* ಮುರುಗೇಶ್ ನಿರಾಣಿ ಆದಷ್ಟು ಬೇಗ ಮುಖ್ಯಮಂತ್ರಿ ಆಗ್ತಾರೆ
* ಸ್ಫೋಟಕ ಭವಿಷ್ಯ ನುಡಿದ ಬಿಜೆಪಿ ಹಿರಿಯ ನಾಯಕ
* ಬಿಜೆಪಿ ಹಿಂದುಳಿದ ವರ್ಗದ ಘಟಕದ ಕಾರ್ಯಕಾರಿ ಸಭೆಯಲ್ಲಿ ಹೇಳಿಕೆ
ಬಾಗಲಕೋಟೆ, (ನ.28): ಮುರುಗೇಶ್ ನಿರಾಣಿ (Murugesh Nirani) ಆದಷ್ಟು ಬೇಗ ಮುಖ್ಯಮಂತ್ರಿ ಆಗುತ್ತಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆ (Bagalkot) ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಇಂದು (ನ.28)ನಡೆದ ಬಿಜೆಪಿ (BJP) ಹಿಂದುಳಿದ ವರ್ಗದ ಘಟಕದ ಕಾರ್ಯಕಾರಿ ಸಭೆಯಲ್ಲಿ ಈ ಮಾತನ್ನು ಹೇಳಿದರು.
undefined
ಸಿಎಂ ರೇಸ್‌ನಲ್ಲಿರೋ ಮುರುಗೇಶ್ ನಿರಾಣಿಯ ಮನದ ಮಾತು
ಗೊತ್ತಿಲ್ಲ ಮುಂದೆ ಯಾವತ್ತೋ ಮುರುಗೇಶ್ ನಿರಾಣಿ ಮುಖ್ಯಮಂತ್ರಿ (Chief Minister) ಆಗ್ತಾರೆ. ಅವರಿಗೆ ಸಿಎಂ ಆಗೋ ಶಕ್ತಿ ಇದೆ. ಯಾವತೋ ಸಿಎಂ ಅಗೋ ಶಕ್ತಿ ಇದೆ. ಕರ್ತೃ ಶಕ್ತಿ ಇದೆ. ಇವತ್ತಲ್ಲ ನಾಳೆ ಮುಖ್ಯಮಂತ್ರಿ ಆಗ್ತಾರೆ.. ಹಾಗಂತ ನಾಳೆನೇ ಬಸವರಾಜ ಬೊಮ್ಮಾಯಿನಾ ತೆಗಿತಾರಾ ಅಂತ ಬರೀಬೇಡಿ ಎಂದು ಈಶ್ವರಪ್ಪ ಮಾಧ್ಯಮಗಳಿಗೆ ಹೇಳಿದರು.
ಇನ್ನು ಇದೇ ವೇಳೆ ಮಾತನಾಡುತ್ತ ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡ್ತಿಯೇನಪ್ಪ ಎಂದು ನಿರಾಣಿಗೆ ಈಶ್ವರಪ್ಪ ಕೇಳಿದರು. ಇದಕ್ಕೆ
ನಿರಾಣಿ ಫುಲ್ ಖುಷಿಯಾಗಿ ಓಕೆ ಗುರುತು ತೋರಿ ನಕ್ಕರು.
ಸಿಎಂ ರೇಸ್‌ನಲ್ಲಿದ್ದ ಮುರುಗೇಶ್ ನಿರಾಣಿ
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಸುದ್ದಿ ಹರಡುತ್ತಲೇ ಬಹುತೇಕರು ಸಿಎಂ ಗದ್ದುಗೆಗೆ ಏರಲು ಹಲವರು ಅನೇಕ ಶತ ಪ್ರಯತ್ನಗಳನ್ನು ಮಾಡಿದರು. ಬಯಸದೇ ಬಂದ ಭಾಗ್ಯ ಎಂದು ಹೇಳಲು ಸಾಧ್ಯವಿಲ್ಲವಾದರೂ ಅದೃಷ್ಟ ಹಾಗೂ ಯಡಿಯೂರಪ್ಪ ಕೃಪಾಕಟಾಕ್ಷದಿಂದ ಬಸವರಾಜ ಬೊಮ್ಮಾಯಿ ರಾಜ್ಯದ ಸಿಎಂ ಆಗಿದ್ದಾರೆ.
ಆದರೆ ಸಿಎಂ ರೇಸ್‌ನಲ್ಲಿ ಪ್ರಮುಖವಾಗಿ ಸದ್ದು ಮಾಡಿದ್ದು ಬೀಳಗಿ ಶಾಸಕ ಮುರುಗೇಶ್ ನಿರಾಣಿ, ಧಾರವಾಡ ಪಶ್ಚಿಮ ಶಾಸಕ ಅರವಿಂದ್ ಬೆಲ್ಲದ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ ಹಲವರ ಹೆಸರುಗಳು.
ಅದರಲ್ಲೂ ಒಂದು ಕಾಲದಲ್ಲಿ ಯಡಿಯೂರಪ್ಪ ಅವರ ಮಾನಸ ಪುತ್ರ ಎಂದು ಗುರುತಿಸಿಕೊಂಡಿದ್ದ ಮುರುಗೇಶ್ ನಿರಾಣಿ ಹೆಸರು ತುಸು ಹೆಚ್ಚು ಮುಂಚೂಣಿಯಲ್ಲಿತ್ತು.
ಅನೇಕ ದಿನಗಳ ಕಾಲ ದೆಹಲಿಯಲ್ಲಿ ತಂಗಿದ್ದ ಮುರುಗೇಶ್ ನಿರಾಣಿ, ಒಂದು ಮಟ್ಟಕ್ಕೆ ಹೈಕಮಾಂಡ್ ನಾಯಕರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ತಮಗೆ ಸಿಎಂ ಸ್ಥಾನ ಪಕ್ಕಾ ಮಾಡಿಕೊಂಡೇ ಬೆಂಗಳೂರಿಗೆ ಆಗಮಿಸಿದ್ದರು. ಯಡಿಯೂರಪ್ಪ ಸರ್ಕಾರದ 2 ವರ್ಷದ ಸಾಧನೆ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಅತ್ಯಂತ ಆತ್ಮವಿಶ್ವಾಸದಲ್ಲಿದ್ದರು.
ಅಷ್ಟೊತ್ತಿಗಾಗಲೇ ನಿರಾಣಿ ಮುಂದಿನ ಸಿಎಂ ಎಂದು ಹೈಕಮಾಂಡ್ ಕೂಡ ನಿರ್ಣಯ ಮಾಡಿತ್ತು. ಹೈಕಮಾಂಡ್ ವೀಕ್ಷಕರ ತಂಡವೂ ನಿರಾಣಿ ಹೆಸರೇ ಹೇಳಿದ್ದರು. ಆದರೆ ಯಡಿಯೂರಪ್ಪ ಅವರೇ ನಿರಾಣಿಗೆ ಮರ್ಮಾಘಾತ ನೀಡಿಬಿಟ್ಟರು. ನಿರಾಣಿ ಬೇಡ ಬೇರೆ ಯಾರನ್ನಾದರು ಮಾಡಿ, ಬೇಕಾದರೆ ಆರ್.ಅಶೋಕ್ ಅವರನ್ನಾದ್ರು ಮಾಡಿ ಎಂದು ಹೇಳಿಬಿಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ನಿರಾಣಿ ಸಿಎಂ ಕನಸು ನನಸಾಗಲಿಲ್ಲ.
ಈ ಹಿಂದೆ ನಿರಾಣಿ ಹೇಳಿದ್ದೇನು?
ನಾನು ಯಾವುದೇ ಹುದ್ದೆಗಾಗಿ ಲಾಬಿ ಮಾಡುತ್ತಿಲ್ಲ, ರಾಷ್ಟ್ರಿಯ ನಾಯಕರು ಅಳೆದು ತೂಗಿ ಅರ್ಹರನ್ನೇ ಸಿಎಂ ಮಾಡುತ್ತಾರೆ. ನನಗೆ ಪಕ್ಷ ವಹಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಸ್ಥಾನಮಾನಕ್ಕಾಗಿ ನಾನು ಯಾವತ್ತೂ ಲಾಬಿ ಮಾಡಿಲ್ಲಘಿ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದರು.
ಬಿಜೆಪಿ ಪಕ್ಷದ 120 ಶಾಸಕರೆಲ್ಲರೂ ಸಿಎಂ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ನಿರೀಕ್ಷೆಯಿಲ್ಲದೆ ಪಕ್ಷ ನನಗೆ ಹಲವು ಜವಾಬ್ದಾರಿ ನೀಡಿದೆ. ಮೊದಲ ಬಾರಿ ಶಾಸಕನಾದಾಗಲೇ ಹೈಕಮಾಂಡ್ ನನ್ನನ್ನು ಸಚಿವನನ್ನಾಗಿ ಮಾಡಿದೆ. ಈಗಲೂ ಮಹತ್ವದ ಜವಾಬ್ದಾರಿ ಕೊಟ್ಟಿದೆ. ಹಿಂದೆಯೂ ನಾನು ಯಾವುದೇ ಹುದ್ದೆ ಅಪೇಕ್ಷೆ ಮಾಡಿದವನಲ್ಲ ಎಂದು ಹೇಳಿದ್ದರು.