ರಾಜೀನಾಮೆಗೂ ಮುನ್ನ ಮಹತ್ವದ ನಿರ್ಧಾರ, ಔರಂಗಬಾದ್ ನಗರ ಹೆಸರು ಬದಲಾಯಿಸಿದ ಠಾಕ್ರೆ!

By Suvarna NewsFirst Published Jun 29, 2022, 10:11 PM IST
Highlights
  • ರಾಜೀನಾಮೆ ಮುನ್ನ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
  • ಔರಂಗಬಾದ್ ಹಾಗೂ ಒಸಮಾನಾಬಾದ್ ಹೆಸರು ಬದಲಾವಣೆ
  • ಔರಂಗಬಾದ್ ಹೆಸರನ್ನ ಸಂಭಾಜಿ ನಗರ ಎಂದು ಬದಲಾವಣೆ

ಮುಂಬೈ(ಜೂ.29): ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ನಡುವೆ ಮಹಾ ವಿಕಾಸ ಅಘಾಡಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಪ್ರೀಂ ಕೋರ್ಟ್ ವಿಶ್ವಾಸ ಮತ ಯಾಚನೆಗೆ ಸಮ್ಮತಿ ಸೂಚಿಸಿದ ಬೆನ್ನಲ್ಲೇ ಸಿಎಂ ಉದ್ಧವ್ ಠಾಕ್ರೆ ಫೇಸ್‌ಬುಕ್ ಲೈವ್ ಮೂಲಕ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಸರ್ಕಾರ ಪತನಗೊಂಡಿದೆ. ಆದರೆ ಇದಕ್ಕೂ ಮುನ್ನ ಸಿಎಂ ಉದ್ದವ್ ಠಾಕ್ರೆ ನೇತೃತ್ವದ ಸಂಪುಟ ಸಭೆಯಲ್ಲಿ ಔರಂಗಬಾದ್ ಹಾಗೂ ಒಸಮಾನಾಬಾದ್ ನಗರ ಹೆಸರನ್ನು ಮರುನಾಮಕರಣ ಮಾಡಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.

ಬಾಳಾ ಠಾಕ್ರೆ ಹಾಗೂ ಮಹಾರಾಷ್ಟ್ರ ಜನತೆ ಆಶಯದಂತೆ ಔರಂಗಬಾದ್ ನಗರ ಹಾಗೂ ಒಸಮಾನಾಬಾದ್ ನಗರದ ಹೆಸರನ್ನು ಬದಲಾಯಿಸಲಾಗಿದೆ. ಔರಂಗಬಾದ್ ನಗರಕ್ಕೆ ಶಿವಾಜಿ ಮಹರಾಜ ಪುತ್ರ ಸಂಭಾಜಿ ಹೆಸರನ್ನು ಇಡಲಾಗಿದೆ. ಇನ್ನು ಮುಂದೆ ಔರಂಗಬಾದ್ ನಗರ ಸಂಭಾಜಿ ನಗರ ಎಂದು ಮರುನಾಮಕರಣ ಮಾಡಲಾಗಿದೆ.

Breaking News: ವಿಶ್ವಾಸಮತಕ್ಕೂ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ರಾಜೀನಾಮೆ!

ಔರಂಗಬಾದ್‌ನಲ್ಲಿ ಔರಂಗಜೇಬ್ ಶಿವಾಜಿ ಪುತ್ರ ಸಂಭಾಜಿಯನ್ನು ಹತ್ಯೆ ಮಾಡಿದ್ದ. ಹೀಗಾಗಿ ಔರಂಗಬಾದ್ ನಗರಕ್ಕೆ ಸಂಭಾಜಿ ನಗರ ಎಂದು ಮರುನಾಮಕರಣ ಮಾಡಲಾಗಿದೆ. ಇತ್ತ ಒಸಮಾನಾಬಾದ್ ನಗರದ  ಧಾರಶಿವ್ ಎಂದು ಮರುನಾಮಕರಣ ಮಾಡಲಾಗಿದೆ.

ಇದೇ ವೇಳೆ ಮಹಾ ವಿಘಾಸ ಅಘಾಡಿ ಸಂಪುಟ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಡಿಬಿ ಪಾಟೀಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ ಇದು ಉದ್ಧವ್ ಠಾಕ್ರೆ ನಿರ್ಧಾರ. ಈ ನಿರ್ಧಾರಕ್ಕೆ ಕಾಂಗ್ರೆಸ್ ಹಾಗೂ ಎನ್‌ಸಿಪಿ ವಿರೋಧ ವ್ಯಕ್ತಪಡಿಸಿತ್ತು. ಮರುನಾಮಕರಣಕ್ಕೆ ಎನ್‌ಸಿಪಿ ಹಾಗೂ ಕಾಂಗ್ರೆಸ್ ಒಮ್ಮತವಿರಲಿಲ್ಲ ಎಂದು ಎನ್‌ಸಿಪಿ ನಾಯಕ ಮಜೀದ್ ಮೆಮೋನ್ ಹೇಳಿದ್ದಾರೆ.

ಇದೇ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಮನವಿಯನ್ನು ಉದ್ಧವ್ ಠಾಕ್ರೆ ತರಿಸ್ಕರಿಸಿದ್ದರು. ನವ ಶೆವಾ ನಡುವಿನ ಸೀವೇರ್ ಲಿಂಕ್ ಮುಂಬೈ ಟ್ರಾನ್ಸ್ ಹಾರ್ಬರ್ ಹೆಸರನ್ನು ಮಾಜಿ ಸಿಎಂ ಎಆರ್ ಅಂತುಲೆ ಎಂದು ನಾಮಕರಣ ಮಾಡಲು ಕಾಂಗ್ರೆಸ್ ಆಗ್ರಹಿಸಿತ್ತು. ಆದರೆ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. 

Maharashtra Political Crisis ನಡುವೆ ಶಿವಸೇನೆ ಸಂಜಯ್‌ ರಾವತ್‌ಗೆ ಇಡಿ ನೊಟೀಸ್‌

ಬಾಳಾ ಸಾಹೇಬ್ ಠಾಕ್ರೆ 1988ರ ಮೇ8 ರಂದು ಔರಂಗಬಾದ್ ನಗರವನ್ನು ಸಂಭಾಜಿ ನಗರ ಎಂದು ಮರುನಾಮಕರಣ ಮಾಡಬೇಕು ಎಂದು ಘೋಷಿಸಿದ್ದರು.  ಶಿವಸೇನೆ ಮೈತ್ರಿ ಸರ್ಕಾರ ರಚನೆಯಾದ ಬಳಿಕ ಬಿಜೆಪಿ ಪದೇ ಪದೆೇ ಔರಂಗಬಾದ್ ಹೆಸರನ್ನು ಬದಲಾಯಿಸಿಲ್ಲ ಎಂದು ನೆನೆಪಿಸುವ ಕೆಲಸ ಮಾಡಿತ್ತು. ಇದೀಗ ರಾಜೀನಾಮೆಗೂ ಮುನ್ನ ಉದ್ಧವ್ ಮಹತ್ವದ ಘೋಷಣೆ ಮಾಡಿದ್ದಾರೆ. 

ಮರುನಾಮಕರಣವಾಗುತ್ತಿದ್ದಂತೆ ಔರಂಗಬಾದ್‌ನಲ್ಲಿ ಸಂಭ್ರಮ ಮನೆ ಮಾಡಿದೆ.

click me!