ಮುಸ್ಲಿಮರು ಸಿಎಂ ಆಗಲು ಬಿಡಲ್ಲ: ಶಾಸಕ ರೇಣುಕಾಚಾರ್ಯ

By Govindaraj S  |  First Published Jul 28, 2022, 5:00 AM IST

‘ರಾಜ್ಯದಲ್ಲಿ ಎಂದಿಗೂ ಮುಸ್ಲಿಮರಿಗೆ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ. ರಾಜ್ಯದ ಇತಿಹಾಸದಲ್ಲಿ ಹಿಂದೂಗಳೇ ಮುಖ್ಯಮಂತ್ರಿಯಾಗಿರಬೇಕು’ ಎಂದು ಆಡಳಿತಾರೂಢ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.


ಬೆಂಗಳೂರು (ಜು.28): ‘ರಾಜ್ಯದಲ್ಲಿ ಎಂದಿಗೂ ಮುಸ್ಲಿಮರಿಗೆ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ. ರಾಜ್ಯದ ಇತಿಹಾಸದಲ್ಲಿ ಹಿಂದೂಗಳೇ ಮುಖ್ಯಮಂತ್ರಿಯಾಗಿರಬೇಕು’ ಎಂದು ಆಡಳಿತಾರೂಢ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಅವರು ಮುಸ್ಲಿಮರ ಸಂಖ್ಯೆ ಹೆಚ್ಚಿದೆ ಎಂದಿದ್ದಾರೆ. ಹಿಂದೂಗಳು ಹೆಚ್ಚಾಗಿರುವ ದೇಶ ನಮ್ಮದು. ಕರ್ನಾಟಕದಲ್ಲಿ ಯಾವತ್ತಿದ್ದರೂ ಹಿಂದೂಗಳೇ ಮುಖ್ಯಮಂತ್ರಿಗಳಾಗಿರಬೇಕು. ಮೌಲ್ವಿಗಳು, ಧರ್ಮಗುರುಗಳ ಪ್ರಚೋದನೆಯಿಂದ ಈ ರೀತಿಯಾಗುತ್ತಿದ್ದು, ಹಿಂದೂ, ಮುಸ್ಲಿಮರ ನಡುವೆ ಕೋಮುಭಾವನೆ ಕೆರಳಿಸುತ್ತಿದ್ದಾರೆ. ಜಮೀರ್‌ ಅವರು ಇದನ್ನು ಇಲ್ಲಿಗೆ ಬಿಟ್ಟು ಬಿಡಬೇಕು’ ಎಂದು ಎಚ್ಚರಿಕೆ ನೀಡಿದರು.

Tap to resize

Latest Videos

Davanagere: ಶಾಸಕ ರೇಣುಕಾಚಾರ್ಯ ಮನೆಯಲ್ಲಿ ಭಾವುಕರಾದ ಬಿಎಸ್‌ವೈ

ದುಷ್ಕರ್ಮಿಗಳಿಗೆ ಕಠಿಣ ಕ್ರಮವಾಗಲಿ: ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿ​ದ ದುಷ್ಕರ್ಮಿಗಳ ನಡು ರಸ್ತೆಯಲ್ಲೇ ಎನ್‌ಕೌಂಟರ್‌ ಮಾಡಬೇಕು ಎಂದು ಆಗ್ರ​ಹಿ​ಸಿ​ರುವ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣು​ಕಾ​ಚಾರ್ಯ ಸರ್ಕಾರ ಕಠಿಣ ಕ್ರಮ ಕೈಗೊ​ಳ್ಳ​ದಿ​ದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಎಚ್ಚ​ರಿಕೆ ನೀಡಿ​ದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆಗಳು ಪದೇಪದೆ ನಡೆಯುತ್ತಿದ್ದು, ಸರ್ಕಾರವೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಮಾದರಿಯಲ್ಲಿ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ, ಕಠಿಣ ಕ್ರಮ ಕೈಗೊ​ಳ್ಳ​ಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದು ಕಾರ್ಯಕರ್ತರನ್ನು ರಕ್ಷಿಸಲು ನಮ್ಮಿಂದ ಸಾಧ್ಯವಾಗಿದ್ದರೆ, ನಾವು ಅಧಿಕಾರದಲ್ಲಿದ್ದರೂ ಏನು ಪ್ರಯೋಜನ? ಪ್ರತಿ ಸಲ ಹಿಂದು ಕಾರ್ಯಕರ್ತರ ಹತ್ಯೆಯಾದಾಗಲೂ ಭಾವಪೂರ್ಣ ಶ್ರದ್ಧಾಂಜಲಿ, ಕಠಿಣ ಕ್ರಮಕ್ಕೆ ಒತ್ತಾಯ, ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು, ಓಂ ಶಾಂತಿ ಎಂಬುದಾಗಿ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಭಿ​ಪ್ರಾ​ಯ​ಪ​ಟ್ಟಿ​ದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕಿವಿ ಮಾತು ಹೇಳಿದ ರೇಣುಕಾಚಾರ್ಯ

ನನಗೆ ವೈಯಕ್ತಿಕವಾಗಿ ಅಧಿಕಾರಕ್ಕಿಂತಲೂ ಹಿಂದೂ ಕಾರ್ಯಕರ್ತರ ರಕ್ಷಣೆಯೇ ಮುಖ್ಯ. ಸರ್ಕಾ​ರ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ನನ್ನ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಜೊತೆಗೆ ಚರ್ಚಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಯೋಚಿಸುತ್ತಿದ್ದೇನೆ. ಕೆಲ ದಿನಗಳ ಹಿಂದೆ ನನ್ನನ್ನೂ ಕೊಲೆ ಮಾಡುವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನೇ ಇಂದಿಗೂ ಪೊಲೀಸರು ಬಂಧಿಸಿಲ್ಲವೆಂದು ಹೇಳಲು ಮುಜುಗರವಾಗುತ್ತದೆ.
ರೇಣು​ಕಾ​ಚಾರ್ಯ, ಶಾಸಕ

click me!