'ನನ್ನ ಸೌಮ್ಯ ಸ್ವಭಾವ ದೌರ್ಬಲ್ಯವಲ್ಲ..' ಕೈ ಮುಗಿಯುತ್ತೇನೆ, ಗಲಾಟೆ ನಿಲ್ಲಿಸಿ ಎಂದರೂ ಕೇಳದ ವಿಪಕ್ಷಕ್ಕೆ ಸಲೀಂ ಎಚ್ಚರಿಕೆ

Kannadaprabha News   | Kannada Prabha
Published : Aug 25, 2026, 07:08 AM IST
"My gentle nature is not a weakness Speaker Salim warns the opposition,

ಸಾರಾಂಶ

ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಪಕ್ಷಗಳ ನಿರಂತರ ಗದ್ದಲದಿಂದಾಗಿ, ಸಭಾಪತಿ ಸಲೀಂ ಅಹಮದ್ ಅವರು ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಸಮಯಕ್ಕೆ ಸರಿಯಾಗಿ ಹಾಜರಿರದ ಸಚಿವರಿಗೂ ಅವರು ಎಚ್ಚರಿಸಿದರು. ನನ್ನ ಸೌಮ್ಯ ಸ್ವಭಾವ ದೌರ್ಬವಲ್ಲ. ಕಠಿಣ ಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಸಿದರು.

ವಿಧಾನ ಪರಿಷತ್‌ (ಆ.25): ‘ನನ್ನ ಸೌಮ್ಯ ಸ್ವಭಾವವನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ. ಕಟು ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ನಿರ್ಮಿಸಬೇಡಿ. ಕಳೆದ ಆರು ದಿನಗಳಿಂದ ಕಲಾಪ ಹಾಳಾಗುತ್ತಿದೆ. ಇದೇ ರೀತಿ ಗಲಾಟೆ ಮುಂದುವರೆಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಸಭಾಪತಿ ಸಲೀಂ ಅಹಮದ್‌ ಎಚ್ಚರಿಸಿದ ಪ್ರಸಂಗ ನಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಎಂದಿನಂತೆ ಪ್ರತಿಭಟನೆ ನಡೆಸಿ ಘೋಷಣೆ, ಧಿಕ್ಕಾರ ಕೂಗತೊಡಗಿದಾಗ ಸಭಾಪತಿಗಳು ಕೈ ಮುಗಿಯುತ್ತೇನೆ, ಗಲಾಟೆ ನಿಲ್ಲಿಸಿ ಎಂದು ಮನವಿ ಮಾಡಿದರು, ಆದರೆ ಇದಕ್ಕೆ ಪ್ರತಿಪಕ್ಷಗಳು ಸ್ಪಂದಿಸದೇ ಘೋಷಣೆ ಮುಂದುವರೆಸಿದಾಗ ಸಚಿವ ಬಸವರಾಜ ರಾಯರೆಡ್ಡಿ ಅವರು, ಸಭಾಪತಿಗಳು ಮನವಿ ಮಾಡಿದರೂ ಕೇಳದೆ ಇರುವುದು ನಿಮಗೆ ಗೌರವ ತರುವ ವಿಷಯವಲ್ಲ. ಸಚಿವ ಬಿ. ನಾಗೇಂದ್ರ ವಿಷಯದಲ್ಲಿ ಸೂಚನೆ ನೀಡಿದರೆ ಸರ್ಕಾರ ಚರ್ಚಿಸಲು ಸಿದ್ಧ ಎಂದರು. ಸಭಾ ನಾಯಕ ಡಾ. ಯತೀಂದ್ರ ಅವರು, ಸದನ ಹಾಗೂ ಸದಸ್ಯರಿಗೆ ಅಗೌರವ ತೋರಿಸುತ್ತಿರುವ ಪ್ರತಿಪಕ್ಷಗಳ ಸದಸ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದರು.

ಸದನ ಸಚಿವರಿಗೆ ಕಾಯಲ್ಲ- ಸಲೀಂ ಗರಂ:

ಪ್ರಶ್ನೋತ್ತರ ವೇಳೆಯಲ್ಲಿ ಸಂಬಂಧಪಟ್ಟ ಸಚಿವರು ಹಾಜರು ಇರದೇ ಇರುವುದನ್ನು ಗಮನಿಸಿದ ಸಭಾಪತಿ ಸಲೀಂ ಅಹಮದ್‌ ಅವರು, ಈ ಸದನ ಸಚಿವರಿಗೆ ಕಾಯುವುದಲ್ಲ. ಸಚಿವರು ಬಂದು ಸದನಕ್ಕಾಗಿ ಕಾಯಬೇಕು. ನೀವು ಸರಿಯಾದ ಸಮಯಕ್ಕೆ ಬರಬೇಕು, ಇದು ನಮ್ಮ ಎಚ್ಚರಿಕೆ. ಸಮಯಕ್ಕೂ ಅರ್ಧ ಗಂಟೆ ಮೊದಲೇ ಸಚಿವರು ಬಂದು ಕಾಯಬೇಕು ಎಂದು ಗದ್ದಲದ ನಡುವೆಯೇ ಸಭಾಪತಿಗಳು ಕೊಂಚ ಗರಂ ಆಗಿ ಎಚ್ಚರಿಕೆ ನೀಡಿದರು.

ಹೊರ ಹಾಕುವ ಪ್ರಸ್ತಾಪ ಜಾರಿ ಇಲ್ಲ

ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಪಕ್ಷದ ಸದಸ್ಯರುಗಳನ್ನು ನಿಯಮ 327(1)(2)ರ ಪ್ರಕಾರ ಸದನದಿಂದ ಹೊರ ಹಾಕುವ ಪ್ರಸ್ತಾವವನ್ನು ಆಡಳಿತ ಪಕ್ಷ ಸಭಾನಾಯಕರಿಗೆ ಸಲ್ಲಿಸಿತ್ತು.

ಬೆಳಗ್ಗೆ ಕಲಾಪ ಆರಂಭವಾದ ಕೆಲ ನಿಮಿಷದಲ್ಲಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ತಾವು ಸಲ್ಲಿಸಿರುವ ಪ್ರಸ್ತಾವನೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದರು. ಆದರೆ ಸಭಾಪತಿಗಳು ಪ್ರಶ್ನೋತ್ತರ, ಶೂನ್ಯವೇಳೆ ನಂತರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ದಿಢೀರೆಂದು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಹಿನ್ನೆಲೆಯಲ್ಲಿ ವಿಪಕ್ಷ ಸದಸ್ಯನ್ನು ಹೊರ ಹಾಕುವ ಪ್ರಸಂಗ ನಡೆಯಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೇನಾಮಿ ಹೆಸರಲ್ಲಿ ನೈಸ್ ಕಂಪನಿ ಖರೀದಿಗೆ ಸಿಎಂ ಯತ್ನ; ಮುಂದಿನ ವಾರವೇ ದಾಖಲೆ ಬಿಡುಗಡೆ ಮಾಡುವೆ: ಹೆಚ್‌ಡಿಕೆ ಹೇಳಿಕೆ ಸಂಚಲನ!
BJP Protest: ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ತಲೆದಂಡಕ್ಕೆ ಗದ್ದಲ, 3 ದಿನ ಮೊದಲೇ ಕಲಾಪ ಖತಂ! ನಿನ್ನೆ ಏನೇನಾಯ್ತು?