಿ ಇದೆ. ಚೀನಾದಲ್ಲಿ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಸರ್ಕಾರದ ನಿಯಂತ್ರಣದಲ್ಲಿದೆ. ಈ ಕಾರಣದಿಂದ ಸತ್ಯಅಂಶ ಹೊರ ಬರುತ್ತಿಲ್ಲ. ಇಡೀ ಪ್ರಪಂಚಕ್ಕೆ ಕೊರೋನ ಕೊಟ್ಟಿರುವುದು ಚೀನಾ. ಭಾರತಕ್ಕೂ ಚೀನಾದಿಂದ ಪ್ರವಾಸಿಗರು ಬರುತ್ತಿದ್ದಾರೆ. ಭಾರತದ ನಾಲ್ಕೈದು ಮಂದಿಯಲ್ಲಿ ಈಗಾಗಲೇ ರೂಪಾಂತರ ವೈರಸ್ ಪತ್ತೆಯಾಗಿದೆ. ಪ್ರಧಾನಿ ನೇತೃತ್ವದಲ್ಲಿ ಹಲವು ಹಂತದ ಸಭೆ ಮಾಡಲಾಗಿದೆ ಎಂದರು.

ಕೋವಿಡ್‌ ವ್ಯಾಕ್ಸಿನ್‌ ದೇಶವನ್ನು ಕಾಪಾಡಿದೆ:  ದೇಶದ ವೈದ್ಯಕೀಯ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಹೇಳಿದೆ. ಭಾರತ ದೇಶದಲ್ಲಿ ಆತಂಕ ಪಡುವ ವಿಚಾರ ಇಲ್ಲ, ಜಾಗೃತರಾಗಿರಬೇಕು, ಮಾಸ್ಕ್ ಧರಿಸಬೇಕು, ನಮ್ಮ ವ್ಯಾಕ್ಸಿನ್ ದೇಶವನ್ನು ರಕ್ಷಿಸಿದೆ. ಎಲ್ಲಾ ಭಾರತೀಯರಿಗೂ ಉಚಿತ ವ್ಯಾಕ್ಸಿನ್ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಿತ್ತು. ಈಗ ಎಲ್ಲರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು, ಮಾಸ್ಕ್ ಮತ್ತು ವ್ಯಾಕ್ಸೀನ್ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಇರುವ ಪರಿಹಾರ. ನಮ್ಮ ಮಕ್ಕಳ ಬಗ್ಗೆ ನಾವು ಜಾಗೃತಿ ವಹಿಸಬೇಕು, ನಮ್ಮ ದೇಶದಲ್ಲಿ ಕೊಟ್ಟ ವ್ಯಾಕ್ಸಿನ್ ಎಲ್ಲಾ ವೈರಸ್ಸನ್ನು ತಡೆಗಟ್ಟುವ ವಿಶ್ವಾಸವಿದೆ. ಕೋವಿಡ್ ಎರಡು ಮತ್ತು ಮೂರನೇ ಅಲೆಯಲ್ಲಿ ಆತಂಕದಿಂದ ಹೆಚ್ಚು ಜನ ಮೃತಪಟ್ಟಿದ್ದರು. ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ, ಕಿಡ್ನಿ ಸಮಸ್ಯೆ ಉಳ್ಳವರು ಹೆಚ್ಚು ಜನರು ಮರಣ ಹೊಂದಿದರು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಜಾಗೃತೆವಹಿಸಬೇಕು ಎಂದು ಕರೆ ನೀಡಿದರು. 

ಸಿಎಂ ಆಗುವ ಸಿದ್ದರಾಮಯ್ಯ ಕನಸು ಭಗ್ನ ಆಗುತ್ತೆ: ಸಚಿವೆ ಶೋಭಾ ಕರಂದ್ಲಾಜೆ

ಕಾಂಗ್ರೆಸ್‌ ಇಮೇಜ್‌ ಬಗ್ಗೆ ಸಂಶಯ: ಭಾರತ್ ಜೋಡೋ ಯಾತ್ರೆ ಇವತ್ತು ಶುರುವಾಗಿದ್ದಲ್ಲ, ಕೇರಳದಿಂದ ಆರಂಭವಾಗಿ ತಿಂಗಳುಗಟ್ಟಲೆ ಕಳೆದಿದೆ. ಭಾರತ ಜೋಡೋ ಯಾತ್ರೆ ತಡೆಗಟ್ಟುವ ಕೆಲಸ ಯಾರು ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಕೂಡ ಕಾಂಗ್ರೆಸಿಗೆ ಎಲ್ಲಾ ರೀತಿಯ ರಕ್ಷಣೆ ನೀಡಲಾಗಿತ್ತು. ದಸರಾ ಸಂದರ್ಭದಲ್ಲಿ ಮೈಸೂರಿಗೆ ಯಾತ್ರೆ ಬಂದರೂ ಯಾವುದೇ ಅಡ್ಡಿಯಾಗಲಿಲ್ಲ. ಭಾರತ ಜೋಡೋ ಯಾತ್ರೆ ಬಗ್ಗೆ ಕಾಂಗ್ರೆಸ್ಸಿಗೆ ಸಂಶಯವಿದೆ. ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಇಮೇಜ್ ಎಷ್ಟು ಬದಲಾಗಿದೆ ಎಂಬ ಬಗ್ಗೆ ರಾಹುಲ್ ಗಾಂಧಿಗೆ ಸಂಶಯವಿರಬಹುದು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಆತಂಕದಲ್ಲಿದ್ದಾರೆ ಎಂದು ವ್ಯಂಗ್ಯ ವಾಡಿದರು.

ನಾಗರಿಕರಿಗೆ ಕೋವಿಡ್ ಸಂದರ್ಭದಲ್ಲಿ ಅನುಭವಿಸಿದ ಸಂಕಷ್ಟ ತಿಳಿದಿದೆ. ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಹಿಮಾಚಲ ಪ್ರದೇಶ ಸಿಎಂ ಗೆ ಕೋವಿಡ್ ಪಾಸಿಟಿವ್ ಬಂದಿತ್ತು. ದೇಶದ ಹಿತದೃಷ್ಟದಿಂದ ಕಾಂಗ್ರೆಸ್ ಜಾಗೃತಿ ವಹಿಸಬೇಕು, ಕಾಂಗ್ರೆಸ್ ಪಕ್ಷದ ನಾಯಕರಿಗೆ ನಾವ್ಯಾರು ಬುದ್ಧಿ ಹೇಳುವ ಸ್ಥಿತಿಯಲ್ಲಿ ಇಲ್ಲ ಎಂದರು.

click me!