ಶಿಗ್ಗಾಂವಿ ಉಪಚುನಾವಣಾ ಕದನ: ನನ್ನ ಸ್ಪರ್ಧೆ ಬೊಮ್ಮಾಯಿ ನಿರ್ಧಾರವಲ್ಲ, ಭರತ್

By Girish Goudar  |  First Published Nov 10, 2024, 11:53 AM IST

ಒಂದು ಕ್ಷೇತ್ರದಲ್ಲಿ ಸಾಕಷ್ಟು ಜನ ಕಾರ್ಯಕರ್ತರು, ಮುಖಖಂಡರು ಆಕಾಂಕ್ಷಿಗಳಿರುತ್ತಾರೆ. ನನಗೆ ಸಿಕ್ಕಿದ್ದರಿದರಿಂದ ಉಳಿದವರ ಭವಿಷ್ಯ ಮಸುಕಾಗಿಸುಗುತ್ತಿದೆ ಅನಿಸುತ್ತಿಲ್ಲ, ಕಾರ ಮಸುಕಾಗು ಕಾರಣ ಇದು. ಹೈಕಮಾಂಡ್ ತೀರ್ಮಾನ ಮಾಡಿದ ಹೈಕಮಾಂಡ್ ತೀರ್ಮಾನ ಮಾಡಿದ ಬಳಿಕ ಎಲ್ಲರೂ ಅದನ್ನು ಒಪ್ಪಿ ಕೆಲಸ ಮಾಡುವುದು ಪಕ್ಷದ ಸಿದ್ಧಾಂತ. ಸಾಮಾನ್ಯ ಕಾರ್ಯಕರ್ತನಾಗಿ ಕಣಕ್ಕಿಳಿದಿದ್ದೇನೆ ಅಷ್ಟೇ: ಭರತ್ ಬೊಮ್ಮಾಯಿ


ಮಲ್ಲಿಕಾರ್ಜುನ ಸಿದ್ದಣ್ಣವರ 

ಶಿಗ್ಗಾಂವಿ(ನ.10): ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬೊಮ್ಮಾಯಿ ಕುಟುಂಬದ ಕುಡಿ ಭರತ್ ಬೊಮ್ಮಾಯಿ ಅವರ ಪಾಲಿಗಿದು ಮೊದಲ ಚುನಾವಣೆ. ತಂದೆ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರ ತೊರೆದು ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಪುತ್ರ ಭರತ್ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮ್ಮ ಬಿರುಸಿನ ಪ್ರಚಾರದ ಮಧ್ಯೆ ಅವರು ಚುನಾವಣೆ, ರಾಜಕೀಯದ ಕುರಿತು 'ಕನ್ನಡಪ್ರಭ'ಕ್ಕೆ ಮುಖಾಮುಖಿಯಾಗಿದ್ದಾರೆ. 

Tap to resize

Latest Videos

undefined

• ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದಿದ್ದೀರಿ. ಏನನಿಸುತ್ತಿದೆ? 

ತಂದೆ ಬಸವರಾಜ ಬೊಮ್ಮಾಯಿ ಅವರ 2018, 2023ರ ವಿಧಾನಸಭೆ ಮತ್ತು ಪ್ರಸಕ್ತ 2024ರ ಲೋಕಸಭಾ ಚುನಾವಣೆ ಲೋಕಸಭಾ ಚುನಾವಣೆಯ ಪೂರ್ಣ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡಿದ್ದೇನೆ. ಈಗ ಸ್ವತಃ ನಾನೇ ಕಣಕ್ಕಿಳಿದಿದ್ದೇನೆ. ಆ ಅನುಭವಗಳನ್ನು ನನ್ನ ಚುನಾವಣೆಗೆ ಬಳಸಿಕೊಳ್ಳುತ್ತಿದ್ದೇನೆ. 

ಶಿಗ್ಗಾಂವಿ: ತಾವೇ ಮಂಜೂರು ಮಾಡಿದ್ದ ಮನೆ ಗೃಹ ಪ್ರವೇಶಕ್ಕೆ ಬೊಮ್ಮಾಯಿ

• ಇಷ್ಟು ಬೇಗ ರಾಜಕೀಯ ಅಖಾಡಕ್ಕೆ ಇಳಿಯುತ್ತೇನೆಂಬ ನಿರೀಕ್ಷೆ ನಿಮಗೆ ಇತ್ತಾ? 

ಇಲ್ಲ, ನಾನು ಆಕಾಂಕ್ಷಿಯೂ ಆಗಿರಲಿಲ್ಲ. ಹಲವು ಉದ್ಯಮಗಳನ್ನು ನಡೆಸುತ್ತಿದ್ದೇನೆ. ನಾನಾಯಿತು ನನ್ನ ಉದ್ಯಮವಾಯಿತು ಎಂದು ಇದ್ದೆ. ಆದರೆ ನನ್ನ ತಂದೆ ಸಚಿವರಾಗಿದ್ದಾಗ ಮತ್ತು ಮುಖ್ಯಮಂತ್ರಿಗಳಾಗಿದ್ದಾಗ ಕೇತ್ರದಲ್ಲಿ ನಾನೇ ಮುಂದೆ ನಿಂತು ಹಲವು ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ನಾನು ಬಿಜೆಪಿ ಅಭ್ಯರ್ಥಿಯಾಗಿರುವುದು ಮಾಧ್ಯಮಗಳ ಮೂಲಕವೇ ಗೊತ್ತಾಯಿತು. ಇಷ್ಟು ಬೇಗ ರಾಜಕೀಯಕ್ಕೆ ಬರುವ ಯಾವ ನಿರೀಕ್ಷೆಯೂ ಇರಲಿಲ್ಲ.

• ನಿಮ್ಮ ತಂದೆ ಮತ್ತು ಅಜ್ಜ ಇಬ್ಬರೂ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಅವರ ರಾಜಕೀಯ ಬದುಕಿನಿಂದ ಏನನ್ನು ಕಲಿತಿದ್ದೀರಿ? 

ಇಬ್ಬರಲ್ಲೂ ನಾನು ಕಂಡಿದ್ದು ದೂರದರ್ಶಿತ್ವ. ಪ್ರತಿಯೊಂದರಲ್ಲೂ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುವ ಗುಣ ಅವರದು. ಅವರ ಕಠಿಣ ಪರಿಶ್ರಮ, ಕಾರ್ಯತತ್ಪರತೆ, ದೃಢ ನಿರ್ಧಾರ, ವಿಲ್ ಪವರ್ ನೋಡಿದ್ದೇನೆ. ಎಲ್ಲದಕ್ಕಿಂತ ಮುಖ್ಯವಾಗಿ ಅವರ ಪೀಪಲ್ ಪಾಲಿಟಿಕ್, ಅವರು ಜನರ ಜೊತೆ, ಜನರ ಮಧ್ಯೆ ನಿಂತು ಕೆಲಸ ಮಾಡಿದ್ದನ್ನು ಹತ್ತಿರದಿಂದ ನೋಡಿದ್ದೇನೆ. ಅದನ್ನು ನಾನೂ ನನ್ನ ಬದುಕಿನಲ್ಲಿ ರೂಢಿಸಿಕೊಳ್ಳುತ್ತೇನೆ. 

• ಒತ್ತಡಕ್ಕೆ ಮಣಿದು ಕಣಕ್ಕಿಳಿದಿದ್ದೀರಾ ಅಥವಾ ನಿಮಗೂ ಅವರಂತೆ ರಾಜಕಾರಣಿ ಆಗುವ ಆಸೆ ಮನದಲ್ಲಿ ಮೊದಲೇ ಇತ್ತಾ? 

ಒತ್ತಡಕ್ಕೆ ಮಣಿದು ಕಣಕ್ಕಿಳಿದಿಲ್ಲ. ನಾನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ನಮ್ಮ ಹೈಕಮಾಂಡ್, ಸಂಸದೀಯ ಸಮಿತಿ ಕ್ಷೇತ್ರದಲ್ಲಿ ಹಲವು ಸಮೀಕ್ಷೆಗಳನ್ನು ಮಾಡಿಸಿದಾಗ ಅಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಹೀಗಾಗಿ ನನ್ನನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಹೀಗಾಗಿ ನನಗೆ ಮತ್ತು ನನ್ನ ತಂದೆಗೆ ಹೈ ಕಮಾಂಡ್ ನಿರ್ಧಾರ ಒಪ್ಪುವುದು ಅನಿವಾರ್ಯವಾಯಿತು.

• ತಂದೆ ಮತ್ತು ಅಜ್ಜನಂತೆ ನಿಮಗೆ ಜನಸೇವೆ, ಹೋರಾಟದ ಹಿನ್ನೆಲೆ ಇಲ್ಲ. ಹೀಗಿರುವಾಗ ಜನರ ಮಧ್ಯೆ ಹೇಗೆ ನಿಲ್ಲುತ್ತೀರಿ? 

ನನಗೆ ಹೋರಾಟದ ಹಿನ್ನೆಲೆ ಇಲ್ಲ ನಿಜ. ಆದರೆ ಹೋರಾಟಕ್ಕೆ ಈಗಲೂ ಸಾಕಷ್ಟು ಅವಕಾಶಗಳಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ನಾನೂ ಹೋರಾಡುತ್ತೇನೆ. ಗುಣಮಟ್ಟದ ಶಿಕ್ಷಣ, ಯುವಕರಿಗೆ ಉದ್ಯೋಗ, ಮುಂದಿನ ಪೀಳಿಗೆಯ ಭವಿಷ್ಯ ನಿರ್ಮಾಣ, ರೈತರ ಆದಾಯ ಹೆಚ್ಚಳ ಇತ್ಯಾದಿ ವಿಷಯದಲ್ಲಿ ಸಂಘಟಿತ ಹೋರಾಟ ಮಾಡುತ್ತೇನೆ. 

ಪ್ರಚಾರದ ವೇಳೆ ಕ್ಷೇತ್ರದ ಜನತೆ ಬೊಮ್ಮಾಯಿ ಅವರ ಪುತ್ರ ಎನ್ನುವ ಕಾರಣಕ್ಕೆ ಗೌರವಿಸುತ್ತಾರೆ ಅನಿಸುವುದಿಲ್ಲವೇ? 

ಅಫ್‌ಕೋರ್ಸ್ ನಾನು ಬಸವರಾಜ ಬೊಮ್ಮಾಯಿ ಅವರ ಪುತ್ರ, ಅದರ ಜತೆಗೆ ಬಿಜೆಪಿ ಅಭ್ಯರ್ಥಿಯೂ ಹೌದು. ತಂದೆಯವರು ಕ್ಷೇತ್ರದಲ್ಲಿ ನಾಲ್ಕುಬಾರಿ ಗೆಲುವು ಸಾಧಿಸಿದ್ದಾರೆ. ಸಾಕಷ್ಟು ಕೆಲಸಗಳನ್ನು ಮಾಡಿ ಜನರ ಮನದಲ್ಲಿ ಉಳಿದಿದ್ದಾರೆ. ನಾನೂ ಸಾಕಷ್ಟು ಪರಿಚಿತ ಆಗಿರುವ ಕಾರಣ ಜನ ನನ್ನನ್ನು ಗುರುತಿಸುತ್ತಿದ್ದಾರೆ ಮತ್ತು ಮನಃಪೂರ್ವಕವಾಗಿ ಬೆಂಬಲಿಸುತ್ತಿದ್ದಾರೆ. ನಾನೂ ನನ್ನ ತಂದೆಯಂತೆ ನಿಷ್ಠೆಯಿಂದ ಇಲ್ಲಿನ ಜನತೆಯೆ ಸೇವೆ ಮಾಡುತ್ತೇನೆ. 

• ಕುಟುಂಬ ರಾಜಕಾರಣದ ಬಗ್ಗೆ ಎಲ್ಲೆಡೆ ಅಪಸ್ವರ ಕೇಳಿಬರುತ್ತಿದೆ. ರಾಜಕೀಯ ಕುಟುಂಬದ ಮೂರನೇ ತಲೆಮಾರಿನ ತಮ್ಮನ್ನು ಜನ ಸ್ವೀಕರಿಸುತ್ತಾರೆನ್ನುವ ವಿಶ್ವಾಸವಿದೆಯೇ? 

ಮೊದಲನೆಯದಾಗಿ ನಾನು ಟಿಕೆಟ್ ಆಕಾಂಕ್ಷಿಯೇ ಆಗಿರಲಿಲ್ಲ. ನನ್ನ ತಂದೆಯವರೂ ನನ್ನನ್ನು ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದು ಸಷ್ಟವಾಗಿ ಹೇಳಿದರು. ಇಲ್ಲಿಯ ಕೋ‌ಕಮೀಟಿಯ ಶಿಫಾರಸಿನಂತೆ ಹೈಕಮಾಂಡ್ ನನ್ನ ಹೆಸರನ್ನು ಈ ಕ್ಷೇತ್ರಕ್ಕೆ ಅಂತಿಮಗೊಳಿಸಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಹೈಕಮಾಂಡ್ ತೀರ್ಮಾನವನ್ನು ನಾನು ಒಪ್ಪಲೇಬೇಕು. ಇದರಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆಯೇ ಬರುವುದಿಲ್ಲ. 

• ಬಸವರಾಜ ಬೊಮ್ಮಾಯಿ ಅವರು ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದರು ಎನ್ನುವ ಆರೋಪವಿದೆಯಲ್ಲ? 
ನಾನು ಸ್ಪಷ್ಟಪಡಿಸುವುದು ಇಷ್ಟೆ, ಇದು ನನ್ನ ತಂದೆಯವರ ನಿರ್ಧಾರ ಅಲ್ಲ, ಹೈಕಮಾಂಡ್ ನಿರ್ಧಾರ. ಹಾಗಾಗಿ ಯಾರನ್ನೂ ಮೂಲೆಗುಂಪು ಮಾಡುವ ಪ್ರಮೆಯವೇ ಬರುವುದಿಲ್ಲ. ಎಲ್ಲರೂ ನಮ್ಮೊಂದಿಗಿದ್ದಾರೆ. ಎಲ್ಲರೂ ಸೇರಿ ಇಲ್ಲಿ ಬಿಜೆಪಿ ಗೆಲ್ಲಿಸಬೇಕಿದೆ. 

• ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ದುಂಡಿಗೌಡರ್ ಅಸಮಾಧಾನಗೊಂಡಿದ್ದಾರೆ. ಅವರನ್ನೆಲ್ಲ ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೀರಿ? 
ನೋ ಕಮೆಂಟ್ಸ್, ಅವರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ಮಾಡುವುದಿಲ್ಲ. ಬದಲಾಗಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ಮಾಡಿ ಬಿಜೆಪಿ ಗೆಲ್ಲಿಸುವುದೊಂದೇ ನಮ್ಮ ಮುಂದಿರುವ ಗುರಿ. 

ದುಂಡಿಗೌಡರ್‌ ಬಂಡಾಯವೆದ್ದು ಸ್ಪರ್ಧೆ ಮಾಡದಿದ್ದರೂ ತಮ್ಮಿಂದ ಅಂತರ ಕಾಯ್ದುಕೊಂಡಿರುವುದು ಅಪಾಯ ಅನಿಸುವುದಿಲ್ಲವೇ? 

ನೋಡಿ, ಇವತ್ತು ಜನರ ಅಪೇಕ್ಷೆಯಂತೆ ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ. ಯಾರೇ ಬಿಜೆಪಿಯ ಕಾರ್ಯಕರ್ತರಿದ್ದರೂ ಪಕ್ಷದ ನಿರ್ಧಾರದಂತೆ ಕೆಲಸ ಮಾಡಬೇಕು. ಪಕ್ಷದ ನಿರ್ಧಾರ ಧಿಕ್ಕರಿಸುವವರು, ವಿರೋಧಿಸುವವರನ್ನು ಪಕ್ಷನೋಡಿಕೊಳ್ಳುತ್ತದೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಮತಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಅದನ್ನು ಈಗ ಹೇಗೆ ಸರಿಪಡಿಸಿಕೊಳ್ಳುತ್ತೀರಿ? 

ನೋಡಿ, ಇಲ್ಲಿ ತಾವೊಂದು ವಿಚಾರ ಗಮನಿಸಬೇಕು. ಲೋಕಸಭೆ ಚುನಾವಣೆ ಡೈನಾಮಿಕ್ಸ್ ಬೇರೆ, ವಿಧಾನಸಭಾ ಚುನಾವಣೆ ಡೈನಾಮಿಕ್ಸ್ ಬೇರೆ. ಪ್ರಜಾಪ್ರಭುತ್ವದಲ್ಲಿ ಗೆಲುವು ಗೆಲುವೇ. ಈ ಚುನಾವಣೆಯಲ್ಲಿ ಆ ಕೊರತೆಯನ್ನು ನೀಗಿಸಿಕೊಳ್ಳುತ್ತೇವೆ. 

ಬಸವರಾಜ ಬೊಮ್ಮಾಯಿ ಅವರು ನಾಲ್ಕು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರಲ್ಲ? 

ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಸುತ್ತಾಡಿ ಪ್ರಚಾರ ಮಾಡಿದ್ದಾರೆ. ಅವರಿಗೆ ಉತ್ತಮ ರಸ್ತೆ, ನೀರಾವರಿ, ಆಶ್ರಯ ಮನೆಗಳು, ಶಾಲಾ ಕಟ್ಟಡಗಳು ಇತ್ಯಾದಿ ಕಂಡಿವೆ. ಆದಾಗ್ಯೂ ಈ ಮಾತು ಹೇಳಿರುವುದು ರಾಜಕ್ಕೀಯಕ್ಕಾಗಿ ಮಾತ್ರ. 

• ಶಿಗ್ಗಾಂವಿ ಕ್ಷೇತ್ರದ ಬಗ್ಗೆ ತಮ್ಮ ಕನಸುಗಳೇನು? 

ತಂದೆಯವರು ನೀರಾವರಿ, ಕೈಗಾರಿಕೆ ಸೇರಿ ಸಾಕಷ್ಟು ಕೆಲಸ ಮಾಡಿದ್ದಾರೆ. ನನ್ನ ಅವಧಿಯಲ್ಲಿ ವಿಶೇಷವಾಗಿ ಶಿಕ್ಷಣಕ್ಕೆ ಒತ್ತುಕೊಡುತ್ತೇನೆ. ಮಾನು ಫಾ. ಬ್ರಾ ಕರ್‌ಕಂಪೆನಿಗಳನ್ನು ತರಬೇಕಿದೆ. ' ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ರೈತರ ಆದಾಯ ಹೆಚ್ಚಿಸಲು ಆದ್ಯತೆ ನೀಡುತ್ತೇನೆ. ಮಹಿಳೆಯರು, ಯುವಕರು, ಬಡವರ ಪರವಾಗಿ ಕಾರ್ಯಕ್ರಮ ರೂಪಿಸಿ ಕೆಲಸ ಮಾಡುತ್ತೇನೆ.

ಕರ್ನಾಟಕ ಮಾಡೆಲ್‌ ಇಡೀ ದೇಶಕ್ಕೆ ಮಾದರಿಯಾಗಿದೆ: ಡಿ.ಕೆ.ಶಿವಕುಮಾರ್

• ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಗಾಗಿ ದಶಕಗಳಿಂದ (ದುಡಿದ ಸಾಕಷ್ಟು ಕಾರ್ಯಕರ್ತರಿದ್ದರೂ ಅವರನ್ನು ಹಿಂದಿಕ್ಕಿ ತಾವು ಟಿಕೆಟ್ ಪಡೆದಿದ್ದೀರಿ. ಅವರ ರಾಜಕೀಯ ಭವಿಷ್ಯ ಆತಂತ್ರ ವಾಗುವುದಿಲ್ಲವೇ? 

ಒಂದು ಕ್ಷೇತ್ರದಲ್ಲಿ ಸಾಕಷ್ಟು ಜನ ಕಾರ್ಯಕರ್ತರು, ಮುಖಖಂಡರು ಆಕಾಂಕ್ಷಿಗಳಿರುತ್ತಾರೆ. ನನಗೆ ಸಿಕ್ಕಿದ್ದರಿದರಿಂದ ಉಳಿದವರ ಭವಿಷ್ಯ ಮಸುಕಾಗಿಸುಗುತ್ತಿದೆ ಅನಿಸುತ್ತಿಲ್ಲ, ಕಾರ ಮಸುಕಾಗು ಕಾರಣ ಇದು. ಹೈಕಮಾಂಡ್ ತೀರ್ಮಾನ ಮಾಡಿದ ಹೈಕಮಾಂಡ್ ತೀರ್ಮಾನ ಮಾಡಿದ ಬಳಿಕ ಎಲ್ಲರೂ ಅದನ್ನು ಒಪ್ಪಿ ಕೆಲಸ ಮಾಡುವುದು ಪಕ್ಷದ ಸಿದ್ಧಾಂತ. ಸಾಮಾನ್ಯ ಕಾರ್ಯಕರ್ತನಾಗಿ ಕಣಕ್ಕಿಳಿದಿದ್ದೇನೆ ಅಷ್ಟೇ.

click me!