ಸಿಎಂ ಸಿದ್ದರಾಮಯ್ಯ ದಾಖಲೆಗೆ ಮೈಸೂರು ಸಂಸದ ಕಿಡಿ, ಕಾಗೆ ಮೇಲೆ ಕಪ್ಪು ಚುಕ್ಕೆ ಲೆಕ್ಕ ಹಾಕಲು ಆಗುತ್ತಾ? ಯದುವೀರ್ ಪ್ರಶ್ನೆ

Published : Jan 06, 2026, 06:13 PM IST
Yaduveer Wadiyar

ಸಾರಾಂಶ

ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ, ಮೈಸೂರು ವಿಮಾನ ನಿಲ್ದಾಣ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದ್ದಾರೆ.  

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಿಎಂ ದೇವರಾಜ್ ಅರಸು ಅವರ ಅವಧಿಯ ಆಡಳಿತದ ದಾಖಲೆಯನ್ನು ಬ್ರೇಕ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾತನಾಡಿರುವ ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದನ್ನು ಸ್ವಾಗತಿಸುತ್ತೇವೆ, ಅಭಿನಂದಿಸುತ್ತೇವೆ ಆದರೆ ಅವರಿಗೆ ಸಾಕಷ್ಟು ಸಮಯ ಸಿಕ್ಕಿದ್ದರೂ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಆಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿತ್ತು. ವಿಮಾನ ನಿಲ್ದಾಣಗಳ ವಿಷಯಕ್ಕೆ ಬಂದರೆ, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲೂ ಅಭಿವೃದ್ಧಿ ಆಗುತ್ತಿದೆ. ಆದರೆ, ಮೈಸೂರಿನಲ್ಲಿ ನಮ್ಮ ತಾತ ಮಹಾರಾಜರು ನೀಡಿದ್ದ ಜಮೀನಿನಲ್ಲಿ ಒಂದು ರನ್ ವೇ ಕೂಡ ಆಗಿಲ್ಲ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ಘೋಷಣೆಯಷ್ಟೇ ಆಗಿದ್ದು, ನೆಲಮಟ್ಟದಲ್ಲಿ ಕೆಲಸ ನಡೆಯುತ್ತಿಲ್ಲ ಎಂದು ಅವರು ಟೀಕಿಸಿದರು.

ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿತ್ತು

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದು ಒಳ್ಳೆಯದೇ. ನಾವೆಲ್ಲರೂ ಅದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಅವರಿಗೆ ಸಾಕಷ್ಟು ಕಾಲಾವಕಾಶ ಸಿಕ್ಕಿತ್ತು. ಆ ಅವಧಿಯಲ್ಲಿ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಬಹುದಿತ್ತು ಎಂದು ಯದುವೀರ್ ಒಡೆಯರ್ ಹೇಳಿದರು.

ಸರ್ಕಾರದ ಮೇಲೆ ಹಲವು ಆರೋಪಗಳು

ಸಿದ್ದರಾಮಯ್ಯ ಹಾಗೂ ಸರ್ಕಾರದ ಮೇಲೆ ಸಾಕಷ್ಟು ಆರೋಪ ಕೇಳಿ ಬಂದಿತ್ತು ಎಂಬ ವಿಚಾರವಾಗಿ ಮಾತನಾಡಿದ ಒಡೆಯರ್, ಕಪ್ಪು ಚುಕ್ಕೆ ಸರ್ಕಾರಕ್ಕೆ ಸಾಕಷ್ಟು ಇದೆ. ಈಗ ಕಾಗೆ ಮೇಲೆ ಕಪ್ಪು ಚುಕ್ಕೆ ಲೆಕ್ಕ ಹಾಕಲು ಆಗುತ್ತಾ. ಸಾಕಷ್ಟು ಹಗರಣ ಬಗ್ಗೆ ನಾವು ಹೇಳಿದ್ದೇವೆ. ಮುಡಾ ಹಾಗೂ ವಾಲ್ಮೀಕಿ , ಗೃಹ ಲಕ್ಷ್ಮೀ ಯಲ್ಲೂ ಸರ್ಕಾರದ ವೈಫಲ್ಯ ಬಗ್ಗೆ ಚರ್ಚೆ ಮಾತಾಡಿದ್ದೇವೆ. ಮೈಸೂರು ಡ್ರಗ್ಸ್ ಕಾರ್ಖಾನೆ ಬಗ್ಗೆ ನಾವು ಅಧಿವೇಶನದಲ್ಲಿ ಚರ್ಚೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಎರಡು ಡ್ರಗ್ಸ್ ಘಟಕ ಮೇಲೆ ದಾಳಿ ಮಾಡಿದ್ದಾರೆ. ಮಹಾರಾಷ್ಟ್ರ ಪೊಲೀಸರು ಇಲ್ಲಿ ಬಂದು ದಾಳಿ ಮಾಡ್ತಾರೆ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು

“ಪೊಲೀಸರಿಗೆ ಸ್ವಾತಂತ್ರ್ಯ ಕೊಡಬೇಕು”

ನಮ್ಮ ರಾಜ್ಯದಲ್ಲೂ ಉತ್ತಮ ಪೊಲೀಸ್ ಅಧಿಕಾರಿಗಳು ಇದ್ದಾರೆ. ಆದರೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುತ್ತಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡಿದೆ. ಇದರಿಂದ ಕೆಲವು ಅಧಿಕಾರಿಗಳು ಸಹ ಅಕ್ರಮಗಳಲ್ಲಿ ಶಾಮೀಲಾಗಿದ್ದಾರೆ ಎಂಬ ಸಂದೇಹಗಳು ಹುಟ್ಟಿವೆ ಎಂದು ಹೇಳಿದರು.

“ಪ್ರಗತಿ ಪರ ರಾಜ್ಯದ ಹೆಸರು ಕಳೆದುಹೋಗುತ್ತಿದೆ”

ಒಂದು ಕಾಲದಲ್ಲಿ ಕರ್ನಾಟಕವನ್ನು ಪ್ರಗತಿಪರ ರಾಜ್ಯ ಎಂದು ಗುರುತಿಸಲಾಗುತ್ತಿತ್ತು. ಆದರೆ ಇಂದು ಆ ಹೆಸರಿಗೆ ಮಸಿ ಬಳಿಯುವ ಪರಿಸ್ಥಿತಿ ಬಂದಿದೆ. ಭ್ರಷ್ಟಾಚಾರ ಮತ್ತು ದುಶಾಸನದಿಂದಾಗಿ ಕರ್ನಾಟಕದ ಹೆಸರು ಹಾಳಾಗುತ್ತಿದೆ ಎಂದು ಯದುವೀರ್ ಒಡೆಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಾಮುಲು ಬರದಿದ್ರೆ ರೆಡ್ಡಿ ಕಥೆ ಅಂದೇ ಮುಗಿಯುತ್ತಿತ್ತು!: ಬಳ್ಳಾರಿ ಗಲಾಟೆಗೆ ರೇಣುಕಾಚಾರ್ಯ ಬಿಗ್ ಟ್ವಿಸ್ಟ್!
ದೀರ್ಘಾವಧಿ ಸಿಎಂ ಬೆನ್ನಲ್ಲೇ, ಪೂರ್ಣಾವಧಿ ಸಿಎಂ ಆಸೆ ಬಿಚ್ಚಿಟ್ಟ ಸಿದ್ದರಾಮಯ್ಯ! ಹೈಕಮಾಂಡ್ ಮೇಲೆ ಹೆಚ್ಚಿದ ವಿಶ್ವಾಸ!