ಮೈಸೂರಿನಲ್ಲಿ ಡ್ರಗ್‌ ಮಾಫಿಯಾ ಬೆಳೆದಿದ್ದೇ ಸಿಎಂ ಸಿದ್ದರಾಮಯ್ಯ ಕೊಡುಗೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

Published : Jul 28, 2025, 04:47 PM ISTUpdated : Jul 28, 2025, 04:52 PM IST
R Ashok Vs Siddaramaiah

ಸಾರಾಂಶ

ಮೈಸೂರಿನಲ್ಲಿ ಡ್ರಗ್ ಮಾಫಿಯಾ ತಲೆ ಎತ್ತಿರುವುದು ಸಿದ್ದರಾಮಯ್ಯನವರ ಕೊಡುಗೆ ಎಂದು ಆರ್. ಅಶೋಕ್ ಟೀಕಿಸಿದ್ದಾರೆ. ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸರ್ಕಾರ ಡ್ರಗ್ ಮಾಫಿಯಾವನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಸಿಎಂ ಬದಲಾವಣೆ ಖಚಿತ ಎಂದು ಭವಿಷ್ಯ ನುಡಿದರು.

ಮೈಸೂರು (ಜು. 28): ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ನಮ್ಮಪ್ಪ ಸಿದ್ದರಾಮಯ್ಯ ಅವರೇ ಮೇಲು ಎಂದು ಡಾ.ಯತೀಂದ್ರ ಹೇಳಿದ್ದಾರೆ. ಇದಕ್ಕೆ ತಿರುಗೇಟು ಎಂಬಂತೆ ಮೈಸೂರಿನಲ್ಲಿ ಡ್ರಗ್‌ ಮಾಫಿಯಾ ತಲೆ ಎತ್ತಿರುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಡ್ರಗ್‌ ಮಾಫಿಯಾ ತಲೆ ಎತ್ತಿದೆ. ಇವರನ್ನು ಅವರ ಪುತ್ರ ಯತೀಂದ್ರ, ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಹೋಲಿಸಿದ್ದಾರೆ. ಮೈಸೂರಿನಲ್ಲಿ ಮಾದಕ ವಸ್ತುಗಳ ಫ್ಯಾಕ್ಟರಿಯೇ ಇರುವಾಗ ಗೃಹ ಇಲಾಖೆ ಏನು ಮಾಡುತ್ತಿದೆ? ಸರ್ಕಾರ ಇದುವರೆಗೂ ಎಚ್ಚೆತ್ತುಕೊಂಡಿಲ್ಲ. ಇದಕ್ಕೆ ಮಾಲೀಕ ಯಾರು? ಜಮೀನು ಕೊಟ್ಟವರು ಯಾರು? ನೂರಾರು ಕೋಟಿಯ ದಂಧೆಗೆ ಅವಕಾಶ ನೀಡಿದವರು ಯಾರು? ಸರ್ಕಾರ ಈ ವಿಚಾರದಲ್ಲಿ ಮೈ ಮರೆತಿದೆ. ಇದೇ ಸಿದ್ದರಾಮಯ್ಯನವರ ಕೊಡುಗೆ ಎಂದರು.

ಜೆಡಿಎಸ್‌ನಿಂದ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಆದರೆ ಕಾಂಗ್ರೆಸ್‌ನಲ್ಲೇ ಇದ್ದ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲಿಲ್ಲ. ಆದ್ದರಿಂದಲೇ ಖರ್ಗೆ ಸಿಎಂ ಆಗದಿರುವ ಬಗ್ಗೆ ಹೇಳಿದ್ದಾರೆ. ಈಗಲಾದರೂ ನನ್ನನ್ನು ಸಿಎಂ ಮಾಡಿ ಋಣ ತೀರಿಸಿ ಎಂದು ಅವರು ಹೇಳಿದ್ದಾರೆ. ಸಚಿವ ರಾಜಣ್ಣ ಈಗಾಗಲೇ ಕ್ರಾಂತಿಯ ಬಗ್ಗೆ ಹೇಳಿದ್ದಾರೆ. ಖರ್ಗೆಯವರಯು ಸರಿಯಾದ ಸಮಯಕ್ಕೆ ಮಾವಿನ ಹಣ್ಣಿಗೆ ಕಲ್ಲು ಹೊಡೆದಿದ್ದಾರೆ. ಅಕ್ಟೋಬರ್‌ ವೇಳೆಗೆ ಸಿಎಂ ಬದಲಾವಣೆ ಖಚಿತ ಎಂದರು.

ಎಸ್‌.ಎಂ.ಕೃಷ್ಣ ಸತ್ತ ನಂತರ ಅವರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತಾಡುತ್ತಿದ್ದಾರೆ. ಎಸ್‌.ಎಂ.ಕೃಷ್ಣ ಐಟಿ ಬಿಟಿಗೆ ನೋಡಿದ ಕೊಡುಗೆಯಿಂದಲೇ ಇಷ್ಟು ಆದಾಯ ರಾಜ್ಯಕ್ಕೆ ಬರುತ್ತಿದೆ. ನಾನು ಜ್ಯೋತಿಷ್ಯ ಹೇಳಲ್ಲ. ಆದರೆ ಖಚಿತವಾಗಿ ಒಪ್ಪಂದ ಆಗಿದೆ ಎಂದು ಶಾಸಕರೇ ಹೇಳಿದ್ದಾರೆ. ಎಲ್ಲ ಜಿಲ್ಲೆಗಳ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ ಅವರಿಗೆ ದೇವರೇ ಗತಿ. ಯಾವ ದೇವರು ವರ ನೀಡುತ್ತಾರೆ ಎಂದು ಅವರು ನೋಡಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲ್ಲ. ಸಿದ್ದರಾಮಯ್ಯ ಮೈಸೂರಿನಲ್ಲಿ ಒಂದೇ ಒಂದು ಕೆರೆ ಕಟ್ಟಿಸಿಲ್ಲ. ಆದರೂ ಅವರನ್ನು ಮಹಾರಾಜರಿಗೆ ಹೋಲಿಕೆ ಮಾಡುತ್ತಾರೆ. ಶಾಸಕರ ಜೊತೆ ಇವರು ಅಭಿವೃದ್ಧಿ ಬಗ್ಗೆ ಚರ್ಚೆಯೇ ಮಾಡಲ್ಲ. ಧರ್ಮಸ್ಥಳದಲ್ಲಿ ಆಗಿರುವ ಮರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಪ್ರಗತಿಪರ ಸಂಘಟನೆಗಳಿಗೆ ಅವರ ಪರವಾದ ವರದಿಯನ್ನೇ ಎಸ್‌ಐಟಿ ನೀಡಬೇಕು ಎಂದು ಬಯಸುತ್ತಾರೆ. ತಪ್ಪಿತಸ್ಥರು ಯಾರೆಂದು ಗೊತ್ತಾಗಲಿ. ಅದಕ್ಕೆ ಮುನ್ನವೇ ಕೆಟ್ಟ ಸುದ್ದಿಗಳನ್ನು ಹರಡುವುದು ಬೇಡ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದು ಬೇಡ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದ್ವೇಷಪೂರಿತ ದಾಳಿ ತಡೆಗೆ ರಕ್ಷಾ ಕವಚ ಈ ವಿಧೇಯಕ: ಸುಪ್ರೀಂ ಕೋರ್ಟ್‌ ವಕೀಲ ಸಂಕೇತ ಏಣಗಿ ಲೇಖನ
ಅಹಿಂದ, ಎಡಪಂಥೀಯರೇ ನಿಜವಾದ ದ್ವೇಷಭಾಷಣಕಾರರು: ಎನ್.ರವಿಕುಮಾರ್ ಲೇಖನ