
ಬೆಂಗಳೂರು (ಏ.18) ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ ಹತ್ತು ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಶಾಂತಿನಗರ ಅಭ್ಯರ್ಥಿ ಎನ್.ಎ.ಹ್ಯಾರಿಸ್ ಅತಿ ಹೆಚ್ಚು ಆಸ್ತಿ ಘೋಷಣೆ ಮಾಡಿದ್ದಾರೆ.
ಎನ್.ಎ.ಹ್ಯಾರಿಸ್(NA Haris) ಅವರು ಬರೋಬ್ಬರಿ ₹438.21 ಕೋಟಿ ರು. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಘೋಷಿಸಿದ್ದು, ಇಷ್ಟಾದರೂ ಹ್ಯಾರಿಸ್ ಮತ್ತು ಪತ್ನಿ ಬಳಿ ಯಾವುದೇ ವಾಹನವಿಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಹೊಸಕೋಟೆಯಲ್ಲ ಇದು ಶ್ರೀಮಂತರ ಕೋಟೆ: 1,600 ಕೋಟಿ ಒಡೆಯ ಎಂಟಿಬಿ ನಾಗರಾಜ್, ಶತಕೋಟಿ ವೀರ ಶರತ್ ಬಚ್ಚೇಗೌಡ
ಹ್ಯಾರೀಸ್ ಮತ್ತು ಪತ್ನಿ 167.18 ಕೋಟಿ ರು. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಈ ಪೈಕಿ 115.58 ಕೋಟಿ ರು.ಗಳನ್ನು ವಿವಿಧ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಸಾಲವಾಗಿ ನೀಡಿದ್ದಾರೆ. ಮಗಳಿಗೆ 1.35 ಕೋಟಿ ರು., ಮಗನಿಗೆ 1.17 ಕೋಟಿ ರು. ಹಾಗೂ ಪತ್ನಿಗೆ 13 ಲಕ್ಷ ರು. ಸಾಲ ನೀಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಚರಾಸ್ತಿ ಪೈಕಿ 4 ಕೆಜಿ ಚಿನ್ನ, 203 ಗ್ರಾಂ ರೂಬಿ ಮತ್ತು ವಜ್ರಹೊಂದಿದ್ದಾರೆ. ಕೃಷಿ, ಕೃಷಿಯೇತರ, ವಾಣಿಜ್ಯ ಮತ್ತು ವಸತಿ ಕಟ್ಟಡಗಳು ಸೇರಿ 271.02 ಕೋಟಿ ರು. ಸ್ಥಿರಾಸ್ತಿ ಹೊಂದಿರುವುದಾಗಿ ತಿಳಿಸಿದ್ದು, 438 ಕೋಟಿ ರು. ಒಡೆಯರಾಗಿರುವ ಹ್ಯಾರಿಸ್ ವಿವಿಧ ಹಣಕಾಸು ಸಂಸ್ಥೆಗಳಲ್ಲಿ 28.29 ಕೋಟಿ ರು. ಹೊಣೆಗಾರಿಕೆಗಳನ್ನು ಹೊಂದಿದ್ದಾರೆ.
ದಿನೇಶ್‌ಗುಂಡೂರಾವ್ ಬಳಿ ₹48 ಕೋಟಿ ಆಸ್ತಿ
ಗಾಂಧಿನಗರ ವಿಧಾನಸಭಾ ಕ್ಷೇತ್ರ(Gandhinagar assembly constituency)ದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್(Dinesh gundoorao) 6.06 ಕೋಟಿ ರು. ಚರಾಸ್ತಿ ಮತ್ತು 42 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಘೋಷಿಸಿದ್ದಾರೆ. ಚರಾಸ್ತಿ ಪೈಕಿ 1.25 ಕೆ.ಜಿ. ಚಿನ್ನ, 4.5 ಕೆ.ಜಿ. ಬೆಳ್ಳಿ ಹೊಂದಿದ್ದಾರೆ.
ಸ್ಥಿರಾಸ್ತಿ ಪೈಕಿ ಜಾಲ ಹೋಬಳಿಯ ನವರತ್ನ ಅಗ್ರಹಾರ ಗ್ರಾಮದಲ್ಲಿ 18.33 ಎಕರೆ ಕೃಷಿ ಭೂಮಿ ಹೊಂದಿದ್ದು, ಅದರ ಮೌಲ್ಯ 30 ಕೋಟಿ ರು. ಎಂದು ತೋರಿಸಿದ್ದಾರೆ. ಪತ್ನಿ ಬಳಿ ರೇಸ್‌ಕೋರ್ಸ್ ರಸ್ತೆಯಲ್ಲಿ 4,500 ಚದರ ಅಡಿ ವಿಸ್ತೀರ್ಣದ 6 ಕೋಟಿ ರು. ಮೌಲ್ಯದ ಮನೆಯಿದೆ. ಉಳಿದಂತೆ ಹಣಕಾಸು ಸಂಸ್ಥೆಗಳು, ಖಾಸಗಿ ವ್ಯಕ್ತಿಗಳಿಂದ 6.31 ಕೋಟಿ ರು. ಸಾಲ ಪಡೆದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಸೌಮ್ಯಾರೆಡ್ಡಿ ಬಳಿ ಸ್ಥಿರಾಸ್ತಿ ಇಲ್ಲ
ಜಯನಗರ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಸೌಮ್ಯಾರೆಡ್ಡಿ(Soumya reddy congress candidate) ಅವರು ₹2.11 ಕೋಟಿ ರು. ಮೌಲ್ಯದ ಚರಾಸ್ತಿ ಘೋಷಣೆ ಮಾಡಿದ್ದು, ತಮ್ಮ ಬಳಿ ಯಾವುದೇ ಸ್ಥಿರಾಸ್ತಿ ಹೊಂದಿಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಡಿ.ಕೆ. ರವಿ ಪತ್ನಿ ಕುಸಮಾ ಆಸ್ತಿ ಮೌಲ್ಯ 2 ಕೋಟಿ: ಒಂದು ಕಿಲೋ ಬಂಗಾರ
ಚರಾಸ್ತಿ ಪೈಕಿ 5 ಕೆ.ಜಿ. ಬೆಳ್ಳಿ, 950 ಗ್ರಾಂ ಚಿನ್ನ. 27.47 ಲಕ್ಷ ಮೌಲ್ಯದ ಇನ್ನೋವಾ ಕಾರು ಹೊಂದಿದ್ದಾರೆ. ಇನ್ನು 12.12 ಲಕ್ಷ ರು. ಬ್ಯಾಂಕ್‌ನಲ್ಲಿ ಠೇವಣಿ, 13.17 ಲಕ್ಷ ರು. ನಗದು ಹೊಂದಿದ್ದು ಎಲ್ಲವೂ ಚರಾಸ್ತಿಯೇ ಆಗಿದೆ. ಇದರ ಜತೆಗೆ 1.33 ಕೋಟಿ ರು. ಹೊಣೆಗಾರಿಕೆ (ಸಾಲ) ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.