Karnataka Politics: ಕಾಂಗ್ರೆಸ್ ಸಣ್ಣಪುಟ್ಟ ಘಟನೆ ದೊಡ್ಡದು ಮಾಡುತ್ತಿದೆ: ಕಟೀಲ್‌ ಆರೋಪ

By Govindaraj S  |  First Published Apr 20, 2022, 11:56 PM IST

ಜನರ ನಂಬಿಕೆ ಉಳಿಸಿಕೊಳ್ಳದೇ ನಾಡಿನಲ್ಲಿ ನಡೆಯುವ ಕೆಲವೊಂದು ಸಣ್ಣಪುಟ್ಟಘಟನೆಗಳನ್ನು ದೊಡ್ಡದು ಮಾಡಿ ಮುನ್ನೆಲೆಗೆ ಬರುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಆರೋಪಿಸಿದ್ದಾರೆ. 


ಬಳ್ಳಾರಿ (ಏ.20): ರಾಜ್ಯದಲ್ಲಿ (Karnataka) ನಡೆಯುವ ಸಣ್ಣಪುಟ್ಟಘಟನೆಗಳನ್ನು ದೊಡ್ಡದು ಮಾಡಿ ಗಲಭೆಗಳನ್ನು ಸೃಷ್ಟಿಸುವ ಕೃತ್ಯಕ್ಕೆ ಕಾಂಗ್ರೆಸ್‌ (Congress) ಕೈ ಹಾಕಿದೆ. ಜನಮಾನಸದಲ್ಲಿ ಕಾಂಗ್ರೆಸ್‌ ತಿರಸ್ಕೃತಗೊಂಡಿದ್ದು, ಜನರ ನಂಬಿಕೆ ಉಳಿಸಿಕೊಳ್ಳದೇ ನಾಡಿನಲ್ಲಿ ನಡೆಯುವ ಕೆಲವೊಂದು ಸಣ್ಣಪುಟ್ಟಘಟನೆಗಳನ್ನು ದೊಡ್ಡದು ಮಾಡಿ ಮುನ್ನೆಲೆಗೆ ಬರುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ (Nalin Kumar Kateel) ಆರೋಪಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರಲ್ಲದೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತ. ಇದು ಅವರಿಗೂ ಗೊತ್ತಾಗಿದೆ. 

ಶಾಶ್ವತವಾಗಿ ರಾಜಕೀಯವಾಗಿ ನಿರುದ್ಯೋಗಿಯಾಗುವ ಭೀತಿಯಿಂದ ಕಾಂಗ್ರೆಸ್‌ನವರು ನಾಡಿನಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ. ಆಡಳಿತದಲ್ಲಿ ಇಲ್ಲದಿರುವಾಗ ಅರಾಜಕತೆ ಸೃಷ್ಟಿಸುವ ಎಲ್ಲ ಕೃತ್ಯವನ್ನು ಕಾಂಗ್ರೆಸ್‌ ಮಾಡುತ್ತಾ ಬಂದಿದೆ. ಅದೇ ಪ್ರಕ್ರಿಯೆಯನ್ನು ಮುಂದುವರಿಸಿದೆ ಎಂದು ದೂರಿದರು. ದೇಶದಲ್ಲಿ ಅತಿ ಹೆಚ್ಚು ಕೋಮುಗಲಭೆಗಳು ನಡೆದಿರುವುದು ಕಾಂಗ್ರೆಸ್‌ ಅಧಿಕಾರ ಅವಧಿಯಲ್ಲಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹುಬ್ಬಳ್ಳಿ ಸೇರಿದಂತೆ ಅನೇಕ ಘಟನೆಗಳನ್ನು ರಾಜಕೀಯಗೊಳಿಸಲು ಕಾಂಗ್ರೆಸ್‌ ಮುಂದಾಗಿದೆ.

Tap to resize

Latest Videos

undefined

ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟ ಬಿಜೆಪಿ: ಕಲ್ಯಾಣ ಕರ್ನಾಟಕಕ್ಕೆ ಟಾರ್ಗೆಟ್‌ ಕೊಟ್ಟ ಕಟೀಲ್‌

ಹುಬ್ಬಳ್ಳಿ ಘಟನೆಯಲ್ಲಿ ಒಂದು ಸಾವಿರ ಜನರನ್ನು ಒಬ್ಬ ವ್ಯಕ್ತಿ ಹೇಗೆ ಸೇರಿಸಲು ಸಾಧ್ಯ? ಅದು ಒಂದು ಸಮುದಾಯದಿಂದ ಮಾತ್ರ ಸಾಧ್ಯವಿದೆ. ಹುಬ್ಬಳ್ಳಿಯ ಘಟನೆಯ ಹಿಂದೆ ಯಾರೇ ಇರಲಿ. ಖಂಡಿತ ಕಾನೂನು ಪ್ರಕಾರ ಕ್ರಮವಾಗುತ್ತದೆ. ಮುಂದಕ್ಕೆ ಇಂತಹ ಘಟನೆಗಳಾದರೆ ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ತೆಗೆದುಕೊಳ್ಳುವಂತೆ ಆಸ್ತಿಪಾಸ್ತಿ ಹಾನಿ ಮಾಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಗಟ್ಟಿತೀರ್ಮಾನವನ್ನು ನಮ್ಮ ಸರ್ಕಾರ ಸಹ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುತ್ತದೆ. ಅದು ಯಾವುದೇ ಸಮುದಾಯವಾಗಿರಲಿ. ಕೋಮುಗಲಭೆ ಸೃಷ್ಟಿಸುವವರ ವಿರುದ್ಧ ಕಠೋರವಾದ ಶಿಸ್ತುಕ್ರಮ ಆಗಿಯೇ ಆಗುತ್ತದೆ. ಕೋಮುಗಲಭೆ ಸೃಷ್ಟಿಸುವ ಹಾಗೂ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವವರು ಯಾರೇ ಆಗಲಿ ಅವರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಕಟೀಲ್‌ ಸ್ಪಷ್ಟಪಡಿಸಿದರು.

ಯಾವುದೋ ಸಣ್ಣಪುಟ್ಟಘಟನೆಗಳಾದಾಗ ಸರ್ಕಾರದ ವೈಫಲ್ಯ ಎನ್ನಲು ಬರುವುದಿಲ್ಲ. ಟಿಪ್ಪು ಜಯಂತಿ ವಿಚಾರದಲ್ಲಿ, ಕಾವೇರಿ ವಿಚಾರದಲ್ಲಿ ರಾಜ್ಯದಲ್ಲಿ ಗಲಾಟೆಗಳಾಗಿವೆ. ಹಾಗಂತ ಸರ್ಕಾರದ ವೈಫಲ್ಯ ಎನ್ನಲು ಬರುತ್ತದೆಯೇ? ಚುನಾವಣೆ ವರ್ಷವಾಗಿರುವುದರಿಂದ ಕಾಂಗ್ರೆಸ್‌ನವರು ಅರಾಜಕತೆ ಸೃಷ್ಟಿಮಾಡಲು ಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ನಾವು ಗಟ್ಟಿಯಾಗಿದ್ದೇವೆ ಎಂದು ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿಯ ವೇಗ ನೋಡಿ ಕಾಂಗ್ರೆಸ್‌ಗೆ ಸಹಿಸಿಕೊಳ್ಳಲಾಗುತ್ತಿಲ್ಲ. ನಾವು ರಾಜ್ಯದ ಅಭಿವೃದ್ಧಿಯ ಕಡೆ ಗಮನ ಹರಿಸುವುದು, 

Karnataka Politics: ಸಿದ್ದರಾಮಯ್ಯ ನರಹಂತಕ ಹುಲಿ: ನಳೀನ್‌ ಕುಮಾರ್‌ ಕಟೀಲ್‌ ಟೀಕೆ

ಎಲ್ಲ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ಮುಟ್ಟಿಸುವ ಕೆಲಸದ ಕಡೆ ಆದ್ಯತೆ ನೀಡಿದ್ದೇವೆ. ಎಲ್ಲ ಜಿಲ್ಲೆಗಳಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪಿಸುವುದು ಸೇರಿದಂತೆ ಜನಸಾಮಾನ್ಯರಿಗೆ ಬೇಕಾದ ಯೋಜನೆಗಳನ್ನು ರೂಪಿಸುವತ್ತ ಸರ್ಕಾರ ಗಮನ ಹರಿಸಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾವು ಸಂಘಟನಾ ಕೆಲಸ ಶುರು ಮಾಡಿದ್ದೇವೆ. ಈ ಹಿನ್ನಲೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಕ್ಷೇತ್ರ ಅಧ್ಯಯನ ಮಾಡುತ್ತಿದ್ದೇವೆ. ಬರುವ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ನಾವು ಕೈಗೊಳ್ಳಬೇಕಾದ ಕ್ರಮಗಳೇನು? ಸಂಘಟನೆ ಹೇಗಿದೆ? ಏನಾಗಬೇಕು ಎಂಬುದರ ಕಡೆ ಗಮನ ಹರಿಸುತ್ತಿದ್ದೇವೆ ಎಂದು ತಿಳಿಸಿದರು.

click me!