Karnataka Politics: ಮೋದಿ, ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

By Govindaraj S  |  First Published Apr 20, 2022, 9:16 PM IST

ಆಧಾರ ರಹಿತವಾಗಿ ನನ್ನ ಸರ್ಕಾರವನ್ನು ಅಂದು ಪ್ರಧಾನಿ ನರೇಂದ್ರ ಮೋದಿ 10% ಕಮಿಷನ್‌ ಸರ್ಕಾರ ಎಂದು ಟೀಕಿಸಿದ್ದರು. ಆದರೆ, ಈಗ ಈ ಬಿಜೆಪಿ ಸರ್ಕಾರ 40% ಕಮಿಷನ್‌ ಕೇಳುತ್ತಿದೆ ಎಂದು ಗುತ್ತಿಗೆದಾರರ ಸಂಘವೇ ಪ್ರಧಾನಿಗೆ 8 ತಿಂಗಳ ಹಿಂದೆ ಪತ್ರ ಬರೆದಿದೆ.


ಚಾಮರಾಜನಗರ (ಏ.20): ಆಧಾರ ರಹಿತವಾಗಿ ನನ್ನ ಸರ್ಕಾರವನ್ನು ಅಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) 10% ಕಮಿಷನ್‌ ಸರ್ಕಾರ ಎಂದು ಟೀಕಿಸಿದ್ದರು. ಆದರೆ, ಈಗ ಈ ಬಿಜೆಪಿ ಸರ್ಕಾರ (BJP Govt) 40% ಕಮಿಷನ್‌ ಕೇಳುತ್ತಿದೆ ಎಂದು ಗುತ್ತಿಗೆದಾರರ ಸಂಘವೇ ಪ್ರಧಾನಿಗೆ 8 ತಿಂಗಳ ಹಿಂದೆ ಪತ್ರ ಬರೆದಿದೆ, ನಾನು ತಿನ್ನಲ್ಲ, ತಿನ್ನಲೂ ಬಿಡಲ್ಲ ಎನ್ನುವ ನಿಮಗೆ ತಾಕತ್‌ ಇದ್ದರೇ 40% ಸರ್ಕಾರದ ವಿರುದ್ಧ ತನಿಖೆ ಮಾಡಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸವಾಲು ಹಾಕಿದರು. 

ಬೆಲೆ ಏರಿಕೆ, ರೈತ ವಿರೋಧಿ ಆಡಳಿತ ಈಶ್ವರಪ್ಪ (KS Eshwarappa) ಬಂಧನ ಆಗದಿರುವುದನ್ನು ಖಂಡಿಸಿ ನೇತೃತ್ವದಲ್ಲಿ ಕೈ ಪಡೆ ಬೃಹತ್‌ ಪ್ರತಿಭಟನೆ ನಡೆಸಿದ ಬಳಿಕ ಮಾರಿಗುಡಿ ಸಮೀಪ ಮಂಗಳವಾರ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಎಲ್ಲಾ ಏಜೆನ್ಸಿಗಳು ಅವರ ಬಳಿಯೇ ಇದೆಯಲ್ಲಾ ಏಕೆ ತನಿಖೆ ನಡೆಸುತ್ತಿಲ್ಲ ಎಂದು ಕಿಡಿ ಕಾರಿದರು. ಸ್ವತಂತ್ರ ಭಾರತದ ಇದುವರೆಗಿನ ಪ್ರಧಾನ ಮಂತ್ರಿಗಳಲ್ಲಿ ಮೋದಿ ಅವರಷ್ಟುಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ, ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎನ್ನುವ ಪ್ರಧಾನಿ ರಸಗೊಬ್ಬರಗಳ ನಿರಂತರ ಬೆಲೆ ಏರಿಕೆ ಮೂಲಕ ಅನ್ನದಾತರಿಂದಲೂ ಸಾವಿರಾರು ಕೋಟಿ ರು. ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿದರು.

Tap to resize

Latest Videos

undefined

Karnataka Politics: ಬಿಜೆಪಿ ಜತೆ ಸೇರಲ್ಲವೆಂದು ತಂದೆ ಮೇಲೆ ಎಚ್ಡಿಕೆ ಆಣೆ ಮಾಡಲಿ: ಸಿದ್ದು

ರಾಜ್ಯದಲ್ಲಿ 15 ಲಕ್ಷ ಟನ್‌ ರಾಗಿ ಬೆಳೆಯಲಾಗಿದೆ. ಆದರೆ, ಸರ್ಕಾರ ಬೆಂಬಲ ಬೆಲೆ ಮೂಲಕ 1.90 ಲಕ್ಷ ಟನ್‌ ರಾಗಿಯನ್ನು ಮಾತ್ರ ಕೊಂಡುಕೊಂಡಿದ್ದು ಉಳಿದ ರೈತರು ಏನು ಮಾಡಬೇಕು? ಕಳೆದ 3 ವರ್ಷದಲ್ಲಿ ಬಡವರಿಗೆ ಒಂದೂ ಮನೆ ಮಂಜೂರು ಮಾಡಿಲ್ಲ, ಸರ್ಕಾರ ನಡೆಸುವ ತಾಕತ್‌ ಇಲ್ಲದಿದ್ದರೇ ಬಿಟ್ಟು ತೊಲಗಿ, ನಾವು ಜನಪರ ಆಡಳಿತ ಕೊಡುತ್ತೇವೆಂದು ಹೇಳಿದರೂ ಕುರ್ಚಿಯನ್ನು ಭದ್ರವಾಗಿ ಹಿಡಿದುಕೊಂಡಿದ್ದಾರೆ, ಇವರಿಗೆ ನಾಚಿಕೆ ಇಲ್ಲವೇ ಎಂದು ಬಿಜೆಪಿ ಸರ್ಕಾರವನ್ನು ಛೇಡಿಸಿದರು. ಕಾಂಗ್ರೆಸ್‌ ಜಾರಿ ಮಾಡಿದ್ದ ಹಲವು ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆ, ದಲಿತ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿ ಸರ್ಕಾರ ಇದಾಗಿದ್ದು ಅಭಿವೃದ್ಧಿ ಶೂನ್ಯವಾಗಿದೆ. 

ಕಳೆದ ಒಂದು ವರ್ಷದಿಂದ ಹಾಸ್ಟೆಲ್‌ ಗಳಿಗೆ ಸೋಪ್‌ ಕಿಟ್‌ ಕೊಟ್ಟಿಲ್ಲ. ಇಂತಹ ಸರ್ಕಾರ ಇರಬೇಕಾ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ. ಭ್ರಷ್ಟಾಚಾರ ಮುಕ್ತ ಕರ್ನಾಟಕ, ಸಂವಿಧಾನದ ಉಳಿಸುವ ಕಾರ್ಯ, ಜನಪರ ಆಡಳಿತ ಅದು ಕಾಂಗ್ರೆಸ್‌ ನಿಂದ ಮಾತ್ರ ಸಾಧ್ಯ ಎಂದರು. ಈಶ್ವರಪ್ಪ ಕೊಲೆಗಡುಕ, ರಾಕ್ಷಸ: ಸ್ವಪಕ್ಷದ ಕಾರ್ಯಕರ್ತನಿಂದ ಕಾಮಗಾರಿ ಮಾಡಿಸಿ ಬಳಿಕ 40% ಕಮಿಷನ್‌ಗಾಗಿ ಗುತ್ತಿಗೆದಾರನನ್ನು ಈಶ್ವರಪ್ಪ ಬಲಿ ಪಡೆದಿದ್ದಾರೆ. ಬಡವನ ಹಣಕ್ಕೆ ಕತ್ತರಿ ಹಾಕಿರುವ ಈಶ್ವರಪ್ಪ ಮನುಷ್ಯನಾ, ರಾಕ್ಷಸನಾ, ಆತನನ್ನು ಕೊಲೆಗಡುಕ ಅನ್ನದೇ ಏನನ್ನಬೇಕೆಂದು ಮಾಜಿ ಸಚಿವ ಕೆಎಸ್‌ಈ ವಿರುದ್ಧ ಕಿಡಿಕಾರಿದರು.

ನೆಲದ ಕಾನೂನು ಎಲ್ಲರಿಗೂ ಒಂದೇ, ಕಮಿಷನ್‌ ಕಿರುಕುಳದಿಂದಲೇ ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿದ್ದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಸು ದಾಖಲಿಸಬೇಕು. ಕೂಡಲೇ ಈಶ್ವರಪ್ಪನನ್ನು ಬಂಧಿಸಬೇಕು. ನಮಗೇನು ಈಶ್ವರಪ್ಪ ವಿರುದ್ಧ ರಾಜಕೀಯ ಧ್ವೇಷವಿಲ್ಲ ಕಾನೂನು ಪ್ರಕಾರ ತನಿಖೆ ಮಾಡಿ ಎಂದಷ್ಟೇ ನಮ್ಮ ಒತ್ತಾಯ ಎಂದ ಅವರು ಮೃತ ಗುತ್ತಿಗೆದಾರನ ಪತ್ನಿಗೆ ಸರ್ಕಾರಿ ನೌಕರಿ, ಒಂದು ಕೋಟಿ ರು. ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ನನ್ನ 4 ದಶಕಗಳ ರಾಜಕಾರಣದಲ್ಲಿ ಇಷ್ಟುಭ್ರಷ್ಟಾಚಾರ ಎಸಗಿದ ಸರ್ಕಾರವನ್ನು ನಾನು ನೋಡಿಲ್ಲ, ಈಶ್ವರಪ್ಪ ಪರ ಮಾತನಾಡುವ ಮುಖ್ಯಂಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಡಳಿತ ನಡೆಸಲು ನೈತಿಕತೆ ಇಲ್ಲ, ಮಿ.ಬೊಮ್ಮಾಯಿ ಪ್ಲೀಸ್‌ ಗೆಟ್‌ ಔಟ್‌ ಎಂದ ಅವರು ಈಶ್ವರಪ್ಪನನ್ನು ಏಕೆ ಅರೆಸ್ಟ್‌ ಮಾಡಬೇಕುನ್ನುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತಿಗೆ ಜನರು ಧಿಕ್ಕಾರ ಕೂಗಬೇಕೆಂದರು. ಬಿಜೆಪಿಯವರು ಮತ್ತು ಬಿಜೆಪಿ ಬೆಂಬಲಿಸುವವರು ರಾಷ್ಟ್ರ ಭಕ್ತರಲ್ಲ ರಾಷ್ಟ್ರದ್ರೋಹಿಗಳೆಂದು ಟೀಕಿಸಿದರು.

ನಿಮಗೆ ತಾಕತ್‌ ಇದ್ರೆ 40% ಸರ್ಕಾರದ ವಿರುದ್ಧ ತನಿಖೆ ಮಾಡಿಸಿ: ಮೋದಿಗೆ ಸಿದ್ದು ಸವಾಲ್‌

ಬಿಜೆಪಿ ಹಾಗೂ ಬಿಜೆಪಿಯನ್ನು ಬೆಂಬಲಿಸುವವರಿಗೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು. ಹಿಂದೂ ಮತಗಳ ಧೃವೀಕರಣಕ್ಕಾಗಿ ಸಮಾಜದಲ್ಲಿ ಬಿಜೆಪಿ ಅಶಾಂತಿ ಬಿತ್ತುತ್ತಿದ್ದು ಇವೆಲ್ಲಕ್ಕೂ ಕಾಂಗ್ರೆಸ್‌ ಪರಿಹಾರ ಎಂದರು. ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಈಶ್ವರಪ್ಪ, ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿಗೂ ಮಾತಿನ ಗುದ್ದು ಕೊಟ್ಟರು.

click me!