ಗೌರ್ನರ್, ಬಿಜೆಪಿ, ದಳದ ಕೈಗೊಂಬೆ: ಸಿದ್ದು ಕೆಂಡಾಮಂಡಲ..!

Published : Aug 03, 2024, 09:47 AM ISTUpdated : Aug 05, 2024, 02:54 PM IST
ಗೌರ್ನರ್, ಬಿಜೆಪಿ, ದಳದ ಕೈಗೊಂಬೆ: ಸಿದ್ದು ಕೆಂಡಾಮಂಡಲ..!

ಸಾರಾಂಶ

ನಾನು 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು. ಆದರೆ ನನ್ನ ಪಾತ್ರ ಇಲ್ಲದಿದ್ದರೂ ಮುಡಾ ಹಗರಣ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಅಸ್ಥಿರ ಗೊಳಿಸಲು ಯತ್ನಿಸಿದ್ದಾರೆ ಎಂದು ಕಿಡಿಕಾರಿ ದರು. ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು ಎಂದು ಇದೇ ವೇಳೆ ಪ್ರಶ್ನಿಸಿದ ಅವರು, ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ   

ಮೈಸೂರು/ಮಡಿಕೇರಿ(ಆ.03):  ರಾಜ್ಯಪಾಲರ ಶೋಕಾಸ್‌ ನೋಟಿಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಕಿಡಿಕಾರಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರ, ಜೆಡಿಎಸ್ -ಬಿಜೆಪಿ ಕೈಗೊಂಬೆಯಂತೆ ವರ್ತಿಸಿದ್ದಾರೆ. ಅವರ ನೋಟಿಸ್‌ಗೆ ನಾನು ಹೆದರಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು. ಆದರೆ ನನ್ನ ಪಾತ್ರ ಇಲ್ಲದಿದ್ದರೂ ಮುಡಾ ಹಗರಣ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಅಸ್ಥಿರ ಗೊಳಿಸಲು ಯತ್ನಿಸಿದ್ದಾರೆ ಎಂದು ಕಿಡಿಕಾರಿ ದರು. ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು ಎಂದು ಇದೇ ವೇಳೆ ಪ್ರಶ್ನಿಸಿದ ಅವರು, ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ವಿರುದ್ಧ ಸುಳ್ಳುಸುದ್ದಿ: ತನಿಖೆಗೆ ಹೈಕೋರ್ಟ್‌ ತಡೆ

ರಾಜ್ಯಪಾಲರ ನೋಟಿಸ್‌ಗೆ ನಾನ್ಯಾಕ ಹೆದರಲಿ? 

ವಿಪಕ್ಷನಾಯಕ ಅಶೋಕ್‌ ಹೆದರಿರ ಬೇಕು. ಅವರಿಗೆ ಭಯ, ನನಗಲ್ಲ ಎಂದರು. ರಾಜ್ಯಪಾಲರು ಕೊಟ್ಟಿರುವ ಶೋಕಾಸ್ ನೋಟಿಸ್‌ವಾಪಸ್‌ ಕಳುಹಿಸಲು ಸಂಪುಟಸಭೆ ಯಲ್ಲಿ ತೀರ್ಮಾನಿಸಲಾಗಿದೆ. ಅದನ್ನು ರಾಜ್ಯ ಪಾಲರುಸ್ವೀಕರಿಸುತ್ತಾರೆಎಂದು ಅಂದುಕೊಂಡಿ ದ್ದೇವೆ.ಆದರೆರಾಜ್ಯಪಾಲರನಡೆನೋಡಿದರೆ ಅವರುಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬ ಹುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಟಿ.ಜೆ.ಅಬ್ರಹಾಂ ಬ್ಲ್ಯಾಕ್‌ಮೇಲ‌ರ್: 

ಇದೇ ವೇಳೆ ತಮ್ಮ ವಿರುದ್ಧ ದೂರು ಕೊಟ್ಟಿರುವ ಟಿ. ಜೆ.ಅಬ್ರಹಾಂ ವಿರುದ್ಧ ತೀವ್ರ ಹರಿಹಾಯ್ದ ಅವರು, ಆತ ಒಬ್ಬ ಬ್ಲ್ಯಾಕ್‌ಮೇಲ‌ರ್. ໖.26 ಬೆಳಗ್ಗೆ 11.30ಕ್ಕೆ ದೂರು ಕೊಡುತ್ತಾನೆ. ಆ ದೂರಿನ ಪರಾಮರ್ಶೆ ಮಾಡದೆ ಅದೇ ದಿನ ಸಂಜೆ ಶೋಕಾಸ್ ನೋಟಿಸ್‌ ರೆಡಿ ಇದೆ ಬಂದು ಪಡೆದುಕೊಳ್ಳಿ ಎಂದು ನಮ್ಮ ಅಧಿಕಾರಿ ಎಲ್.ಕೆ.ಅತೀಕ್ ಗೆ ಹೇಳಿದ್ದಾರೆ.ಬಿಜೆಪಿಯಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧದ ದೂರು ಇನ್ನೂ ಹಾಗೆಯೇ ಇವೆ. ಅವರಿಗೆ ಈವರೆಗೆ ಶೋಕಾಸ್‌ ನೋಟಿಸ್‌ಟ್ಟಿಲ್ಲ.ನನಗೆಮಾತ್ರ ಯಾಕೆ ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ? ಇಂಥದ್ದಕ್ಕೆಲ್ಲ ನಾನು ಹೆದರುವುದಿಲ್ಲ ಎಂದ ಅವರು, ಅದನ್ನೆಲ್ಲ ಎದುರಿಸಲು ನಾವು ಸಿದ್ಧರಾಗಿದ್ದೇವೆ. ತಪ್ಪು ಮಾಡಿದ್ದರೆ ತಾನೆ ಹೆದರೋದು ಎಂದರು.

ಸಿಎಂ ಸಿದ್ದರಾಮಯ್ಯ ದಲಿತರ ಚರ್ಮದಿಂದ ಚಪ್ಪಲಿ ಮಾಡ್ಕೊಂಡು ಮೆರೆಯುತ್ತಿದ್ದಾರೆ: ಛಲವಾದಿ ನಾರಾಯಣಸ್ವಾಮಿ

ರಾಜ್ಯದಲ್ಲಿ ಪ್ರವಾಹ ಹೋಗಿದ್ಯಾ ಎಚ್‌ಡಿಕೆ?

ಮುಡಾ ಪ್ರಕರಣದಲ್ಲಿ ಏನೂ ಇಲ್ಲ, ಪಾದಯಾತ್ರೆ ಬೇಡ ಎಂದು ಕುಮಾರ ಸ್ವಾಮಿ ಹೇಳಿ ದ್ದರು. ರಾಜ್ಯ ದಲ್ಲಿ ಪ್ರವಾಹ ಇದ್ದು, ಅದರ ಕಡೆ ಗಮನ ಕೊಡಬೇಕು ಎಂದಿದ್ದರು. ಈಗ ಪಾದಯಾತ್ರೆಗೆ ಬೆಂಬಲ ಘೋಷಿಸಿದ್ದಾರೆ. ಹಾಗಾದರೆ ರಾಜ್ಯದಲ್ಲಿ ಪ್ರವಾಹ ಹೋಗಿದೆಯಾ?.ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಮಂತ್ರಿ, ಜೆಡಿಎಸ್‌ ನಾಯಕ. ಈ ಕೇಸ್ ನಲ್ಲಿ ಏನೂ ಇಲ್ಲ, ಪಾದಯಾತ್ರೆ ಬೇಡ ಅಂತ ಮೊದಲು ಹೇಳಿದರು. ಮಳೆ ಜಾಸ್ತಿಯಾಗಿ ರಾಜ್ಯದಲ್ಲಿ ಪ್ರವಾಹ ಬಂದಿರುವ ಕಾರಣ ಅದರ ಕಡೆ ಗಮನ ಕೊಡಬೇಕು ಎಂದು ಬಿಜೆಪಿಗೆ ಸಲಹೆ ನೀಡಿದರು. ಆದರೆ ಈಗ ಬೆಂಬಲ ಘೋಷಿಸಿದ್ದಾರೆ. ಹಾಗಿದ್ದರೆ ಈಗ ರಾಜ್ಯದಲ್ಲಿ ಪ್ರವಾಹ ಹೋಗಿದ್ಯಾ? ಕುಮಾರ ಸ್ವಾಮಿ ಸ್ವಇಚ್ಛೆಯಿಂದ ಬೆಂಬಲ ಕೊಡ್ತಾ ಇಲ್ಲ, ಇಂಥದ್ದನ್ನೆಲ್ಲ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಪಾದಯಾತ್ರೆಗೆ ಅವಕಾಶ ನೀಡ್ತವೆ: ಸಿಎಂ

ಮಡಿಕೇರಿ: ಮುಡಾ ಹಗರಣ ಮುಂದಿಟ್ಟು ಕೊಂಡು ಬಿಜೆಪಿ-ಜೆಡಿಎಸ್‌ ನಡೆಸಲುದ್ದೇಶಿಸಿ ರುವ ಪಾದಯಾತ್ರೆಗೆ ಅವಕಾಶ ಕೊಡುತ್ತೇವೆ. ಆದರೆ ಹೈಕೋರ್ಟ್ ಸೂಚನೆಯಂತೆ ಬೆಂಗಳೂರಿನಲ್ಲಿ ಪಾದಯಾತ್ರೆಗೆ ಅವಕಾಶ ಇಲ್ಲ. ಬೇಕಿದ್ದರೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೈಗರ್‌ ಜಿಂದಾ ಹೈ, ಕಿಂಗ್‌ ಈಸ್ ಅಲೈವ್‌: ಸಿಎಂ ಬಗ್ಗೆ ಸಚಿವ ಬೈರತಿ ಸುರೇಶ್ ಗುಣಗಾನ
ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ