ಯತ್ನಾಳ್ ವಿರುದ್ದ ಅವಹೇಳನಕಾರಿ ಪೋಸ್ಟ್, ಶಾಸಕರ ಕೊಠಡಿಗೆ ಅಂಟಿಸಿದ ಬಿತ್ತಿಪತ್ರ

Published : Aug 24, 2021, 05:10 PM IST
ಯತ್ನಾಳ್ ವಿರುದ್ದ ಅವಹೇಳನಕಾರಿ ಪೋಸ್ಟ್, ಶಾಸಕರ ಕೊಠಡಿಗೆ ಅಂಟಿಸಿದ ಬಿತ್ತಿಪತ್ರ

ಸಾರಾಂಶ

* ಶಾಸಕ ಯತ್ನಾಳ್ ವಿರುದ್ದ ಅವಹೇಳನಕಾರಿ ಪೋಸ್ಟ್. * ಬಿಲ್ ಲಾಡೆನ್ ಗೆ ಹೋಲಿಸಿ ಪೋಸ್ಟರ್ ಹಾಕಿದ ಕಿಡಿಗೇಡಿಗಳು. * ಶಾಸಕರ ಭವನದ ಯತ್ನಾಳ್ ಕೊಠಡಿ ಗೆ ಭಿತ್ತಿಪತ್ರ ಅಟ್ಟಿಸಿರೋ ಕಿಡಿಗೇಡಿಗಳು.

ಬೆಂಗಳೂರು/ವಿಜಯಪುರ, (ಆ.24): ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅವಹೇಳನಕಾರಿ ಪೋಸ್ಟರ್ ಲಗತ್ತಿಸಲಾಗಿದೆ.

ನೀನು ಬಿನ್ ಲಾಡೆನ್ ಗೆ ಹುಟ್ಟಿದವ ಗಾ......ಎಂದು ಪೋಸ್ಟ್ ಮಾಡಿದ್ದು, ಅದನ್ನು ಶಾಸಕರ ಭವನದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕೊಠಡಿ ಬಾಗಿಲಿಗೆ  ಕಿಡಿಗೇಡಿಗಳು ಬಿತ್ತಿಪತ್ರ ಅಂಟಿಸಿದ್ದಾರೆ.

ಮತ್ತೆ ಗುಡುಗಿದ ಯತ್ನಾಳ್: ಅಫ್ಘಾನಿಸ್ತಾನ ವಿಚಾರದಲ್ಲಿ ಮೌನ ವಹಿಸಿದವರ ವಿರುದ್ಧ ವಾಗ್ದಾಳಿ

ಯಾರು ಇಲ್ಲದ ವೇಳೆ ಶಾಸಕರ ಭವನ 5ನೇ ಬ್ಲ್ಯಾಕ್ ನ ಕೊಠಡಿ 2001 ಕೊಠಡಿ  ಬಾಗಿಲು, ಗೋಡೆ ಮೇಲೆ ನೀನು ಬಿನ್ ಲಾಡೆನ್ ಗೆ ಹುಟ್ಟಿದವ ಗಾ.......ಎನ್ನುವ ಭಿತ್ತಿ ಪತ್ರವನ್ನು ಅಂಟಿಸಿದ್ದು,  ಶಾಸಕರ ಭವನಕ್ಕೆ ಹೋಗಿ ಈ ಕಿತಾಪತಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಅಫ್ಘಾನಿಸ್ತಾನ ವಿಚಾರದಲ್ಲಿ ಮೌನ ವಹಿಸಿರುವ ಬುದ್ದಿಜೀವಿಗಳು, ಚಿತ್ರನಟರಾದ ಅಮಿರ್‌ಖಾನ್, ಶಾರುಖಾನ್‌, ಸಲ್ಮಾನಖಾನ್, ರಾಹುಲ್ ಗಾಂಧಿ ಮತ್ತು ಸ್ವಾಮೀಜಿಗಳ ವಿರುದ್ಧ ಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹರಿಹಾಯ್ದಿದ್ದರು.

ಅಫ್ಘಾನಿಸ್ತಾನ ವಿಚಾರದಲ್ಲಿ ಮಾತನಾಡದ ಬುದ್ಧಿ ಜೀವಿಗಳು ತಾಲಿಬಾನ್‌ಗೆ ಹುಟ್ಟಿದ್ದಾರೆ. ಬುದ್ಧಿ ಜೀವಿಗಳು ಲದ್ದಿ ತಿಂದಿದ್ದಾರೆ. ಬುದ್ಧಿ ಜೀವಿಗಳು ತಾಲಿಬಾನಿ ಸಂತಾನ ಎಂದು ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದರು.  ಈ ಸಿಟ್ಟಿಗೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ