
ಚಿಕ್ಕಮಗಳೂರು (ಜು.21): ನಾನು ಹಗರಣ ಮಾಡಿದ್ದೀನಿ, ಪ್ರಶ್ನೆ ಮಾಡಿದ್ರೆ ನಿಮ್ದು ಹಗರಣ ತೆಗೀತಿನಿ ಈ ರೀತಿ ಸಿಎಂ ಬ್ಲಾಕ್‌ಮೇಲ್ ತಂತ್ರಕ್ಕೆ ಮುಂದಾಗಿರೋದು ಆಶ್ಚರ್ಯ, ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶಾಸಕ ಸುನೀಲ್ ಕುಮಾರ ಕಿಡಿಕಾರಿದರು.
ಮುಡಾ ಹಗರಣ ವಿಚಾರ ಸಂಬಂಧ ಇಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ವಾಲ್ಮೀಕಿ, ಮುಡಾ ಹಗರಣ ಬರುವ ತನಕ ಬಿಜೆಪಿ ಹಗರಣಗಳು ಗೊತ್ತಿರಲಿಲ್ಲವಾ? ಕಳೆದೊಂದು ವರ್ಷದಿಂದ ನಿಮ್ಮದೇ ಸರ್ಕಾರ ಇರುವಾಗ ಇಲ್ಲಿಯವರೆಗೂ ತನಿಖೆ ಯಾಕೆ ಮಾಡಲಿಲ್ಲ? ನಿಮ್ಮ ಕಾಲ ಬುಡಕ್ಕೆ ಬಂದಾಗ ಬಿಜೆಪಿ ಹಗರಣ ತನಿಖೆ ಮಾಡಿಸುತ್ತೇವೆ ಎನ್ನುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ನನ್ನ ವಿರುದ್ಧ ಮಾಡಿರುವ ಆರೋಪ ವಾಪಸ್ ಪಡೆಯಿರಿ: ಸಿಎಂಗೆ ವಾರ ಗಡುವು ಕೊಟ್ಟ ಸಂಸದ ಕೋಟ
ಮುಖ್ಯಮಂತ್ರಿ ಸದನದೊಳಗೆ ಎಷ್ಟೊಂದು ಸುಳ್ಳುಗಳನ್ನು ಹೇಳಿದ್ದಾರೆ. ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ(Parasurama theme park work)ಯಲ್ಲಿ 11 ಕೋಟಿ ಅವ್ಯವಹಾರ ಎಂದಿದ್ದಾರೆ. ಇನ್ನು ಸರ್ಕಾರ 11 ಕೋಟಿ ಹಣವನ್ನು ಬಿಡುಗಡೆಯೇ ಮಾಡಿಲ್ಲ. ಹಣ ಬಿಡುಗಡೆ ಆಗದ ಮೇಲೆ ಅವ್ಯವಹಾರ ಹೇಗೆ ಆಗುತ್ತೆ? ಸದನದೊಳಗೇ ಇಷ್ಟೊಂದು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನ ಎಂದೂ ಕಂಡಿಲ್ಲ. ಅವ್ಯವಹಾರ ಆಗಿದ್ರೆ ತನಿಖೆ ಮಾಡಲಿ. ಸಿಬಿಐ, ಇಂಟರ್‌ಪೋಲ್, ಸಿಐಡಿ ಯಾವುದೇ ತನಿಖೆ ಬೇಕಾದ್ರೂ ಮಾಡಿ ಎಂದು ಸಿಎಂ ಗೆ ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.