
ಬಾಗಲಕೋಟೆ (ಮಾ.21) : ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡುವುದಾದರೆ ಸ್ವಾಗತ, ಅವರ ವಿರುದ್ಧ ನಿಂತು ಗೆಲ್ಲಲು ಹುಮ್ಮಸ್ಸು ಮತ್ತು ಹೆಮ್ಮೆ ಇದೆ ಎಂದು ಬಾದಾಮಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರ(Hanamanth mavinamarad)ದ ಹೇಳಿದರು
ಅವರು ಬಾಗಲಕೋಟೆ(Bagalkot) ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಮನೆ ಮನೆ ಪ್ರಚಾರ ವೇಳೆ ಮಾತನಾಡಿ, ಕಳೆದ ಚುನಾವಣೆ ವೇಳೆ ಹಲವು ಕಾರಣಗಳಿಂದ ಸೋಲನುಭವಿಸಬೇಕಾಯಿತು, ಆದರೆ ಈ ಬಾರಿ ಗೆಲುವು ನಮ್ಮದೇ ಆಗಲಿದೆ, ಹೀಗಾಗಿ ಕೋಲಾರ ಬಿಟ್ಟು ಬಾದಾಮಿಗೆ ಸಿದ್ದರಾಮಯ್ಯ(siddaramaiah) ಬರುವುದಾದರೆ ಬರಲಿ ಅದು ಗೆಲುವಿನ ಹೋರಾಟಕ್ಕೆ ಇನ್ನಷ್ಟು ಹುರುಪು ತುಂಬಲಿದೆ ಎಂದ ಅವರು, ಸಿದ್ದರಾಮಯ್ಯನಂತವರ ವಿರುದ್ಧ ಗೆಲ್ಲುವುದಾದರೆ ಅದೊಂದೆ ಹೆಮ್ಮೆ ಅನಿಸುತ್ತದೆ, ಈ ಮಧ್ಯೆ ಈ ಬಾರಿ 30 ಸಾವಿರ ಅಂತರದಿಂದ ಜೆಡಿಎಸ್ ಗೆಲುವು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಗೆದ್ದ ಕ್ಷೇತ್ರಕ್ಕೆ ಒಳ್ಳೆಯದನ್ನ ಮಾಡಲಿ: ಸಚಿವ ಮುರುಗೇಶ್ ನಿರಾಣಿ
ಕುಮಾರಸ್ವಾಮಿ(HD Kumaraswamy)ಯವರು ಪಂಚರತ್ನ ಯೋಜನೆ(Pancharatna rathayatre) ಬಗ್ಗೆ ತಿಳಿಸಲು ಮನೆ ಮನೆ ಪ್ರಚಾರ ನಡೆಸುವ ಮೂಲಕ ಪ್ರವಾಸ ಕೈಗೊಂಡಿದ್ದು, ಅವರ ದೇಯೋದ್ದೇಶಗಳನ್ನ ಮನೆ ಮನೆಗೆ ತಿಳಿಸುವ ಉದ್ದೇಶದಿಂದ ಪ್ರಚಾರ ಕೈಗೊಂಡಿದ್ದೇನೆ. ಮುಖ್ಯವಾಗಿ ಬಾದಾಮಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಮನೆಗಳ ಸ್ಥಳಾಂತರ, ಮೂಲಭೂತ ಸೌಲಭ್ಯ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಬೇಕೆಂಬ ವಿಚಾರಗಳನ್ನಿಟ್ಟುಕೊಂಡು ಜೆಡಿಎಸ್ ಗೆ ಮತ ಹಾಕಿ ಅಂತ ಮನೆ ಮನೆ ಪ್ರಚಾರ ನಡೆಸಿದ್ದೇವೆ ಎಂದರು.
ಜೆಡಿಎಸ್ ಟಿಕೆಟ್ ಪೈಪೋಟಿ:
ಇನ್ನು ರಾಜ್ಯದಲ್ಲಿ ಜೆಡಿಎಸ್ ಪಕ್ಷ ವರ್ಷದಿಂದ ವರ್ಷಕ್ಕೆ ಹೆಚ್ಚು ಬಲಿಷ್ಢವಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಯಲ್ಲೂ ಟಿಕೆಟ್ ಗೆ ಪೈಪೋಟಿ ಇದೆ, ಈಗಾಗಲೇ ಬಾಗಲಕೋಟೆ ಮತಕ್ಷೇತ್ರ(Bagalkot assembly constituency)ಕ್ಕೆ ಶ್ರೀನಿವಾಸಗೌಡರನ್ನ ನಿಲ್ಲಿಸಲು ನಿರ್ಧರಿಸಲಾಗಿದೆ. ಈ ಮಧ್ಯೆ ಮಾರ್ಚ್ 26ರ ಮೈಸೂರು ಪಂಚರತ್ನ ಯಾತ್ರೆ ಸಮಾರೋಪ ಸಮಾವೇಶದ ನಂತರ ಇನ್ನಷ್ಟು ಅಭ್ಯರ್ಥಿಗಳು ಪೈನಲ್ ಆಗಲಿದ್ದಾರೆ. ಒಟ್ಟಿನಲ್ಲಿ ಜೆಡಿಎಸ್ ಪಕ್ಷ ಹಚ್ಚಿನ ಸ್ಥಾನಗಳನ್ನ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಗೆಲುವಿನ ಗ್ಯಾರಂಟಿ ಇಲ್ಲ, ಇತರರನ್ನು ಹೇಗೆ ಗೆಲ್ಲಿಸುತ್ತಾರೆ: ಎಚ್.ಡಿ.ಕುಮಾರಸ್ವಾಮಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.