ನೆರೆಯ ಶತ್ರು ರಾಷ್ಟ್ರ ಪಾಕಿಸ್ತಾನದ ಪ್ರಜೆಗಳೇ ನರೇಂದ್ರ ಮೋದಿಯಂತಹ ನಾಯಕ ತಮ್ಮ ದೇಶಕ್ಕೆ ಬೇಕೆಂಬುದಾಗಿ ಬೇಡುತ್ತಿದ್ದರೆ, ವಿಪಕ್ಷ ನಾಯಕ ಸಿದ್ದರಾಮಯ್ಯನಂತಹವರು ಮೋದಿಯನ್ನು ಕಿತ್ತೊಗೆಯಿರಿ ಎನ್ನುತ್ತಿರುವುದು ಕಾಂಗ್ರೆಸ್ಸಿಗರ ಮನಸ್ಥಿತಿ ಹೇಗಿದೆ ಎಂಬುದು ಜಗಜ್ಜಾಹೀರಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹರಿಹಾಯ್ದರು.
ದಾವಣಗೆರೆ (ಮಾ.10) : ನೆರೆಯ ಶತ್ರು ರಾಷ್ಟ್ರ ಪಾಕಿಸ್ತಾನದ ಪ್ರಜೆಗಳೇ ನರೇಂದ್ರ ಮೋದಿಯಂತಹ ನಾಯಕ ತಮ್ಮ ದೇಶಕ್ಕೆ ಬೇಕೆಂಬುದಾಗಿ ಬೇಡುತ್ತಿದ್ದರೆ, ವಿಪಕ್ಷ ನಾಯಕ ಸಿದ್ದರಾಮಯ್ಯನಂತಹವರು ಮೋದಿಯನ್ನು ಕಿತ್ತೊಗೆಯಿರಿ ಎನ್ನುತ್ತಿರುವುದು ಕಾಂಗ್ರೆಸ್ಸಿಗರ ಮನಸ್ಥಿತಿ ಹೇಗಿದೆ ಎಂಬುದು ಜಗಜ್ಜಾಹೀರಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ(N Ravikumar) ಹರಿಹಾಯ್ದರು.
ಚನ್ನಗಿರಿ ತಾಲೂಕು ತ್ಯಾವಣಿಗೆ ಗ್ರಾಮದಲ್ಲಿ ಗುರುವಾರ ಬಿಜೆಪಿ ಒಬಿಸಿ ಮೋರ್ಚಾ ಹಮ್ಮಿಕೊಂಡಿದ್ದ ಜಿಲ್ಲಾ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿ,ನರೇಂದ್ರ ಮೋದಿ(Narendra Modi)ಯನ್ನು ಕಿತ್ತೊಗೆಯಿರಿ ಎಂದು ಹೇಳುವ ಸಿದ್ದರಾಮಯ್ಯ(Siddaramaiah)ನಂತಹವರೂ ದೇಶದಲ್ಲಿದ್ದಾರೆ. ನರೇಂದ್ರ ಮೋದಿ ನಾಯಕತ್ವ, ದೇಶ ಸದೃಢಗೊಳಿಸುತ್ತಿರುವುದು, ಬಾಹ್ಯ ಮತ್ತು ಆಂತರಿಕವಾಗಿ ದೇಶದ ಸುರಕ್ಷತೆಗೆ ಹಗಲಿರುಳು ಶ್ರಮಿಸುತ್ತಿರುವುದು, ಕೋವಿಡ್ ಸಂಕಷ್ಟದ ಸ್ಥಿತಿಯಲ್ಲಿ ದೇಶದಲ್ಲೇ ಕೋವಿಡ್ ಲಸಿಕೆ ಉತ್ಪಾದಿಸಿ ಕೋಟ್ಯಾಂತರ ಜೀವ ಉಳಿಸಿ, ಜಗತ್ತಿನ ಅನೇಕ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆ ಪೂರೈಸಿ ಮಾನವೀಯತೆ ಮೆರೆದ ಪ್ರಧಾನಿ ನರೇಂದ್ರ ಮೋದಿಯೆಂದರೆ ಕಾಂಗ್ರೆಸ್ಸಿಗರಿಗೆ ಸಹಿಸಲಾಗುತ್ತಿಲ್ಲ ಎಂದು ಟೀಕಿಸಿದರು.
undefined
ಉರಿ ಬಿಸಿಲಿಗೆ ತತ್ತರಿಸಿದ ಹಲವು ರಾಜ್ಯ, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ
ಒಬಿಸಿ ವರ್ಗಕ್ಕೆ ಶೇ.50 ಅವಕಾಶ ನೀಡಿರುವುದು ಇದೇ ಡಬಲ್ ಇಂಜಿನ್ ಸರ್ಕಾರ. ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರಿಗೆ 10 ಸಾವಿರ ರು. ಸಹಾಯಧನವನ್ನು 2 ಹಂತದಲ್ಲಿ ನೀಡಲಿದೆ. ಜನರ ಹಿತ ಕಾಯಲು ತಮ್ಮ ಸರ್ಕಾರಗಳು ಬದ್ಧ ಎಂದು ಎನ್.ರವಿಕುಮಾರ ಭರವಸೆ ನೀಡಿದರು.
ನಮ್ಮತನ ನಿರಂತರವಾಗಿರಲಿ:
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ರವೀಂದ್ರಬಾಬು ಮಾತನಾಡಿ, ಹಿಂದುಳಿದ ವರ್ಗಗಳೆಲ್ಲವೂ ಒಗ್ಗಟ್ಟಾಗಬೇಕಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈಗಳನ್ನು ಬಲಪಡಿಸಬೇಕು. ಹಿಂದುತ್ವದ ಆಚಾರ, ವಿಚಾರ, ಸಂಸ್ಕೃತಿಗಳು ಉಳಿಯಬೇಕು, ನಮ್ಮತನವೆಂಬುದು ನಿರಂತರವಾಗಿರಬೇಕೆಂದರೆ ಬಿಜೆಪಿಗೆ ಜನತೆ ಬೆಂಬಲಿಸಬೇಕು. ಹಿಂದುಳಿದ ವರ್ಗದವರಾದ ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವ ಆಡಳಿತ ನೀಡುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಿ, ಅಧಿಕಾರಕ್ಕೆ ತರಲು ಸಂಕಲ್ಪ ಮಾಡೋಣ ಎಂದರು.
ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಂತೇಬೆನ್ನೂರು ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರೊ.ಎನ್.ಲಿಂಗಣ್ಣ, ವಿಪ ಸದಸ್ಯ ಕೆ.ಎಸ್.ನವೀನ್, ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ದೂಡಾ ಅಧ್ಯಕ್ಷ, ಉಪ್ಪಾರ ಸಮಾಜದ ಮುಖಂಡ ಎ.ವೈ.ಪ್ರಕಾಶ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ಮಾಯಕೊಂಡ ಮುಖಂಡ ಜಿ.ಎಸ್.ಶ್ಯಾಮ್ ಗೊಲ್ಲರಹಳ್ಳಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಕೆ.ಹೇಮಂತಕುಮಾರ, ಶಾಂತರಾಜ ಪಾಟೀಲ್, ಪ್ರಸನ್ನಕುಮಾರ, ಪಾಲಿಕೆ ಸದಸ್ಯ ಆರ್.ಶಿವಾನಂದ, ಮಂಜುನಾಥ, ದೇವೇಂದ್ರಪ್ಪ, ಮಹೇಂದ್ರ ಹೆಬ್ಬಾಳ್, ಮಂಜುನಾಥ, ತ್ಯಾವಣಿಗೆ ಓಂಕಾರಪ್ಪ, ತ್ಯಾವಣಿಗೆ ಕೃಷ್ಣಕುಮಾರ ಇತರರಿದ್ದರು.
ಐದು ವರ್ಷ ರಾಜ್ಯವನ್ನಾಳಿದ ಸಿದ್ದರಾಮಯ್ಯ ಹೆಸರಿಗಷ್ಟೇ ಹಿಂದುಳಿದ ವರ್ಗಗಳ ಜಪ ಮಾಡುತ್ತಿದ್ದರಷ್ಟೇ. ಕಾಂಗ್ರೆಸ್ಸಿನಿಂದ ಹಿಂದುಳಿದ ವರ್ಗಗಳಿಗೆ ಯಾವುದೇ ಅನುಕೂಲವಾಗಿಲ್ಲ. ಒಬಿಸಿ ವರ್ಗಕ್ಕೆ ಏನಾದರೂ ಅವಕಾಶ, ಅನುಕೂಲವಾಗಿದ್ದರೆ ಅದು ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ. ಹಿಂದೆಲ್ಲಾ ಹಿಂದುಳಿದ ವರ್ಗಗಳಲ್ಲಿ ನಿರ್ದಿಷ್ಟಸಮುದಾಯಕ್ಕೆ ಅವಕಾಶ ಸಿಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರಗಳಲ್ಲಿ ಸಣ್ಣ ಸಣ್ಣ ಹಿಂದುಳಿದ ಜಾತಿಗಳಿಗೂ ಆದ್ಯತೆ ನೀಡಲಾಗುತ್ತಿದೆ.
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಾಂಬ್ ಇಟ್ಟ ಪ್ರಕರಣ, ಬಂಟ್ವಾಳದ ನಾಲ್ವರ ಮನೆ ಮೇಲೆ ಎನ್‌ಐಎ ದಾಳಿ
ಎನ್.ರವಿಕುಮಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ವಿವಿಧ ಮೋರ್ಚಾಗಳಿಂದ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹರಿಹರದಲ್ಲಿ ಎಸ್ಟಿಸಮಾವೇಶ, ಜಗಳೂರಿನಲ್ಲಿ ಎಸ್ಸಿ ಸಮಾವೇಶ, ಚನ್ನಗಿರಿಯಲ್ಲಿ ಮಹಿಳಾ ಮೋರ್ಚಾ ಸಮಾವೇಶ, ಹೊನ್ನಾಳಿಯಲ್ಲಿ ರೈತ ಮೋರ್ಚಾ ಸಮಾವೇಶ ನಡೆಯಲಿದೆ.
ಬಿ.ಎಸ್.ಜಗದೀಶ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ