ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್

By Kannadaprabha News  |  First Published Apr 28, 2024, 10:25 AM IST

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು ಮಾಡಿ, ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸುತ್ತೇವೆ. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಕೊಡಲು ಬರುವುದಿಲ್ಲ. ಇಷ್ಟು ದಿನಗಳ ಕಾಲ ಕೊಟ್ಟಿದ್ದು ತಪ್ಪು ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್


ಶಹಾಪುರ(ಏ.28):  ಬಿಜೆಪಿಗೆ ಹಾಕುವ ಒಂದೊಂದು ಮತ ಒಬ್ಬ ಭಯೋತ್ಪಾದಕನ ಕೊಂದಂತೆ. ಭಯೋತ್ಪಾದಕ ಮುಕ್ತ ಭಾರತಕ್ಕಾಗಿ ಹಾಗೂ ದೇಶದ ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಬೇಕೆಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತದಾರರಲ್ಲಿ ಮನವಿ ಮಾಡಿದರು.

ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರ ಶನಿವಾರ ನಗರದ ಸಿ.ಬಿ. ಕಮಾನದಿಂದ ಬಸವೇಶ್ವರ ವೃತ್ತದ ವರೆಗೆ ರೋಡ್ ಶೋ ನಡೆಸಿದ ನಂತರ, ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮುಸಲ್ಮಾನರ ಪರ ದೇಶದಲ್ಲಿ 52 ಪಕ್ಷಗಳಿವೆ, ಆದರೆ ಹಿಂದೂಗಳಿಗೆ ಬಿಜೆಪಿ ಒಂದೇ ಪಕ್ಷ ಎಂದರು.

Tap to resize

Latest Videos

ಕರ್ನಾಟಕ ರೀತಿ ದೇಶದಲ್ಲಿ ಮುಸ್ಲಿಂ ಮೀಸಲಾತಿಗೆ 'ಕಾಂಗ್ರೆಸ್‌' ಪ್ಲಾನ್: ಪ್ರಧಾನಿ ಮೋದಿ

ನಾನು ಲಿಂಗಾಯಿತ, ದಲಿತ, ಗಾಣಿಗ, ಬಣಜಿಗ ಆ ಜಾತಿ, ಈ ಜಾತಿಯೆಂದು ಬೇರೆ ಬೇರೆಯಾದರೆ ಈ ದೇಶದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲ. ಹಿಂದೂಗಳ ಪರವಾದ ಏಕೈಕ ಪಕ್ಷ ಎಂದರೆ ಬಿಜೆಪಿ. ದೇಶದ ರಕ್ಷಣೆ, ಅಭಿವೃದ್ಧಿ ಹಾಗೂ ಭಯೋತ್ಪಾದಕ ಮುಕ್ತ ಭಾರತಕ್ಕಾಗಿ, ಹಿಂದೂ ರಾಷ್ಟ್ರಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮಾಡಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದರು. ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಈ ಬಾರಿ ನಡೆಯುವ ಲೋಕ ಚುನಾವಣೆ ಇಡೀ ದೇಶದ ಭವಿಷ್ಯ ರೂಪಿಸುವ ಮಹಾ ಚುನಾವಣೆ. ದೇಶದ ಉಜ್ವಲ ಭವಿಷ್ಯದ ವಿಶಾಲವಾದ ದೃಷ್ಟಿಕೋನ ಇಟ್ಟುಕೊಂಡ ಚುನಾವಣೆ ಆಗಿದೆ ಎಂದರು.

ಮುಸ್ಲಿಂ ಮೀಸಲು ಮುಂದುವರಿಸಿದ್ದು ಬೊಮ್ಮಾಯಿ ಸರ್ಕಾರ: ಸಿಎಂ ಸಿದ್ದರಾಮಯ್ಯ

ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಮಿನ್ ರೆಡ್ಡಿ ಯಾಳಗಿ ಮಾತನಾಡಿದರು. ಈ ವೇಳೆ ನಗರ ಮಂಡಲ ಅಧ್ಯಕ್ಷ ದೇವೇಂದ್ರ ಕೊನೇರ, ತಾಲೂಕು ಮಂಡಲ ಅಧ್ಯಕ್ಷ ರಾಜುಗೌಡ ಉಕ್ಕಿನಾಳ, ಜಿಲ್ಲಾ ಕಾರ್ಯದರ್ಶಿ ಗುರು ಕಾಮಾ, ಬಿಜೆಪಿಯ ಹಿರಿಯ ಮುಖಂಡ ಡಾ. ಚಂದ್ರಶೇಖರ್ ಸುಬೇದಾರ್, ಬಸವರಾಜ ವಿಭೂತಿಹಳ್ಳಿ, ಶಿವರಾಜ್ ದೇಶಮುಖ್, ರಾಘವೇಂದ್ರ ಯಕ್ಷಿಂತಿ, ಮಲ್ಲಿಕಾರ್ಜುನ ಕಂಕಕೂರ, ಅಡಿವೆಪ್ಪ ಜಾಕಾ, ತಿರುಪತಿ ಹಟ್ಟಿ ಕಟ್ಟಿಗಿ, ರಾಜಶೇಖರ್ ಗೂಗಲ್ ಸೇರಿದಂತೆ ಅನೇಕ ನಾಯಕರು ಇದ್ದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು:

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು ಮಾಡಿ, ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸುತ್ತೇವೆ. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಕೊಡಲು ಬರುವುದಿಲ್ಲ. ಇಷ್ಟು ದಿನಗಳ ಕಾಲ ಕೊಟ್ಟಿದ್ದು ತಪ್ಪು ಎಂದು ಕಾಂಗ್ರೆಸ್‌ ವಿರುದ್ಧ ಟೀಕಿಸಿದರು. ಇನ್ನು, ಬಿಜೆಪಿ ದೇಶದ ಜನರಿಗೆ ಚೆಂಬು ಕೊಟ್ಟಿದೆ ಎಂದು ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ. ವಾಸ್ತವದಲ್ಲಿ ಈ ದೇಶದ ಜನರಿಗೆ ಬಿಜೆಪಿ ಕೊಟ್ಟಿರುವುದು ಚೆಂಬು ಅಲ್ಲ ಅಕ್ಷಯ ಪಾತ್ರೆ ಎಂದು ಯತ್ನಾಳ್‌ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಮತ ಸೆಳೆಯಲು ಕಾಂಗ್ರೆಸ್ ಪಕ್ಷವು ದೇಶದ ಬಡ ಮಹಿಳೆಯರಿಗೆ ವಾರ್ಷಿಕವಾಗಿ ತಲಾ ₹1 ಲಕ್ಷ ರು. ನೀಡುವುದಾಗಿ ಹೇಳುತ್ತಿದೆ. ಅಷ್ಟೊಂದು ಹಣ ಎಲ್ಲಿಂದ ತರುತ್ತದೆ ಎಂದು ಪ್ರಶ್ನಿಸಿದ ಯತ್ನಾಳ್‌, ಇವೆಲ್ಲ ಹುಚ್ಚುಚ್ಚು ಹೇಳಿಕೆಗಳ ನೀಡುವ ರಾಹುಲ್ ಗಾಂಧಿ ಅರೆಹುಚ್ಚ ಎಂದು ಟೀಕಿಸಿದರು.

click me!