‘‘ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋಗ್ತೀವಿ; ಇದು ನಮ್ಮ, ಸತೀಶ್ ಜಾರಕಿಹೊಳಿ ಗುರಿ’’: Nalin Kumar Kateel

By BK Ashwin  |  First Published Sep 29, 2022, 11:59 AM IST

ಬೆಳಗಾವಿಯಲ್ಲಿ ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋಗ್ತೀವಿ ಎಂದು ನಳಿನ್ ಕುಮಾರ್ ಕಟೀಲ್‌ ಹೇಳಿದ್ದಾರೆ. ಈ ವೇಳೆ ಮಾತನಾಡುವ ಭರದಲ್ಲಿ ಬಾಲಚಂದ್ರ ಜಾರಕಿಹೊಳಿಯ ಬದಲಾಗಿ ಸತೀಶ್‌ ಜಾರಕಿಹೊಳಿ ಅವರ ಹೇಸರು ಹೇಳಿದ್ದು, ಇದು ನಮ್ಮ ಹಾಗೂ ಸತೀಶ್‌ ಜಾರಕಿಹೊಳಿ ಗುರಿ ಎಂದಿದ್ದಾರೆ. 



ಬೆಳಗಾವಿ( ಸೆಪ್ಟೆಂಬರ್ 29): ಬೆಳಗಾವಿಯಲ್ಲಿ ನಾವು ಎಲ್ಲರನ್ನೂ ಇಟ್ಟುಕೊಂಡು ಚುನಾವಣೆಗೆ ಹೋಗ್ತೀವಿ, ಸ್ಪಷ್ಟವಾಗಿ ಎದುರಿಸಿ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಇದು ನಮ್ಮ, ಸತೀಶ್ ಜಾರಕಿಹೊಳಿ ಗುರಿ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ. ಮಾತನಾಡುವ ಭರದಲ್ಲಿ ಬಾಲಚಂದ್ರ ಜಾರಕಿಹೊಳಿ ಬದಲಾಗಿ ಸತೀಶ್ ಜಾರಕಿಹೊಳಿ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ ನೀಡಿದ್ದಾರೆ. ಸತೀಶ್‌ ಜಾರಕಿಹೊಳಿ ನಾಯಕತ್ವದಲ್ಲಿ ಚುನಾವಣೆಗೆ ಹೋಗ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಳಿನ್ ಕುಮಾರ್ ಕಟೀಲ್‌, ನಿನ್ನೆಯೇ ಗೋಕಾಕ್‌ನಲ್ಲಿ ಇದಕ್ಕೆ ಉತ್ತರ ಕೊಟ್ಟಿರುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ, ಮಾತನಾಡುವ ಭರದಲ್ಲಿ ಬಿಜೆಪಿ ನಾಯಕ ಬಾಲಚಂದ್ರ ಜಾರಕಿಹೊಳಿಯವರ ಬದಲಾಗಿ ಕಾಂಗ್ರೆಸ್‌ ನಾಯಕ ಸತೀಶ್ ಜಾರಕಿಹೊಳಿ ಅವರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. 

ನಂತರ, ತಮ್ಮ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಸರಿ ಮಾಡಿಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ಬೈದು ಬೈದು ಅವರ ಹೆಸರು ಬಂತು ಎಂದೂ ನಳಿನ್‌ ಕುಮಾರ್‌ ಕಟೀಲ್‌ ತಮ್ಮ ಬಾಯಿ ತಪ್ಪಿನಿಂದ ಆಡಿದ ಮಾತನ್ನು ಸರಿ ಮಾಡಿಕೊಂಡಿದ್ದಾರೆ. ಬಳಿಕ, ನಮ್ಮದು ಮತ್ತು ಬಾಲಚಂದ್ರ ಜಾರಕಿಹೊಳಿ , ರಮೇಶ್ ಜಾರಕಿಹೊಳಿ ಗುರಿ ಒಂದೇ ಇದೆ. ಮುಂದಿನ ಚುನಾವಣೆಯಲ್ಲಿ ಬೆಳಗಾವಿಯಲ್ಲಿ18 ಸ್ಥಾನ ಗೆಲ್ಲುತ್ತೇವೆ. ಹಾಗೆ, ರಾಜ್ಯದಲ್ಲಿ 150 ಸ್ಥಾನ ಗೆಲ್ಲುವ ಗುರಿಯಿದೆ ಎಂದು ಬೆಳಗಾವಿಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ. 

Latest Videos

undefined

ಇದನ್ನು ಓದಿ: ದೇಶದಲ್ಲಿ ಮೊದಲು Congress ನಿಷೇಧಿಸಬೇಕು: ಬಿಜೆಪಿ ರಾಜ್ಯಾಧ್ಯಕ್ಷ Nalin Kumar Kateel

ರಮೇಶ್‌ ಜಾರಕಿಹೊಳಿ ಖಂಡಿತ ಮಂತ್ರಿ ಆಗ್ತಾರೆ: ಕಟೀಲ್‌ 
ಇನ್ನು, ಕಾಂಗ್ರೆಸ್‌ ನಾಯಕರಾದ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನ ರಾಜಕೀಯ ಸನ್ಯಾಸತ್ವ ಕೊಡಿಸುವ ಸವಾಲನ್ನ ರಮೇಶ್ ಜಾರಕಿಹೊಳಿ ಅವರು ತೆಗೆದುಕೊಂಡಿದ್ದಾರೆ. ನಾವು (ಬಿಜೆಪಿ) ಸಹ ತೆಗೆದುಕೊಂಡಿದ್ದೇವೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಬಳಿಕ, ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕಟೀಲ್‌, ಖಂಡಿತವಾಗಿಯೂ ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ. ಆದರೆ, ಯಾವಾಗ ಆಗ್ತಾರೆ ಅನ್ನೋದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು ಎನ್ನುವ ಮೂಲಕ ಮತ್ತೆ ರಮೇಶ್‌ ಜಾರಕಿಹೊಳಿ ಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ. 

ಅಲ್ಲದೆ, ಹಾಲಿ ಬಿಜೆಪಿ ಶಾಸಕರ‌‌ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವ ವಿಚಾರವಾಗಿಯೂ ಮಾತನಾಡಿದ ನಳಿನ್‌ ಕುಮಾರ್‌ ಕಟೀಲ್‌, ಹಾಲಿ ಶಾಸಕರನ್ನ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದರೆ ಅದು ಪಕ್ಷದ ಶಕ್ತಿಯೇ ಹೊರತು, ಹಾಲಿ ಶಾಸಕರನ್ನ ಬದಲಾಯಿಸುವ ಬಗ್ಗೆ ಯಾವುದೇ ಯೋಚನೆ, ಚರ್ಚೆ ನಮ್ಮ ಮುಂದಿಲ್ಲ ಎಂದೂ ಬೆಳಗಾವಿಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. 

ಇದನ್ನೂ ಓದಿ: ಸಿದ್ದರಾಮಯ್ಯ ಪೇಮೆಂಟ್‌ ಸಿಎಂ: ನಳಿನ್‌ ಕುಮಾರ್‌ ಕಟೀಲ್‌

ಜತೆಗೆ, ಆರ್‌ಎಸ್‌ ಬ್ಯಾನ್‌ ಮಾಡಬೇಕು ಎಂಬ ಕೂಗು ಎದ್ದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್‌ ಕಟೀಲ್‌, ದೇಶದಲ್ಲಿ ಮೊದಲು ಕಾಂಗ್ರೆಸ್‌ ಪಕ್ಷವನ್ನು ಬ್ಯಾನ್‌ ಮಾಡಬೇಕು ಎಂದಿದ್ದಾರೆ. ಹಾಗೆ, ಸಿಬಿಐ, ಐಟಿ ರೇಡ್‌ ಎಲ್ಲರಿಗೂ ಮಾಡ್ತಾರೆ, ಕಳ್ಳರು ಹೆದರುತ್ತಾರೆ, ತಪ್ಪು ಮಾಡಿಲ್ಲದಿದ್ದರೆ ಹೆರುವುದೇಕೆ ಎಂದೂ ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ ನೀಡಿದ್ದಾರೆ. 
 

click me!