Karnataka Politics: ಬಿಜೆಪಿ ಆಪರೇಷನ್ ಕಮಲಕ್ಕೆ ಡಿಕೆಶಿ ರಿವರ್ಸ್ ಆಪರೇಷನ್!

Published : Nov 28, 2021, 04:36 PM IST
Karnataka Politics: ಬಿಜೆಪಿ ಆಪರೇಷನ್ ಕಮಲಕ್ಕೆ ಡಿಕೆಶಿ ರಿವರ್ಸ್ ಆಪರೇಷನ್!

ಸಾರಾಂಶ

* ರಾಜ್ಯದಲ್ಲಿ ಶುರುವಾಯ್ತು ಪಕ್ಷಾಂತರ ಪರ್ವ * ಬಿಜೆಪಿ ಆಪರೇಷನ್ ಕಮಲಕ್ಕೆ ಡಿಕೆಶಿ ರಿವರ್ಸ್ ಆಪರೇಷನ್ * ಕೋಲಾರ ಜಿಲ್ಲಾರಾಜಕೀಯದಲ್ಲಿ ಮಹತ್ವದ ಬೆಳವಣಿಗೆ

ಕೋಲಾರ, (ನ.28): ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ (Karnataka MLC Election) ರಂಗೇರಿದೆ. ಇದರ ಮಧ್ಯೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕ ಜಿಗಿಯುವರ ಸಂಖ್ಯೆ ಹೆಚ್ಚಾಗಿದೆ.

.ಮುಂಬರುವ ವಿಧಾನಸಭಾ ಗಮನದಲ್ಲಿಟ್ಟುಕೊಂಡು ರಾಜಕೀಯ ನಾಯಕರು)Political Leaders) ತಮ್ಮ ಮುಂದಿನ ಭವಿಷ್ಯಕ್ಕೆ ಪಕ್ಷಾಂತರ ಪರ್ವ ನಡೆಸಿದ್ದಾರೆ. ಇದಕ್ಕೆ ಪೂಕರವೆಂಬಂತೆ ಕೋಲಾರ ಜಿಲ್ಲಾ ಕಾಂಗ್ರೆಸ್ (Congress) ಅಧ್ಯಕ್ಷ ಚಂದ್ರಾರೆಡ್ಡಿ ಅವರು ಬಿಜೆಪಿ ಸೇರಿದ್ದಾರೆ.

Karnataka Politics:ಒಂದೇ ದಿನ ಎರಡೆರಡು ಅಚ್ಚರಿಯ ರಾಜಕೀಯ ಬೆಳವಣಿಗೆಗಳು, ಕಾಂಗ್ರೆಸ್‌ಗೆ ಬಿಗ್ ಶಾಕ್

 ಪರಿಷತ್ ಚುನಾವಣೆ ಮಧ್ಯೆ ಚಂದ್ರಾರೆಡ್ಡಿ ಅವರನ್ನ ಬಿಜೆಪಿ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಸಹ ಆಪರೇಷನ್ ಕಮಲಕ್ಕೆ (Operation Kamala) ರಿವರ್ಸ್ ಆಪರೇ‍ಷನ್ ಮಾಡಿದ್ದಾರೆ.

ಹೌದು....ಕೋಲಾರದಲ್ಲಿ(Kolar) ಕಾಂಗ್ರೆಸ್​ ಮುಖಂಡ ಚಂದ್ರಾರೆಡ್ಡಿ ನಿನ್ನೆ(ನ.27) ಬೆಳಿಗ್ಗೆ ಬಿಜೆಪಿಗೆ(BJP) ಸೇರ್ಪಡೆಯಾಗಿದ್ದರು. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಿವರ್ಸ್ ಆಪರೇಷನ್ ಮಾಡಿ ಹಲವು ಬಿಜೆಪಿಗರನ್ನು ಕಾಂಗ್ರೆಸ್ ಗೆ ಸೇರಿಕೊಳ್ಳುವುದರ ಮೂಲಕ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.

ನ27ರ ಬೆಳಿಗ್ಗೆ  ಕಾಂಗ್ರೆಸ್​ ಮುಖಂಡ ಚಂದ್ರಾರೆಡ್ಡಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸಂಜೆಯೊಳಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ರಿವರ್ಸ್ ಆಪರೇಷನ್ ಮಾಡಿ, ಒಬ್ಬರ ಬದಲಿಗೆ ಹಲವು ಬಿಜೆಪಿಯ ತಾಲೂಕ ಪಂಚಾಯತಿ ಮುಖಂಡರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದಾರೆ.

 ತಾ.ಪಂ. ಮಾಜಿ ಅಧ್ಯಕ್ಷ ವೆಂಕಟೇಶ್ ನಾಯ್ಕ, ಸದಸ್ಯರಾದ ಪಾಲಾಕ್ಷಿ ಓಬಣ್ಣ, ಮಾರಪ್ಪ, ಹುಲಗಪ್ಪ, ಚಂದ್ರಪ್ಪ ಮತ್ತಿತರರು ಸದಾಶಿವನಗರದ ಡಿಕೆ ಶಿವಕುಮಾರ್​​​​​ ನಿವಾಸದಲ್ಲಿ  ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ಬೇರೆ ಹಾದಿ ಹಿಡಿದ ವರ್ತೂರ್ ಪ್ರಕಾಶ್
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ವರ್ತೂರು ಪ್ರಕಾಶ್ (Varthur Prakash) ಕೆಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಸೇರಲು ಅತೀವ ಪ್ರಯತ್ನ ನಡೆಸುತ್ತಿದ್ದರೂ ಸಾಧ್ಯವಾಗಿಲ್ಲ. ಬೆಂಬಲಿಗರಿಂದ ಒತ್ತಾಯಗಳನ್ನ ಹೇರಿ ಕೈ ಪಾಳಯ ಸೇರುವ ಪ್ರಯತ್ನ ಮಾಡಿದ್ರೂ ಅದು ಸಕ್ಸಸ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ.

ಕೋಲಾರ ಕಾಂಗ್ರೆಸ್‌ನ (Kolar Congress) ಜಿಲ್ಲಾ ಅಧ್ಯಕ್ಷ ಕೆ ಚಂದ್ರಾರೆಡ್ಡಿ ಬಿಜೆಪಿಗೆ ಸೇರಿರುವ ಬೆನ್ನಲ್ಲಿಯೇ ಕೋಲಾರ ಜಿಲ್ಲೆಯ ಪ್ರಭಾವಿ ಮುಖಂಡ ವರ್ತೂರು ಪ್ರಕಾಶ್ ಬಿಜೆಪಿಗೆ ಸೇರುವುದು ಬಹುತೇಕ ಪಕ್ಕಾ ಆಗಿದೆ. ವಿಧಾನಪರಿಷತ್ ಚುನಾವಣೆ ಮುಗಿದ ಬಳಿಕ ಬೃಹತ್ ಸಮಾವೇಶದಲ್ಲಿ ವರ್ತೂರ್ ಪ್ರಕಾಶ್ ಅವರನ್ನ ಬಿಜೆಪಿಗೆ ಸೇರಿಸಿಕೊಳ್ಳು ನಾಯಕರು ಪ್ಲಾನ್ ಮಾಡಿದ್ದಾರೆ.

ಕೋಲಾರದ ಶಾಸಕ ಕಾಂಗ್ರೆಸ್‌ಗೆ
ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ಆಗುತ್ತಿವೆ. ಇನ್ನು ಜೆಡಿಎಸ್‌ನ ಶಾಸಕ ಶ್ರೀನಿವಾಸ ಗೌಡ ಅವರು ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದು, 2023ರ ಚುನಾವಣೆ ವೇಳೆಗೆ ಅಧಿಕೃತವಾಗಿ ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಎರಡು ಸುತ್ತು ಮಾತುಕತೆಗಳು ಮುಗಿದಿವೆ. ಡಿಕೆಶಿ, ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ನಡುವೆ ಮಾತುಗಳು ಸಹ ಆಗಿದ್ದು, ಗ್ರೀನ್ ಸಿಗ್ನಲ್ ಸಿಕ್ಕಿದೆ. ಅಲ್ಲದೇ ಸ್ವತಃ ಸಿದ್ದರಾಮಯ್ಯನವರೇ ಬಹಿರಂಗವಾಗಿಯೇ ಅವರನ್ನ ಕಾಂಗ್ರೆಸ್‌ಗೆ ಆಹ್ವಾನ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ