SC-ST Reservation: ಸಿದ್ದರಾಮಯ್ಯಗೆ ಮೀಸಲಾತಿ ಕೊಡೋ ಯೋಗ್ಯತೆ ಇರಲಿಲ್ಲ: ಕಟೀಲ್‌

Published : Oct 11, 2022, 11:42 AM ISTUpdated : Oct 11, 2022, 12:01 PM IST
SC-ST Reservation: ಸಿದ್ದರಾಮಯ್ಯಗೆ ಮೀಸಲಾತಿ ಕೊಡೋ ಯೋಗ್ಯತೆ ಇರಲಿಲ್ಲ: ಕಟೀಲ್‌

ಸಾರಾಂಶ

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದವರು, ಅಹಿಂದ ಚಳುವಳಿ ಮಾಡಿ ಹಿಂದುಳಿದ ವರ್ಗಗಳಿಗೆ ನ್ಯಾಯವನ್ನೇ ಕೊಡದೆ ಇರುವಂತವರು. ಆ ಸಂದರ್ಭದಲ್ಲಿ ಏಕೆ ಮೀಸಲಾತಿ ಕೊಡಲಿಲ್ಲ?: ನಳಿನ್‌ ಕುಮಾರ್ ಕಟೀಲ್‌ 

ಹಾವೇರಿ(ಅ.11):  ರಾಜ್ಯದಲ್ಲಿ ಎರಡು ತಂಡವಾಗಿ ಜನ ಸಂಕಲ್ಪ ಯಾತ್ರೆಯನ್ನ ಮಾಡುತ್ತಿದ್ದೇವೆ. ಈಗಾಗಲೇ ಎರಡು ಸಮುದಾಯದ ಬೇಡಿಕೆ ಈಡೇರಿಸುವ ಕೆಲಸವನ್ನ ಸರ್ಕಾರ ಮಾಡಿದೆ. ಇನ್ನೂ ಹತ್ತಾರು ಬೇಡಿಕೆಗಳು ಇವೆ. ಆ ಕೆಲಸವನ್ನೂ ಸಹ ನಮ್ಮ ಸರ್ಕಾರ ಮಾಡುತ್ತದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ತಿಳಿಸಿದ್ದಾರೆ.  

ಎಸ್‌ಸಿ, ಎಸ್‌ಸಿ ಮೀಸಲಾತಿಗೆ ಸಂಬಂಧಿಸಿದಂತೆ ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದವರು, ಅಹಿಂದ ಚಳುವಳಿ ಮಾಡಿ ಹಿಂದುಳಿದ ವರ್ಗಗಳಿಗೆ ನ್ಯಾಯವನ್ನೇ ಕೊಡದೆ ಇರುವಂತವರು. ಆ ಸಂದರ್ಭದಲ್ಲಿ ಏಕೆ ಮೀಸಲಾತಿ ಕೊಡಲಿಲ್ಲ?. ಸಿಎಂ ಆಗಿ ಐದು ವರ್ಷ ಅಧಿಕಾರದಲ್ಲಿದ್ರೂ ಆ ಭಿಕ್ಷೆಯಡಿಯಲ್ಲಿ, ಆ ಕೋಟಾದಡಿಯಲ್ಲಿ ಸಿಎಂ ಆದ್ರೂ ನ್ಯಾಯ ಕೊಡುವ ಕೆಲಸ ಮಾಡದಿದ್ದಾಗ ಅಸಮಾಧಾನ ವ್ಯಕ್ತಪಡಿಸುವುದು ಯಾವ ನ್ಯಾಯ ಅಂತ ಪ್ರಶ್ನಿಸಿದ್ದಾರೆ. 

ಎಸ್‌ಸಿ,ಎಸ್‌ಟಿ ಮೀಸಲಾತಿ ಹೆಚ್ಚಳ ನಿರ್ಧಾರ ಸ್ವಾಗತಾರ್ಹ: ಎಚ್‌.ಸಿ. ಮಹದೇವಪ್ಪ

ಸಿದ್ದರಾಮಯ್ಯನವರ ಅವರ ಕಾಲಘಟ್ಟದಲ್ಲಿ ಕೊಡುವ ಯೋಗ್ಯತೆ ಇರಲಿಲ್ಲ, ಅವರ ಕಾಲದಲ್ಲಿ ಏನು ತೀರ್ಮಾನ ತೆಗೆದುಕೊಳ್ಳಲಾಗದ ಸಿಎಂ ಆಗಿದ್ರು, ಅದನ್ನ ಮುಚ್ಚಿ ಹಾಕಲು ಒಂದು ಆಯೋಗ ಮಾಡಿ ಅಲ್ಲಿಗೆ ಮುಚ್ಚಿ ಹಾಕಿದ್ದರು. ವೀರಶೈವ ಲಿಂಗಾಯತ ಸಮಾಜವನ್ನು ಒಡೆದಾಳಿದ್ರು, ಇದನ್ನ ಬಿಟ್ಟು ಏನು ಮಾಡಿದ್ದಾರೆ ಒಳ್ಳೆಯದು. ನಾವು ಮಾಡಿದ್ದೇವೆ, ನಾವು ಕ್ರೆಡಿಟ್ ತಗೋಳ್ತೇವೆ. ಇವರಿಗೆ ಯಾವ ನೈತಿಕತೆ ಇದೆ ಪ್ರಶ್ನೆ ಮಾಡಲು ಅಂತ ಸಿದ್ದರಾಮಯ್ಯ ವಿರುದ್ಧ ಕಟೀಲ್‌ ಕಿಡಿ ಕಾರಿದ್ದಾರೆ. 

ಕೇಂದ್ರ ಸರ್ಕಾರ ಕೊಟ್ಟ ಅನ್ನಭಾಗ್ಯವನ್ನ ನಾವು ಕೊಟ್ಟಿದ್ದೇವೆ ಅಂತ ಫೋಟೋ ಹಾಕಿಕೊಂಡು ತಿರಗಿದ್ದಾರೆ. ಇವರದ್ದೇನು ಆಣೆ ಇದೆ ಅದರಲ್ಲಿ, ಯಾವ ಯೋಗ್ಯತೆ ಇದೆ ಇವರಿಗೆ, ದೇಶದಲ್ಲಿ ಭ್ರಷ್ಟಾಚಾರ ಪ್ರಾರಂಭ ಮಾಡಿದ್ದು ಕಾಂಗ್ರೆಸ್, ಭ್ರಷ್ಟಾಚಾರದ ಇನ್ನೊಂದು ಹೆಸರೇ ಕಾಂಗ್ರೆಸ್, ಭಯೋತ್ಪಾದನೆಯ ಇನ್ನೊಂದು ಹೆಸರೇ ಕಾಂಗ್ರೆಸ್, ಭ್ರಷ್ಟಾಚಾರದ ಒಂದು ಫಲಾನುಭವಿ ರಾಹುಲ್‌ ಗಾಂಧಿ ಅದಕ್ಕೊಸ್ಕರ ಬೇಲ್ ಮೇಲಿದ್ದಾರೆ ಅಂತ ಕೈ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. 

ಸರ್ಕಾರದ ಕಾರ್ಯಕ್ರಮ ಜನರಿಗೆ ಮುಟ್ಟಿಸಲು ಜನ ಸಂಕಲ್ಪ ಯಾತ್ರೆ

ಬಿಜೆಪಿ ನಿರಂತರ ಕಾರ್ಯಕ್ರಮ ಮಾಡಿಕೊಂಡು ಬಂದಿದೆ. ಈಗ ಜನ ಸಂಕಲ್ಪ ಸಮಾವೇಶವನ್ನ ಮಾಡುತ್ತಿದ್ದೇವೆ. ಹಿರಿಯ ನಾಯಕರಾದ ಯಡಿಯೂರಪ್ಪ ನೇತೃತ್ವದಲ್ಲಿ ಜನ ಸಂಕಲ್ಪ ಯಾತ್ರೆ ನಡೆಯಲಿದೆ. ರಾಜ್ಯದ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನ ಜನರಿಗೆ ಮುಟ್ಟಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಯಾವ ರಾಜ್ಯದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ಇದೆ? ಹಿಂದುಳಿದ ವರ್ಗದ ಕತೆಏನು?

ನಮ್ಮ ಕಾರ್ಯಕರ್ತರು, ಪದಾಧಿಕಾರಿಗಳು ಚುನಾವಣೆಗೆ ಸಜ್ಜಾಗಿ, ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಂಕಲ್ಪ ಮಾಡಲು ಕಾರ್ಯಕ್ರಮ ಮಾಡ್ತಿದ್ದೇವೆ. ಕಾರ್ಯಕರ್ತರಲ್ಲಿ ಬಹಳಷ್ಟು ಉತ್ಸಾಹ ಇದೆ. ಸಮಾವೇಶದ ಜೊತೆ ಸಣ್ಣ ಪುಟ್ಟ ಕಾರ್ಯಕ್ರಮಗಳಿರುತ್ತವೆ. ಅದನ್ನ ಅಲ್ಲಿಯ ಲೋಕಲ್ ಲೀಡರ್‌ಗಳು ನಿರ್ಧರಿಸುತ್ತಾರೆ. ಜನ ಸಂಕಲ್ಪ ಯಾತ್ರೆ ಯಶಸ್ವಿಯಾಗಲಿದೆ ಅಂತ ಹೇಳಿದ್ದಾರೆ. 

ಭಾರತ್ ಜೋಡೋ ಬಗ್ಗೆ ತಲೆ ಕಡೆಸಿಕೊಂಡಿಲ್ಲ

ಕಾಂಗ್ರೆಸ್‌ನ ಭಾರತ್ ಜೋಡೋ ಬಗ್ಗೆ ತಲೆ ಕಡೆಸಿಕೊಂಡಿಲ್ಲ, ಆ ಜೋಡೋ ಯಾತ್ರೆ ಯಾರನ್ನ ಜೋಡಿಸುತ್ತಿದೆ, ಯಾರನ್ನ ತೋಡುತ್ತಿದೆ ಅದು ಜಗ್ಗತಿಗೆ ಗೊತ್ತಿದೆ. ಏನು ಮಹತ್ವ ಉಳಿದಿಲ್ಲ ನಾವೇನು ತಲೆ ಕಡೆಸಿಕೊಂಡಿಲ್ಲ. ನಾವು ಚುನಾವಣೆಗೆ ಗೆಲ್ಲುವ ಸಂಕಲ್ಪ ಯಾತ್ರೆ ಮಾಡ್ತಿದ್ದೇವೆ ಅಂತ ತಿಳಿಸಿದ್ದಾರೆ. 

SC,ST ಮೀಸಲಾತಿ ಬಳಿಕ, ಬೇರೆ ಸಮುದಾಯಗಳು ಮೀಸಲಾತಿ ಕೇಳುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಸಹಜವಾಗಿ ಎಲ್ಲರಿಗೂ ಆಕಾಂಕ್ಷೆ ಇರುತ್ತದೆ. ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ವಿಷಯ ಎತ್ತಿಕೊಂಡಿದ್ದೇವೆ. ಅದಕ್ಕೆ ಕಾನೂನಾತ್ಮಕ ಕೆಲಸ ಮಾಡಬೇಕು. ಕಾನೂನಾತ್ಮಕ ರಕ್ಷಣೆ ಕೊಡುವ ಕೆಲಸ ಮಾಡ್ತಾ ಇದ್ದೇವೆ. ಓಬಿಸಿ ವಿಚಾರದಲ್ಲಿ ಕಮಿಷನ್ ಇದೆ, ತಜ್ಞರು ಇದ್ದಾರೆ. ಕಮಿಷನ್ ಏನು ಹೇಳುತ್ತದೆ, ತಜ್ಞರು ಏನು ಹೇಳ್ತಾರೆ ಎಂದು ನೋಡಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದ ಸಿಎಂ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದ್ವೇಷ ಭಾಷಣಕ್ಕೆ 7 ವರ್ಷ ಜೈಲು: ವಿಧೇಯಕ ಮಂಡಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌
ಉ.ಕರ್ನಾಟಕ ಬಗ್ಗೆ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ: ವಿಜಯೇಂದ್ರ