ಸಿದ್ದು ಜನ್ಮದಿನ ಖಾಸಗಿ ಕಾರ್ಯಕ್ರಮ: ಡಿ.ಕೆ.ಶಿವಕುಮಾರ್‌

By Govindaraj SFirst Published Jul 28, 2022, 4:00 AM IST
Highlights

‘ಆ.3ರಂದು ನಡೆಯುವುದು (ಸಿದ್ದು ಜನ್ಮದಿನ) ಖಾಸಗಿ ಕಾರ್ಯಕ್ರಮ. ಆ.15 ರಂದು ನಡೆಯುವು ಸ್ವಾತಂತ್ರ್ಯೋತ್ಸವ ಸಮಾರಂಭವು ರಾಷ್ಟ್ರದ ಹಾಗೂ ಪಕ್ಷದ ಕಾರ್ಯಕ್ರಮ. ಹೀಗಾಗಿ ನೀವೆಲ್ಲಾ ಆ.15ಕ್ಕೆ ಹೆಚ್ಚೆಚ್ಚು ಜನರನ್ನು ಸೇರಿಸಿ ಇತಿಹಾಸ ಸೃಷ್ಟಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕರೆ ನೀಡಿದ್ದಾರೆ.

ಬೆಂಗಳೂರು (ಜು.28): ‘ಆ.3ರಂದು ನಡೆಯುವುದು (ಸಿದ್ದು ಜನ್ಮದಿನ) ಖಾಸಗಿ ಕಾರ್ಯಕ್ರಮ. ಆ.15 ರಂದು ನಡೆಯುವು ಸ್ವಾತಂತ್ರ್ಯೋತ್ಸವ ಸಮಾರಂಭವು ರಾಷ್ಟ್ರದ ಹಾಗೂ ಪಕ್ಷದ ಕಾರ್ಯಕ್ರಮ. ಹೀಗಾಗಿ ನೀವೆಲ್ಲಾ ಆ.15ಕ್ಕೆ ಹೆಚ್ಚೆಚ್ಚು ಜನರನ್ನು ಸೇರಿಸಿ ಇತಿಹಾಸ ಸೃಷ್ಟಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕರೆ ನೀಡಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆ.3 ರಂದು ನಡೆಯುವುದು ಖಾಸಗಿ ಕಾರ್ಯಕ್ರಮ. ಅಭಿಮಾನಿಗಳು ಸೇರಿ ಮಾಡುತ್ತಿರುವ ಕಾರ್ಯಕ್ರಮ. 

ಆ.15ರಂದು ನಡೆಯುವುದು ರಾಷ್ಟ್ರದ ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ’ ಎಂದು ಹೇಳಿದರು. ‘ಆ.15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು. ಇದಕ್ಕಾಗಿ ಇಂದಿನಿಂದಲೇ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರ ಬಳಿಗೂ ಹೋಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಆ.15ರಂದು ಪ್ರತಿಯೊಬ್ಬರೂ ರಾಷ್ಟ್ರಧ್ವಜ ಹಿಡಿದು ಇತಿಹಾಸ ಸೃಷ್ಟಿಸಬೇಕು’ ಎಂದು ಕರೆ ನೀಡಿದರು.

Latest Videos

ಕನಕಪುರದಲ್ಲಿ ಭ್ರಷ್ಟಾಚಾರ, ಸಭೆಯಲ್ಲಿ ಎಲ್ಲಾ ಫೈಲ್‌ ತಿರಿವಿ ನೋಡಿ ಅಧಿಕಾರಿಗಳಿಗೆ ಚಳಿ ಬಿಡಿಸಿದ ಡಿಕೆಶಿ

ಇದು ಜನೋತ್ಸವ ಅಲ್ಲ, ಭ್ರಷ್ಟೋತ್ಸವ: ‘ರಾಜ್ಯ ಬಿಜೆಪಿ ಸರ್ಕಾರ 3 ವರ್ಷ ಪೂರೈಸುತ್ತಿದ್ದರೂ 1 ವರ್ಷ ಎಂದು ಜನೋತ್ಸವ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ತರಾಟೆ ತೆಗೆದುಕೊಂಡಿದೆ. ‘ಹಗರಣ ನಡೆಸಿದ್ದೇ ಇವರ ಸಾಧನೆ’ ಎಂದು ಆರೋಪಿಸಿ, ‘ಭ್ರಷ್ಟೋತ್ಸವ’ ಹೆಸರಿನ ಕಾರ್ಡ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ಸರ್ಕಾರವನ್ನು ‘ಅನುತ್ತೀರ್ಣ’ಗೊಳಿಸಿದೆ.

ಕಾನೂನು ಸುವ್ಯವಸ್ಥೆ, ಮಹಿಳಾ ಕಲ್ಯಾಣ ಮತ್ತು ಸುರಕ್ಷತೆ, ಬೆಂಗಳೂರು ಅಭಿವೃದ್ಧಿ ಮತ್ತಿತರ ವಿಷಯಗಳಲ್ಲಿ ಆಡಳಿತದ ವೈಫಲ್ಯಗಳನ್ನು ಪಟ್ಟಿಮಾಡಿರುವ ಕಾಂಗ್ರೆಸ್‌, ‘ಭ್ರಷ್ಟೋತ್ಸವ’ ಎಂಬ ಕಾರ್ಡ್‌ ಹೊರ ತಂದಿದೆ. ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಈ ಭ್ರಷ್ಟೋತ್ಸವ ರಿಪೋರ್ಚ್‌ ಅನ್ನು ಬಿಡುಗಡೆ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ‘ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಸಿದ್ದೇ ಸರ್ಕಾರದ ಸಾಧನೆ’ ಎಂದು ಕಿಡಿಕಾರಿದರು.

ಭ್ರಷ್ಟಾಚಾರ ಮಾಡಿದ್ದೇ ಸಾಧನೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭ್ರಷ್ಟಾಚಾರ ಮಾಡಿದ್ದೇ ಇವರ ಸಾಧನೆಯಾಗಿದೆ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು. ಹಾಲು, ರೈತರು ಬೆಳೆದ ಬೆಳೆಗಳಿಗೆ ಡಬಲ್‌ ಬೆಲೆ ಸಿಕ್ಕಿಲ್ಲ. ಆದರೆ ರೈತರು ಖರೀದಿಸುವ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ದರ ಡಬ್ಬಲ್‌ ಆಗಿದೆ’ ಎಂದು ಟೀಕಿಸಿದರು.

‘ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಎಷ್ಟುಜನರಿಗೆ ಉದ್ಯೋಗ ನೀಡಲಾಗಿದೆ ಎಂಬ ಮಾಹಿತಿ ನೀಡಲಿ. ಪಿಎಸ್‌ಐ ಹಗರಣದಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಬಂಧನವಾಗಿದೆ. ಗುತ್ತಿಗೆದಾರರಿಂದ ಲಂಚ ಕೇಳಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದರೂ ಏಕೆ ತನಿಖೆ ಮಾಡಿಲ್ಲ?’ ಎಂದು ಪ್ರಶ್ನಿಸಿದರು.

ಹುಬ್ಬಳ್ಳಿ: ಬೆಂಗೇರಿ ಖಾದಿ ಕೇಂದ್ರಕ್ಕೆ ರಾಹುಲ್‌ ಗಾಂಧಿ ಶೀಘ್ರ ಭೇಟಿ, ಡಿಕೆಶಿ

‘ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಎಚ್‌.ವಿಶ್ವನಾಥ್‌ ಅವರು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಆದರೂ ತನಿಖೆ ನಡೆಸಿಲ್ಲ. ಕೊರೋನಾ ಸಮಯದಲ್ಲಿ ಹಾಸಿಗೆ, ಪಿಪಿ ಕಿಟ್‌ ಸೇರಿದಂತೆ ಉಪಕರಣಗಳ ಖರೀದಿಯಲ್ಲಿ ಹಗರಣ ನಡೆದಿದೆ. ಹೆಣ ಸುಡಲೂ ಹಣ ಕೇಳಲಾಗಿದೆ. ಚಾಮರಾಜನಗರದಲ್ಲಿ ಆಕ್ಸಿಜನ್‌ ಕೊರತೆಯಿಂದ ಮೃತಪಟ್ಟವರಿಗೆ ಇನ್ನೂ ಪರಿಹಾರ ನೀಡಿಲ್ಲ. ಇದು ಬಿಜೆಪಿಯ ಜನೋತ್ಸವ ಅಲ್ಲ ಭ್ರಷ್ಟೋತ್ಸವ’ ಎಂದು ಕಿಡಿಕಾರಿದರು.

click me!