Bengaluru: ನಗರದ 10 ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ: ಅಬ್ಬಾ, ಎಲ್ಲರೂ ಕೋಟಿ ಕುಳಗಳು!

Published : Apr 18, 2023, 08:03 AM IST
Bengaluru: ನಗರದ 10 ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ: ಅಬ್ಬಾ, ಎಲ್ಲರೂ ಕೋಟಿ ಕುಳಗಳು!

ಸಾರಾಂಶ

ನಗರದಲ್ಲಿ ಸೋಮವಾರ ಕಾಂಗ್ರೆಸ್‌ನ ದಿನೇಶ್‌ ಗುಂಡೂರಾವ್‌, ಎನ್‌.ಎ.ಹ್ಯಾರಿಸ್‌, ಸೌಮ್ಯಾರೆಡ್ಡಿ, ಯು.ಬಿ.ವೆಂಕಟೇಶ್‌, ಪುಟ್ಟಣ್ಣ ಸೇರಿದಂತೆ ಹತ್ತು ಮಂದಿ ನಾಮಪತ್ರ ಸಲ್ಲಿಸಿದರು.

ಬೆಂಗಳೂರು (ಏ.18)) : ನಗರದಲ್ಲಿ ಸೋಮವಾರ ಕಾಂಗ್ರೆಸ್‌ನ ದಿನೇಶ್‌ ಗುಂಡೂರಾವ್‌, ಎನ್‌.ಎ.ಹ್ಯಾರಿಸ್‌, ಸೌಮ್ಯಾರೆಡ್ಡಿ, ಯು.ಬಿ.ವೆಂಕಟೇಶ್‌, ಪುಟ್ಟಣ್ಣ ಸೇರಿದಂತೆ ಹತ್ತು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಹತ್ತೂ ಮಂದಿ ಕಾಂಗ್ರೆಸ್‌ ಅಭ್ಯರ್ಥಿಗಳು ಕೋಟ್ಯಾಧಿಪತಿಗಳೇ ಆಗಿದ್ದು, ಈ ಪೈಕಿ ₹438.21 ಕೋಟಿ ಆಸ್ತಿ ಮೂಲಕ ಶಾಸಕ ಎನ್‌.ಎ. ಹ್ಯಾರಿಸ್‌ ಅತಿ ಹೆಚ್ಚು ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಉಳಿದಂಎ ಯಲಹಂಕ ಅಭ್ಯರ್ಥಿ ಕೇಶವ್‌ ರಾಜಣ್ಣ .₹111 ಕೋಟಿ, ರಾಜಾಜಿನಗರ ಅಭ್ಯರ್ಥಿ ಪುಟ್ಟಣ್ಣ .60 ಕೋಟಿ, ಬಸವನಗುಡಿ ಅಭ್ಯರ್ಥಿ ಹಾಗೂ ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌ .50 ಕೋಟಿ, ಶಿವಾಜಿ ನಗರ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ .₹41 ಕೋಟಿ ಆಸ್ತಿ ಘೋಷಿಸಿದ್ದಾರೆ.

Karnataka Assembly Elections 2023: ಡಿಕೆಶಿ, ಸೋಮಣ್ಣ, ಹೆಚ್‌ಡಿಕೆ ಸೇರಿ ಘಟಾನುಘಟಿಗಳ ನಾಮಪತ್ರ ಸಲ್ಲಿಕೆ

111 ಕೋಟಿ ಒಡೆಯ ಕೇಶವ್‌ ರಾಜಣ್ಣ:

ಯಲಹಂಕ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೇಶವ ರಾಜಣ್ಣ (Keshav Rajanna)ಅವರು .10.92 ಕೋಟಿ ಮೌಲ್ಯದ ಚರಾಸ್ತಿ ಹಾಗೂ 100.58 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಘೋಷಿಸಿದ್ದಾರೆ. ಅಲ್ಲದೆ 13.95 ಕೋಟಿ ರು. ಹೊಣೆಗಾರಿಕೆ ತೋರಿಸಿರುವ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌(DK Shivakumar) ಅವರಿಗೆ .₹1 ಕೋಟಿ ಸಾಲ ನೀಡಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಇನ್ನು ಒಟ್ಟು 13 ವಾಹನ ಹೊಂದಿರುವ ಅವರು 10 ವಿವಿಧ ಕಾರುಗಳ ಒಡೆಯರಾಗಿದ್ದಾರೆ. ಚರಾಸ್ತಿ ಪೈಕಿ 600 ಗ್ರಾಂ. ಚಿನ್ನ ಹಾಗೂ 5 ಕೆ.ಜಿ ಬೆಳ್ಳಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಪುಟ್ಟಣ್ಣ ಬಳಿ 60 ಕೋಟಿ ಆಸ್ತಿ:

ರಾಜಾಜಿನಗರದ ಅಭ್ಯರ್ಥಿ ಪುಟ್ಟಣ್ಣ ಬಳಿ ₹59.70 ಕೋಟಿ ರು. ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ಈ ಪೈಕಿ 17,83 ಕೋಟಿ ರು. ಮೌಲ್ಯದ ಚರಾಸ್ತಿ ಹಾಗೂ 41.86 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಚರಾಸ್ತಿ ಪೈಕಿ 1.44 ಕೆ.ಜಿ. ಚಿನ್ನ, 6 ಕೆ.ಜಿ. ಬೆಳ್ಳಿ, 290 ಗ್ರಾಂ. ವಜ್ರಾಭರಣ ಘೋಷಿಸಿದ್ದಾರೆ. ಪುಟ್ಟಣ್ಣ ಮತ್ತು ಕುಟುಂಬದವರು ವಿವಿಧ ಸಂಸ್ಥೆ, ವ್ಯಕ್ತಿಗಳಿಗೆ 2.85 ಕೋಟಿ ರು. ಸಾಲ ನೀಡಿದ್ದು, ಅದರಲ್ಲಿ ಮಾಜಿ ಸಚಿವ ಬಿ.ಝಡ್‌. ಜಮೀರ್‌ ಅಹಮದ್‌ ಖಾನ್‌ಗೆ 35 ಲಕ್ಷ ರೂ. ಸಾಲ ಕೊಟ್ಟಿದ್ದಾರೆ. ಅಲ್ಲದೆ, ವಿವಿಧ ಹಣಕಾಸು ಸಂಸ್ಥೆ ಮತ್ತು ವ್ಯಕ್ತಿಗಳಿಂದ 15,34 ಕೋಟಿ ರು. ಹೊಣೆಗಾರಿ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

₹50 ಕೋಟಿ ಒಡೆಯ ಯು.ಬಿ.ವೆಂಕಟೇಶ್‌:

ಬಸವನಗುಡಿ ಅಭ್ಯರ್ಥಿ ಯು.ಬಿ. ವೆಂಕಟೇಶ್‌ ಒಟ್ಟು 50 ಕೋಟಿ ರು. ಮೌಲ್ಯದ ಆಸ್ತಿ ಘೋಷಿಸಿದ್ದಾರೆ. 3.54 ಲಕ್ಷ ರು. ನಗದು, 1.8 ಕೆ.ಜಿ ಚಿನ್ನ, 16 ಕೆ.ಜಿ ಬೆಳ್ಳಿ, 7.12 ಲಕ್ಷ ರು. ಮೌಲ್ಯದ ವಜ್ರಾಭರಣ ಸೇರಿ 36.53 ಕೋಟಿ ರು. ಚರಾಸ್ತಿ ಹಾಗೂ ಪತ್ನಿ ಬಳಿ 1.76 ಕೆ.ಜಿ. ಚಿನ್ನ, 15 ಕೆ.ಜಿ. ಬೆಳ್ಳಿ, 12.80 ಲಕ್ಷ ರು. ಮೌಲ್ಯದ ವಜ್ರಾಭರಣ ಸೇರಿ 2.18 ಕೋಟಿ ರು. ಚರಾಸ್ತಿ ಹೊಂದಿದ್ದಾರೆ. ತಮ್ಮ ಬಳಿ 13.19 ಕೋಟಿ ರು. ಹಾಗೂ ಪತ್ನಿ ಬಳಿ 20 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, 31.27 ಕೋಟಿ ರು. ಹೊಣೆಗಾರಿಕೆ ಹೊಂದಿರುವುದಾಗಿ ಘೋಷಿಸಿದ್ದಾರೆ.

ರಿಜ್ವಾನ್‌ ಅರ್ಷದ್‌ .41 ಕೋಟಿ ಒಡೆಯ:

ಶಿವಾಜಿನಗರ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ 41 ಕೋಟಿ ಆಸ್ತಿ ಹೊಂದಿದ್ದಾರೆ. 1.42 ಕೋಟಿ ರು. ಚರಾಸ್ತಿ ಮತ್ತು 39.58 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಚರಾಸ್ತಿ ಪೈಕಿ 858 ಗ್ರಾಂ ಚಿನ್ನ, 1.25 ಕೆ.ಜಿ. ಬೆಳ್ಳಿ ಹೊಂದಿದ್ದಾರೆ.

ಕುಸುಮಾ ಆಸ್ತಿ ಮೌಲ್ಯ 4.77 ಕೋಟಿ:

ರಾಜರಾಜೇಶ್ವರಿನಗರ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ 4.77 ಕೋಟಿ ರು. ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ಅದರಲ್ಲಿ 28. ಲಕ್ಷ ರು. ಚರಾಸ್ತಿ ಹೊಂದಿದ್ದು ಈ ಪೈಕಿ 1.1 ಕೆ.ಜಿ. ಚಿನ್ನ ಹೊಂದಿದ್ದಾರೆ.

1.97 ಕೋಟಿ ರು. ಸ್ಥಿರಾಸ್ತಿ ಹೊಂದಿದ್ದಾರೆ. ತಂದೆಗೆ 1.23 ಕೋಟಿ ರು. ಸಾಲ ನೀಡಿರುವುದಾಗಿ ಹೇಳಿದ್ದಾರೆ. ಒಟ್ಟು 4.77 ಕೋಟಿ ರು. ಆಸ್ತಿ ಹೊಂದಿದ್ದು, ಅವರ ಬಳಿ ಯಾವುದೇ ವಾಹನವಿಲ್ಲ. 1.22 ಕೋಟಿ ರು. ಹೊಣೆಗಾರಿಕೆಯನ್ನೂ ಹೊಂದಿರುವುದಾಗಿ ಪ್ರಮಾಣದಲ್ಲಿ ತಿಳಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ಬಂಡಾಯದಿಂದ ಜೆಡಿಎಸ್‌ಗೆ ಅಭ್ಯರ್ಥಿಗಳ ಸುಗ್ಗಿ!

ಕೇಶವಮೂರ್ತಿ ಬಳಿ ಸ್ಥಿರಾಸ್ತಿಯೇ ಇಲ್ಲ

ಮಹಾಲಕ್ಷ್ಮಿ ಬಡಾವಣೆ ಅಭ್ಯರ್ಥಿ ಎಸ್‌.ಕೇಶವಮೂರ್ತಿ 12.09 ಲಕ್ಷ ರು. ಮೌಲ್ಯದ ಚರಾಸ್ತಿ ಹಾಗೂ 4.08 ಕೋಟಿ ರು. ಸ್ಥಿರಾಸ್ತಿ ಘೋಷಿಸಿದ್ದಾರೆ. ಚರಾಸ್ತಿ ಪೈಕಿ ಪತ್ನಿ ಬಳಿ 100 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ ಇದೆ. ಇನ್ನು ಸ್ಥಿರಾಸ್ತಿ ಪೂರ್ತಿ ಪತ್ನಿ ಹಾಗೂ ಪುತ್ರನ ಹೆಸರಿನಲ್ಲಿದ್ದು, ತಮ್ಮ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ ಎಂದು ಹೇಳಿದ್ದಾರೆ. ಪತ್ನಿ ಹೆಸರಿನಲ್ಲಿ ಒಂದು ಸ್ಕೂಟರ್‌ ಹೊರತುಪಡಿಸಿದರೆ ಬೇರೆ ಯಾವುದೇ ವಾಹನ ಇಲ್ಲ.

ಚರಾಸ್ತಿಗಿಂತ ಸಾಲವೇ ಹೆಚ್ಚು:

ಯಶವಂತಪುರ ಕಾಂಗ್ರೆಸ್‌ ಅಭ್ಯರ್ಥಿ ಬಾಲರಾಜ ಗೌಡ 8.45 ಕೋಟಿ ರು. ಆಸ್ತಿ ಘೋಷಿಸಿದ್ದಾರೆ. 1.20 ಕೋಟಿ ರು. ಚರಾಸ್ತಿ ಹೊಂದಿದ್ದರೆ 1.95 ಕೋಟಿ ರು. ಸಾಲ ಹೊಂದಿದ್ದಾರೆ. ಇನ್ನು ಸ್ಥಿರಾಸ್ತಿ ಪೈಕಿ 7.25 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರತಾಪ್ ಸಿಂಹ ಕಣ್ಣಿಟ್ಟ ಚಾಮರಾಜ ಕ್ಷೇತ್ರಕ್ಕೆ ನಿಖಿಲ್ ಎಂಟ್ರಿ? ಜಿಟಿ ದೇವೇಗೌಡ ಪಕ್ಷದಿಂದ ಔಟ್‌? ಸಾ.ರಾ ಮಹೇಶ್‌ ಚಾಮುಂಡೇಶ್ವರಿ ಕ್ಷೇತ್ರ!
ಶಿಡ್ಲಘಟ್ಟ ಪೌರಾಯುಕ್ತೆ ಆಯ್ತು, ಈಗ ಸಿಎಂ ತವರಲ್ಲೇ ಮಹಿಳಾ ಅಧಿಕಾರಿ ತಲೆ ತೆಗೆಯುತ್ತೇನೆಂದ ಕಿಡಿಗೇಡಿಗಳು!