ಮುಡಾ ಹಗರಣ ಮುಚ್ಚಿಕೊಳ್ಳಲು ವಿಪಕ್ಷಗಳ ಮೇಲೆ ತನಿಖೆಯ ಗುಮ್ಮ: ಸಿಎಂ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

By Ravi Janekal  |  First Published Jul 20, 2024, 3:00 PM IST

ಇಡಿಯವರು ಸಿಎಂ ಹೆಸರು ಹೇಳುವಂತೆ ಬಂಧಿತರ‌ ಮೇಲೆ‌ ಒತ್ತಡ ಹಾಕುತ್ತಿದ್ದಾರೆ ಎಂದಿದ್ದಾರೆ. ಇಂತಹ ಮಾಹಿತಿ ಅವರಿಗೆ ಎಲ್ಲಿಂದ ಬಂತು? ಇಡಿಯವರ ತನಿಖೆ ವಿಚಾರಗಳು ಸಿಎಂ ಹೇಗೆ ಗೊತ್ತಾಯಿತು?ಅವರು ಏನೂ ತಪ್ಪು ಮಾಡದಿದ್ದರೆ, ಪ್ರಕರಣದಲ್ಲಿ ಭಾಗಿಯಾಗಿರದಿದ್ದರೆ ಅವರು ಏಕೆ ಊಹೆ ಮಾಡಿಕೊಳ್ಳಬೇಕು? ಎಚ್‌ಡಿಕೆ ಕಿಡಿ


ಹುಬ್ಬಳ್ಳಿ (ಜು.20): ಸಿದ್ದರಾಮಯ್ಯ ವಿರೋಧ ಪಕ್ಷಗಳಿಗೆ ತನಿಖೆಯ ಗುಮ್ಮ ಬಿಡ್ತಿದ್ದಾರೆ. 2012ರಲ್ಲಿ ನಡೆದ ಹಗರಣಗಳ ಬಗ್ಗೆ ಈಗ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮುಡಾ ಹಗರಣ ಬೆಳಕಿಗೆ ಬರ್ತಿದ್ದಂತೆ ಬಿಜೆಪಿ ಸರ್ಕಾರದಲ್ಲಿನ 21 ಪ್ರಕರಣಗಳನ್ನ ತನಿಖೆ ಮಾಡ್ತೇವೆ ಎಲ್ಲರನ್ನೂ ಜೈಲಿಗೆ ಕಳಿಸ್ತೇವೆ ಅಂತಾ ಹೇಳ್ತಿದ್ದಾರೆ. ಹಿಂದೆಯೂ 5 ವರ್ಷ ಸಿಎಂ ಆಗಿ ಅಧಿಕಾರದಲ್ಲಿದ್ದರು ಮತ್ತೆ ಸಿಎಂ ಆಗಿ ಒಂದು ವರ್ಷವಾಗಿದೆ. ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ಏನು ಮಾಡ್ತಿದ್ದರು? ಇವರ ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷಗಳ ಮೇಲೆ ತನಿಖೆಯ ಗುಮ್ಮ ಬಿಡುತ್ತಿದ್ದಾರೆ. ಅಂದರೆ ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಈ ಮೂಲಕ ಒಪ್ಪಿಕೊಂಡಂತಾಗಿದೆ ಎಂದು ತಿರುಗೇಟು ನೀಡಿದರು.

Latest Videos

undefined

ಅಕ್ರಮ ಆಗಲು ಕಾರಣವೇನು? ಅಧಿಕಾರಿಗಳು ಅಕ್ರಮ ಮಾಡಿದರೂ ಅದಕ್ಕೆ ಸರ್ಕಾರವೇ ಹೊಣೆ. ಇವರ ದೌರ್ಬಲ್ಯಗಳಿಂದ ಹಗರಣ ನಡೆದಿರಬಹುದು. ಅಧಿಕಾರಿಗಳ ಮೇಲೆ ಇವರ ನಿಯಂತ್ರಣವಿಲ್ಲ. ಡೆತ್ ನೋಟ್‌ನಲ್ಲಿ ಮಂತ್ರಿಗಳು ಮೌಖಿಕವಾಗಿ ಆದೇಶ ಮಾಡಿದ್ದರು ಎಂದೇ ಬರೆದಿಟ್ಟು ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಗೊತ್ತಿರಲಿಲ್ಲವೇ? ಸಿಎಂ ಈ ರೀತಿ ಉಡಾಫೆ ಉತ್ತರ ಕೊಡುವುದು ಸರಿಯಲ್ಲ. ವಿಧಾನಸಭೆ ಕಲಾಪದಲ್ಲಿ ಯಾರೋ ಕೈಲಿ ಬರೆದುಕೊಟ್ಟಿದ್ದನ್ನು ಓದಿದ್ದಾರೆ. ನಮ್ಮ ರಾಜ್ಯದಲ್ಲಿ ಈ ರೀತಿಯ ಆಡಳಿತ ನಿರೀಕ್ಷಿರಲಿಲ್ಲ ಎಂದರು.

ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದ್ದು ನಿಜ, ಆದರೆ ಮುಡಾದಲ್ಲಿ ನಡೆದಿಲ್ಲ: ಎಂಬಿ ಪಾಟೀಲ್

ಮುಡಾ ಹಗರಣದಲ್ಲಿ ಸಿಎಂ ನೇರ ಕೈವಾಡ:

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇರ ಕೈವಾಡ ಇದೆ ಎಂದು ಆರೋಪಿಸಿದ ಸಚಿವರು, ಸತ್ತವರ ಹೆಸರಲ್ಲಿಯೂ ಡೀ ನೋಟಿಫೈ ಮಾಡಲಾಗಿದೆ. ಜಮೀನು ಸಿದ್ದರಾಮಯ್ಯ(cm siddaramaiah) ಅವರದ್ದಾ? ಯಾರು ಡಿ ನೋಟಿಫಿಕೇಷನ್ ಮಾಡಿಸಿದವರು? 1992 ರಲ್ಲಿ ಪ್ರಿಲಿಮಿನರಿ ನೋಟಿಫಿಕೇಟಿನ್ ಆಗಿದೆ. 1993 ರಲ್ಲಿ ಫೋತಿ ಖಾತೆ ಆಗಿದೆ. 1998 ರಲ್ಲಿ ಸತ್ತಿರುವವರ ಹೆಸರಲ್ಲಿ ಡಿ ನೋಟಿಫೈ ಮಾಡಲಾಗಿದೆ. ಈ ಸಿದ್ದರಾಮಯ್ಯ ಹಗರಣ ಮುಚ್ಚಿಕೊಳ್ಳಲು ವಿಪಕ್ಷಗಳಿಗೆ ತನಿಖೆಯ ಗುಮ್ಮ ಬಿಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಕಾಲದ 21 ಹಗರಣಗಳ ತನಿಖೆ: ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು

ಇನ್ನು ಇಡಿಯವರು ಸಿಎಂ ಹೆಸರು ಹೇಳುವಂತೆ ಬಂಧಿತರ‌ ಮೇಲೆ‌ ಒತ್ತಡ ಹಾಕುತ್ತಿದ್ದಾರೆ ಎಂದಿದ್ದಾರೆ. ಇಂತಹ ಮಾಹಿತಿ ಅವರಿಗೆ ಎಲ್ಲಿಂದ ಬಂತು? ಇಡಿಯವರ ತನಿಖೆ ವಿಚಾರಗಳು ಸಿಎಂ ಹೇಗೆ ಗೊತ್ತಾಯಿತು?ಅವರು ಏನೂ ತಪ್ಪು ಮಾಡದಿದ್ದರೆ, ಪ್ರಕರಣದಲ್ಲಿ ಭಾಗಿಯಾಗಿರದಿದ್ದರೆ ಅವರು ಏಕೆ ಊಹೆ ಮಾಡಿಕೊಳ್ಳಬೇಕು? ನಾಲ್ಕು ಸಚಿವರ ಕೈಯಿಂದ ಉತ್ತರ ಕೊಡಿಸಿದ್ದು ಯಾಕೆ? ಎಂದು ಪ್ರಶ್ನಿಸಿದರು. ಇದೇ ವೇಳೆ ಚನ್ನಪಟ್ಟಣ ಉಪಚುನಾವಣೆಗೆ ಟಿಕೆಟ್ ಯಾರಿಗೆ ಎಂಬ ಪ್ರಶ್ನೆಗೆ, ಯಾರಿಗೆ ಟಿಕೆಟ್ ಅಂತಾ ಈಗಲೇ ಹೇಳಲಾಗಲ್ಲ. ಆದರೆ ಎನ್‌ಡಿಎ ಅಭ್ಯರ್ಥಿಯನ್ನೇ ಅಖಾಡಕ್ಕೆ ಇಳಿಸುತ್ತೇವೆ ಎಂದರು.

click me!