ಮುನಿರತ್ನ ರಾಜಕೀಯಕ್ಕೆ ಟಾಂಗ್‌ ಕೊಡಲಿದ್ದಾರಾ ನಾಯಕ ನಟ: ರಾಜರಾಜೇಶ್ವರಿ ನಗರದಲ್ಲಿ ಸ್ಪರ್ಧೆ ಖಚಿತ

Published : Mar 21, 2023, 02:03 PM IST
ಮುನಿರತ್ನ ರಾಜಕೀಯಕ್ಕೆ ಟಾಂಗ್‌ ಕೊಡಲಿದ್ದಾರಾ ನಾಯಕ ನಟ: ರಾಜರಾಜೇಶ್ವರಿ ನಗರದಲ್ಲಿ ಸ್ಪರ್ಧೆ ಖಚಿತ

ಸಾರಾಂಶ

2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಮತ್ತೊಬ್ಬ ಸಿನಿಮಾ ಸ್ಟಾರ್ ಪ್ರವೇಶ ಮಾಡುತ್ತಿದ್ದು, ಬಿಜೆಪಿ ಪ್ರಭಾವಿ ಸಚಿವ ಮುನಿರತ್ನಗೆ ಟಾಂಗ್ ಕೊಡಲಿದ್ದಾರಾ ಎಂಬ ಕುತೂಹಲ ಶುರುವಾಗಿದೆ.

ಬೆಂಗಳೂರು (ಮಾ.21): ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸಿನಿಮಾ ನಾಯಕ ನಟ ಸ್ಪರ್ಧೆಗೆ ಸಿದ್ಧರಾಗಿದ್ದಾರೆ. 2023ರ ವಿಧಾನಸಭಾ ಚುನಾವಣೆಗೆ ಮತ್ತೊಬ್ಬ ಸಿನಿಮಾ ಸ್ಟಾರ್ ಪ್ರವೇಶ ಮಾಡುತ್ತಿದ್ದು, ಬಿಜೆಪಿ ಪ್ರಭಾವಿ ಸಚಿವ ಮುನಿರತ್ನಗೆ ಟಾಂಗ್ ಕೊಡಲಿದ್ದಾರಾ ಎಂಬ ಕುತೂಹಲ ಶುರುವಾಗಿದೆ.

ಸಿನಿಮಾದಿಂದ ರಾಜಕೀಯಕ್ಕೆ ಬರ್ತಿರೋ ಹೊಸ ಸಿನಿಮಾ ಸ್ಟಾರ್. ಸ್ಯಾಂಡಲ್‌ವುಡ್‌ನ ನಿರ್ಮಾಪಕ ಹಾಗೂ ನಾಯಕ ನಟರ ನಡುವೆ ಭರ್ಜರಿ ಪೈಪೋಟಿಗೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಸಾಕ್ಷಿ ಆಗಲಿದೆಯಾ ಎಂಬುದನ್ನು ಕಾದುನೋಡಬೇಕಿದೆ. ಈ ಸ್ಟಾರ್ ಎಂಟ್ರಿಯಿಂದ ರಾಜರಾಜೇಶ್ವರಿ ನಗರದಲ್ಲಿ ಓಟ್ ಡಿವೈಡ್ ಆಗುವ ಸಾಧ್ಯೆಯೂ ಇದೆ ಎಂದು ಹೇಳಲಾಗುತ್ತಿದೆ. ಈ ಸ್ಟಾರ್ ಎಂಟ್ರಿಯಿಂದ ಯಾವ ಪಕ್ಷಕ್ಕೆ ಲಾಭ ಯಾವ ಪಕ್ಷಕ್ಕೆ ನಷ್ಟ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಡಯುತಿದೆ ತಯಾರಿ? ಈ ಸ್ಟಾರ್ ಹಿಂದೆ ತೆರೆ ಮರೆಯಲ್ಲಿದ್ದಾರೆ ರಾಜಕೀಯ ದಿಗ್ಗಜರು. ಯಾರು ಆ ಸ್ಟಾರ್..? ಏನಿದು ದಿಢೀರ್ ನಿರ್ಧಾರ..? ಇಲ್ಲಿದೆ ನೋಡಿ ಉತ್ತರ.

ನಟ ಚೇತನ್ 14 ದಿನ ನ್ಯಾಯಾಂಗ ಬಂಧನ: ಹಿಂದುತ್ವ ವಿರೋಧಿಗೆ ಪೋಸ್ಟ್‌ಗೆ ಜೈಲೂಟ ಫಿಕ್ಸ್‌

ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ: ಆ ಸ್ಟಾರ್ ನಟ ಬೇರೆ ಯಾರೂ ಅಲ್ಲ ಚೇತನ್ ಚಂದ್ರ. ಕಳೆದ 15 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿರೋ ಚೇತನ್ ಚಂದ್ರ. ಪಿಯುಸಿ, ಪ್ರೇಮಿಸಂ, ರಾಜಧಾನಿ, ಕುಂಬರಾಶಿ, ಜಾತ್ರೆ, ಹುಚ್ಚುಡುಗ್ರು, ಸಂಯುಕ್ತ-2, ಪ್ಲಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕನಾಗಿ ನಟನೆ ಮಾಡಿದ್ದಾರೆ. ಇನ್ನು ಚೇತನ್ ಚಂದ್ರ ಅಭಿನಯದ ಇತ್ತೀಚಿನ ಚಿತ್ರ‌ 'ಪ್ರಭುತ್ವ' ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಆದರೆ, ಸಾಲು ಸಾಲು ಸಿನಿಮಾಗಳನ್ನು ಮಾಡಿದ್ದರೂ ಅವುಗಳಲ್ಲಿ ಯಶಸ್ಸು ಕಂಡಿದ್ದು ಮಾತ್ರ ಕಡಿಮೆ. ಹೀಗಾಗಿ, ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಕಾರ್ಪೋರೇಟರ್‌ ಚುನಾವಣೆ ತಿರಸ್ಕಾರ: ಇಂದಿನ ರಾಜಕೀಯ ಸ್ಥಿತಿ, ಸರ್ಕಾರದ ವ್ಯವಸ್ಥೆ ಬಗ್ಗೆ ಮಾತನಾಡೋ ಸಿನಿಮಾ ಇದಾಗಿದ್ದು, ಇತ್ತೀಚೆಗಷ್ಟೆ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಚೇತನ್ ಕ್ರಾಂತಿಕಾರಿ ಯುವವಕನಾಗಿ ಕಾಣಿಸಿಕೊಂಡಿದ್ದು, ವ್ಯವಸ್ಥೆ ಮತ್ತು ಮತದಾನದ ಬಗ್ಗೆ ಹೊಡೆದಿರೋ ಡೈಲಾಗ್ಸ್ ಹೈಲೈಟ್ ಆಗಿದ್ದವು. ಆರ್ಥಿಕವಾಗಿ ಸ್ಥಿತಿವಂತ ಹಿನ್ನೆಲೆ ಇರೋ ಚೇತನ್ ಚಂದ್ರಗೆ ಈ ಹಿಂದೆಯೇ ಕಾರ್ಪೋರೆಟರ್ ಚುನಾವಣೆಗೆ ದೊಡ್ಡ ಆಫರ್ ಬಂದಿತ್ತು. ಆದರೆ, ಮುಂದಾಲೋಚನೆ ದೊಡ್ಡದಿಟ್ಟುಕೊಂಡಿದ್ದ ಚೇತನ್ ಈ ಬಾರಿ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡೋ ಬಗ್ಗೆ ಯೋಜನೆ ರೂಪಿಸಿಕೊಂಡಿದ್ದರು.

ಆದಿಚುಂಚನಗಿರಿ ಶ್ರೀಗಳಿಂದ ತರಾಟೆ: ಉರಿಗೌಡ ನಂಜೇಗೌಡ ಸಿನಿಮಾ ಕೈಬಿಟ್ಟ ಮುನಿರತ್ನ

ಪ್ರಭುತ್ವ ಸಿನಿಮಾ ರಿಲೀಸ್‌ ನಂತರ ರಾಜಕೀಯ ಪ್ರವೇಶ: ಇನ್ನು ಚುಆವಣೆಗೆ ಹೋಗೋದಾದರೆ ವಿಧಾನಸಭೆಗೆ ಹೋಗಬೇಕು ಎಂಬ ಯೋಜನೆಯನ್ನ 5 ವರ್ಷದ ಹಿಂದೆಯೇ ರೂಪಿಸಿಕೊಂಡಿದ್ದ ಚೇತನ್‌, ಅದಕ್ಕೆ ತಕ್ಕಂತೆ ಇದೀಗ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಜೊತೆಗೆ ಕಾಕತಾಳೀಯ ಎಂಬಂತೆ ಈಗ  ಪ್ರಭುತ್ವ ಸಿನಿಮಾ ಬಂದು ನಿಂತಿದೆ. ಚುನಾವಣೆಗೂ ಮೊದಲೇ 'ಪ್ರಭುತ್ವ' ಸಿನಿಮಾ ರಿಲೀಸ್ ಆಗೋದು ಕೂಡ ಗ್ಯಾರಂಟಿ ಆಗಿದೆ. ಈ ಸಿನಿಮಾ ಬಂದಮೇಲೆ ಚೇತನ್ ಚಂದ್ರ ಸಿನಿಮಾ ನಸೀಬು ಏನಾಗುತ್ತೋ ಗೊತ್ತಿಲ್ಲ. ಆದರೆ ರಾಜಕೀಯವಾಗಿ ಹಣೆಬರಹ ಬದಲಾಗೋ ಎಲ್ಲಾ ಸೂಚನೆ ಕಂಡುಬರುತ್ತಿದೆ. ಇದಿಷ್ಟು ತೆರೆಮರೆಯಲ್ಲಿ‌ ಸಿಕ್ಕಿರೋ ಮಾಹಿತಿ ಆಗಿದೆ. ಅಧಿಕೃತವಾಗಿ ಸದ್ಯದಲ್ಲೇ ಚೇತನ್ ಚಂದ್ರ ಈ ವಿಚಾರವನ್ನ ಬಹಿರಂಗ ಪಡೆಸಲಿದ್ದಾರಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಕಸಿತ ಭಾರತದ ಸಂಕಲ್ಪಕ್ಕೆ ''ರಾಮ್ ಜಿ'' ಶಕ್ತಿ
ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಗೆ ಧಕ್ಕೆ ಆಗದಿರಲಿ:ಎಚ್‌ಡಿಕೆ