ನಮ್ಮ ಗುರಿ ಒಂದೇ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು: ಸಿಟಿ ರವಿ

By Ravi JanekalFirst Published Mar 7, 2024, 8:50 PM IST
Highlights

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾರಾರು ಹೇಗೆಲ್ಲಾ ನಡೆದುಕೊಂಡರು ಎನ್ನುವ ಪ್ರಶ್ನೆಗಳಿಗೆ ಲೋಕಸಭೆ ಚುನಾವಣೆ ನಂತರ ಉತ್ತರ ಕೊಡಲಿಕ್ಕಿದೆ. ಬಹಳ ದಿನ ಅದನ್ನು ಹೊಟ್ಟೆಯಲ್ಲೇ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಿಟಿ ರವಿ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.7): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾರಾರು ಹೇಗೆಲ್ಲಾ ನಡೆದುಕೊಂಡರು ಎನ್ನುವ ಪ್ರಶ್ನೆಗಳಿಗೆ ಲೋಕಸಭೆ ಚುನಾವಣೆ ನಂತರ ಉತ್ತರ ಕೊಡಲಿಕ್ಕಿದೆ. ಬಹಳ ದಿನ ಅದನ್ನು ಹೊಟ್ಟೆಯಲ್ಲೇ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಿಟಿ ರವಿ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.

ಚುನಾವಣೆಯಲ್ಲಿ ಸೋತ ಬಳಿಕ ಮಾಧ್ಯಮಗಳೆದುರು ಮೊದಲ ಬಾರಿಗೆ ವಿಷಾದದ ಪ್ರತಿಕ್ರಿಯೆ ನೀಡಿದ ರವಿ, ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡುವುದಿದ್ದರೂ ಅದು ಲೋಕಸಭೆ ಚುನಾವಣೆ(Loksabha election 2024) ನಂತರವೇ, ಈಗ ರಾಷ್ಟ್ರ ಹಿತದ ದೃಷ್ಟಿಯಿಂದ ಬಹಳ ವಿಷಯವನ್ನು ನುಂಗಿಕೊಂಡಿದ್ದೇನೆ. ಸಮಯ ಸಂದರ್ಭ ಬಂದಾಗ ಹೇಳುತ್ತೇನೆ ಎಂದರು. 

ಹಿಂದೂ ಭಾವನೆಯಲ್ಲಿ ಜನ ಮತ ಹಾಕಬಾರದು ಎಂಬ ರಾಜಕೀಯ ಸಂಚಿನ ಭಾಗವೇ ಜಾತಿ ಗಣತಿ: ಸಿಟಿ ರವಿ

ನಾಳೆ ಅಥವಾ ನಾಡಿದ್ದು ಲೋಕಸಭೆ ಅಭ್ಯರ್ಥಿಗಳ ಇನ್ನೊಂದು ಪಟ್ಟಿ ಬಿಡುಗಡೆ ಆಗಬಹುದು. ನಮ್ಮ ಗುರಿ ಒಂದೇ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ವೈಯಕ್ತಿಕ ರಾಜಕಾರಣಕ್ಕಿಂತ ಪಕ್ಷ ಹಾಗೂ ರಾಷ್ಟ್ರ ಹಿತದ ರಾಜಕಾರಣದ ಮೇಲೆ ನಂಬಿಕೆ ಇಟ್ಟಿದ್ದೇವೆ. ಸ್ಥಳೀಯ ಅಭಿಪ್ರಾಯ ಎಲ್ಲವನ್ನೂ ಪಡೆದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ನಿರ್ಣಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.

ಪಕ್ಷದ ಕಾರ್ಯಕರ್ತ, ಅಣತಿ ಮೀರುವುದಿಲ್ಲ : 

ನಾನು ಪಕ್ಷದ ಕಾರ್ಯಕರ್ತ, ಪಕ್ಷದ ಅಣತಿಯನ್ನು ಮೀರಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯಗಳನ್ನ ವರಿಷ್ಠರ ಜೊತೆ ಚರ್ಚಿಸುತ್ತೇನೆ. ಏನಾದರೂ ಹೇಳುವುದಿದ್ದರೆ, ಕೇಳುವುದಿದ್ದರೆ ವರಿಷ್ಠರ ಮುಂದೆಯೇ, ಈಗ ನಮ್ಮ ಗುರಿ ಒಂದೇ ಅದು ಮೋದಿ ಮತ್ತೊಮ್ಮೆ ಎಂದರು.

ನನಗೆ ರಾಜಾಶ್ರಯಕ್ಕಿಂತ ಜನರ ಆಶಯದ ಮೇಲೆ ವಿಶ್ವಾಸ ಜಾಸ್ತಿ. ನನ್ನ ಮನಸಿನೊಳಗೆ ಬಹಳ ಭಾವನೆಗಳಿವೆ. ಹೇಳಲಿಕ್ಕೆ ಬಹಳ ಇದೆ. ಆದರೆ ಈಗ ರಾಷ್ಟ್ರ ಹಿತದ ಕಾರಣಕ್ಕೆ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ. ಈ ಸದ್ಯಕ್ಕೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಕೆ 28 ಸ್ಥಾನವನ್ನು ಗೆಲ್ಲಬೇಕಿದೆ. ಅದಕ್ಕೇನು ಅಳಿಲು ಸೇವೆ ಸಲ್ಲಿಸಬೇಕು ಅದನ್ನು ಮಾಡುವುದಷ್ಟೇ ನಮ್ಮ ಕೆಲಸ ಎಂದರು.

 

ಕಾಡಾನೆ ದಾಳಿಗೆ ಸಾವನ್ನಪ್ಪಿದ ಕೇರಳ ವ್ಯಕ್ತಿಗೆ ಕೆಪಿಸಿಸಿಯಿಂದ 15 ಲಕ್ಷ ಪರಿಹಾರ ಕೊಡಿ: ಸಿಟಿ ರವಿ ಆಕ್ರೋಶ

ಹಳ್ಳಿಗಳಲ್ಲಿ ನೀರಿಲ್ಲ ಇದೆಲ್ಲವೂ ಅವರ ಗ್ಯಾರಂಟಿ ಭಾಗವೇ : 

ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಆದಿಯಾಗಿ ಎಲ್ಲರೂ ಗ್ಯಾರಂಟಿ ಸಮಾವೇಶ(Guarantee convention) ದ ಹೆಸರಲ್ಲಿ ಸರ್ಕಾರದ ಹಣ ಖರ್ಚು ಮಾಡಿ ನಮ್ಮ ಬಗ್ಗೆಯೇ ಜಪ ಮಾಡುತ್ತಿದ್ದಾರೆ. ಸಮಾವೇಶದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ(Narendra Modi), ಬಿಜೆಪಿ ಹಾಗೂ ನನ್ನಬಗ್ಗೆ ಜಪ ಮಾಡಿದ್ದೇ ಹೆಚ್ಚು. ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದು ಕಡಿಮೆ. ಈಗ ಪವರ್ ಕಟ್ ಆಗುತ್ತಿದೆ. ಕುಡಿಯಲು ಹಳ್ಳಿಗಳಲ್ಲಿ ನೀರಿಲ್ಲ ಇದೆಲ್ಲವೂ ಅವರ ಗ್ಯಾರಂಟಿ ಭಾಗವೇ? ಮುಖ್ಯಮಂತ್ರಿಗಳೇ ಟ್ಯಾಂಕರ್‌ನಲ್ಲಿ ನೀರು ಹೊಡೆಸಿಕೊಳ್ಳುವ ಸ್ಥಿತಿ ಬಂದಿದೆ ಎಂದರೆ ಇದು ನಾಡಿನ ಜನರ ದೌರ್ಭಾಗ್ಯ. ಇದು ಅಸಮರ್ಪಕ ಮತ್ತು ಅಸಹಾಯಕ ಸರ್ಕಾರ. ಇವರಿಂದ ಜನರಿಗೆ ಕುಡಿಯುವ ನೀರು, ಕರೆಂಟ್ ಕೊಡಲು ಸಾಧ್ಯವಿಲ್ಲ. ಹಳ್ಳಿ ಹಳ್ಳಿಗಳಲ್ಲಿ ಜನ ಶಾಪ ಹಾಕುತ್ತಿದ್ದಾರೆ. ಕೇಂದ್ರ ಕೊಡುವ 5 ಕೆಜಿ ಅಕ್ಕಿಯನ್ನೂ ಕಡಿತಗೊಳಿಸಿದ್ದಾರೆ ರಾಜ್ಯಸರ್ಕಾರದ ವಿರುದ್ಧ ಕಿಡಿಕಾರಿದರು.

click me!