ಜೆಡಿಎಸ್ ತೊರೆದು ಕಾಂಗ್ರೆಸ್‌ನತ್ತ ಚಿತ್ತ: ಅಧಿಕೃತ ಘೋಷಣೆ ಮಾಡಿದ ಶಾಸಕ

By Suvarna News  |  First Published Aug 24, 2021, 6:17 PM IST

*ಕಾಂಗ್ರೆಸ್‌ನತ್ತ ಜೆಡಿಎಸ್ ಶಾಸಕ ಚಿತ್ತ
* ಜೆಡಿಎಸ್‌ ತೊರೆಯುವುದಾಗಿ ಅಧಿಕೃತವಾಗಿ ಹೇಳಿದ ಶಾಸಕ
* ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದು ಪಕ್ಕಾ 


ಮೈಸೂರು, (ಆ.24):  ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಜೆಡಿಎಸ್‌ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದ  ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಜೆಡಿಎಸ್‌ ತೊರೆಯುವುದು ಖಚಿತವಾಗಿದೆ.

ಹವದು...ಈ ಬಗ್ಗೆ ಇಂದು (ಆ.24) ಮೈಸೂರಿನಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುವ ವೇಳೆ  ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಹಿಂದೆ ಬಿಜೆಪಿ ಸೇರಲು ಒಲುವು ತೋರಿದ್ದ ಜಿಟಿಡಿ ಇದೀಗ ಕಾಂಗ್ರೆಸ್‌ ಸೇರುವುದು ಪಕ್ಕಾ ಆಗಿದೆ.

Latest Videos

undefined

ಶೀಘ್ರ ದೇವೇಗೌಡರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ?

ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಿದ್ದೇನೆ. ಕಾಂಗ್ರೆಸ್ ಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಟಿಕೆಟ್ ನೀಡುವ ಭರವಸೆ ಕೂಡ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಗೆ ನಾನು ಬಂದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ತಾವು ಸ್ಪರ್ಧಿಸಲ್ಲ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನನಗೆ ಹಾಗೂ ನನ್ನ ಮಗ ಇಬ್ಬರಿಗೂ ಕಾಂಗ್ರೆಸ್ ಟಿಕೆಟ್ ಕೇಳಿದ್ದೇನೆ. ಇಬ್ಬರಿಗೂ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿ ಬಣ ರಾಜಕೀಯವಿಲ್ಲ, ಒಗ್ಗಟ್ಟಿದೆ. ಅಭಿಮಾನಿಗಳಲ್ಲಿ ಬಣ ಮಾಡಿಕೊಂಡಿರಬಹುದು. ಆದರೆ ನಾಯಕರಲ್ಲಿ ಬಣ ರಾಜಕೀಯವಿಲ್ಲ. ಒಗ್ಗಟ್ಟಿನಿಂದಿದ್ದಾರೆ. ಹಾಗಾಗಿ ಕಾಂಗ್ರೆಸ್ ಸೇರುವ ಬಗ್ಗೆ ಚಿಂತನೆ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನದ ಬಳಿಕ ಜಿಟಿ ದೇವೇಗೌಡ ಅವರು ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡು ಪಕ್ಷದಿಂದ ದೂರ ಉಳಿದಿದ್ದರು, ಅಲ್ಲದೇ ಬಿಜೆಪಿ ನಾಯಕರ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಅವರು ಬಿಜೆಪಿ ಸೇರುfತತಾರೆ ಎನ್ನುವ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ನಡೆದಿದ್ದವು. ಆದ್ರೆ, ಇದೀಗ ಅವರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.

click me!