* ಸಂಸದ ಪ್ರತಾಪ್ ಸಿಂಹಗೆ ಕೊರೊನಾ ಪಾಸಿಟಿವ್ ದೃಢ
* ಸಂಪರ್ಕಕ್ಕೆ ಬಂದಿರುವವರು ಕ್ವಾರಂಟೈನ್ ಆಗಿ ಎಂದು ಮನವಿ
* ಸ್ವಾಮೀಜಿ, ಸಚಿವರಿಗೆ, ಅಧಿಕಾರಿಗಳಿಗೆ ಆತಂಕ
ಮೈಸೂರು, (ಮೇ.11): ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಪ್ರತಾಪ್ ಸಿಂಹ ಇಂದು (ಮಂಗಳವಾರ) ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕಳೆದ ಕೆಲವು ದಿನಗಳಿಂದ ತಮ್ಮ ಕ್ಷೇತ್ರದಲ್ಲಿ ಕೊರೋನಾ ನಿಯಂತ್ರಣಕ್ಕೆ ಓಡಾಟ ನಡೆಸಿದ್ದರು. ಇದೀಗ, ಪ್ರತಾಪ್ ಸಿಂಹಗೆ ಕೊರೋನಾ ಪಾಸಿಟಿವ್ ಆಗಿದ್ದು, ತಮ್ಮ ಜೊತೆ ಸಂಪರ್ಕಕ್ಕೆ ಬಂದಿರುವವರು ಕ್ವಾರಂಟೈನ್ ಆಗಿ ಎಂದು ಮನವಿ ಮಾಡಿದ್ದಾರೆ.
undefined
ಆಕ್ಸಿಜನ್‌ಗಾಗಿ ವಿರಸ: ಆಮ್ಲಜನಕ ಕೋಟಾ ನಿಗದಿಗೆ ಸಿಎಂಗೆ ಪ್ರತಾಪ್ ಸಿಂಹ ಮನವಿ
Dear all, morning I went to see a patient at Sri.Shantaveri Gopal Gowda hospital n had a Rapid Antigen Test n it was negative. Yet I went for RTPCR n it turned out to be positive though I don’t hv any symptoms. Whoever came in contact with me, pls isolate yourself. Sorry.
— Pratap Simha (@mepratap)ಕೊರೋನಾ ನಿಯಂತ್ರಣಕ್ಕೆ ಪ್ರತಾಪ್ ಸಿಂಹ ಅವರು ಹಲವು ಕಡೆ ಹಲವರ ಜೊತೆ ಕ್ಷೇತ್ರದಾದ್ಯಂತ ಸುತ್ತಾಡಿದ್ದಾರೆ. ಇಂದು (ಮಂಗಳವಾರ) ಅವರ ಕೊರೋನಾ ವರದಿ ಬರುವುದಕ್ಕಿಂತ ಮೊದಲು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಟಿ ಸೋಮಶೇಖರ್ ರವರೊಂದಿಗೆ ನಿನ್ನೆ (ಸೋಮವಾರ) ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಪರಮಪೂಜ್ಯ ಶ್ರೀ ಗಳ ಆಶೀರ್ವಾದ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.