ಮೀಸಲಾತಿ ಹೋರಾಟಕ್ಕೆ ಸಾಥ್ ಕೊಟ್ಟ ಬಿಜೆಪಿ ಶಾಸಕರು, ಸಚಿವರಿಗೆ ಸಂಕಷ್ಟ ಎದುರಾಗುತ್ತಾ?

By Suvarna News  |  First Published Feb 17, 2021, 4:07 PM IST

ರಾಜ್ಯದಲ್ಲಿ ವಿವಿಧ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಮೀಸಲಾತಿಗಾಗಿ ಹೊರಾಟಗಳು ನಡೆಯುತ್ತಿವೆ. ಇದರಲ್ಲಿ ಆಡಳಿತರೂಢ ಬಿಜೆಪಿ ಶಾಸಕರು, ಸಚಿವರು ಭಾಗಿಯಾಗಿದ್ದಾರೆ. ಇನ್ನು ಈ  ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ ಕೊಟ್ಟಿದ್ದಾರೆ.


ವಿಜಯಪುರ, (ಫೆ.17): ರಾಜ್ಯದಲ್ಲಿ ವಿವಿಧ ಸಮುದಾಯಗಳು ನಡೆಸುತ್ತಿರುವ ಮೀಸಲು ಹೋರಾಟದಲ್ಲಿ ಬಿಜೆಪಿ ಶಾಸಕರು ಹಾಗೂ ಸಚಿವರುಗಳು ಭಾಗಿಯಾಗಿದ್ದು, ಹೈಕಮಾಂಡ್‌ ಕಣ್ಣು ಕೆಂಪಾಗಿಸಿದೆ.

ಆಡಳಿತ ನಡೆಸುವವರೇ ಪ್ರತಿಭಟನೆ ಮಾಡಿದ್ರೆ ಹೇಗೆ ಎನ್ನುವ ಟೀಕೆಗಳು ವ್ಯಕ್ತವಾಗುತ್ತಿವೆ. ಇದರಿಂದ ಬಿಜೆಪಿ ಹೈಕಮಾಂಡ್‌ ಸೂಕ್ಷ್ಮವಾಗಿ ಗಮನಿಸುತ್ತಿದೆ.

Tap to resize

Latest Videos

ಇನ್ನು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದು (ಬುಧವಾರ) ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ವಿವಿಧ ಸಮುದಾಯಗಳು ನಡೆಸುತ್ತಿರುವ ಮೀಸಲು ಹೋರಾಟದಲ್ಲಿ ಪಾಲ್ಗೊಳ್ಳದಂತೆ ಪಕ್ಷದಿಂದ ನಿರ್ಬಂಧ ಹೇರಿಲ್ಲ ಹಾಗೂ ಸೂಚನೆ ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.

ನೋಟಿಸ್‌ಗೆ ಡೋಂಟ್ ಕೇರ್, ಮತ್ತೆ ಸಿಎಂ ವಿರುದ್ಧ ಗುಡುಗಿದ ಯತ್ನಾಳ್

ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು, ಯತ್ನಾಳ್ ಇವರೆಲ್ಲರ ಮೀಸಲು ಹೋರಾಟದ ಕುರಿತು ಪಕ್ಷ ಗಮನಿಸುತ್ತಿದೆ. ಪಕ್ಷದ ಹೈಕಮಾಂಡ್ ಯಾವಾಗ ಏನು ತೀರ್ಮಾನದ ಅಗತ್ಯ ಇದೆಯೋ ಅದನ್ನು ಮಾಡುತ್ತದೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟರು.

ಎಲ್ಲ ನಾಯಕರನ್ನೂ ಕರೆದು ಮಾತನಾಡಲಾಗುತ್ತಿದೆ. ಎಲ್ಲ ಸಮುದಾಯಗಳಿಗೆ ನ್ಯಾಯ, ಗೌರವ ಕೊಡುವ ಕೆಲಸ ನಡೆಯುತ್ತಿದೆ. ಸರ್ಕಾರ,‌ ಮುಖ್ಯಮಂತ್ರಿ, ಪಕ್ಷ ಈ ಕೆಲಸ ಮಾಡುತ್ತದೆ ಎಂದರು.

ಪಕ್ಷದ ನಾಯಕತ್ವದ ವಿರುದ್ಧ ಮಾತನಾಡುತ್ತಿರುವ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿ ಶಿಸ್ತು ಸಮಿತಿ ನೋಟೀಸ್ ನೀಡಿದೆ. ನೋಟೀಸ್ ತಲುಪಿದ ಮೇಲೆ ಅವರೇ ಉತ್ತರಿಸುತ್ತಾರೆ ಎಂದು ಹೇಳಿದರು.

click me!