ಸಿಎಂ ಸಿದ್ದರಾಮಯ್ಯ ಜನ ತಿಳ್ಕೊಂಡಷ್ಟು ಪರಿಶುದ್ಧರೇನಲ್ಲ: ಸಿಟಿ ರವಿ ವಾಗ್ದಾಳಿ

Published : Sep 27, 2024, 03:00 PM ISTUpdated : Sep 27, 2024, 03:08 PM IST
ಸಿಎಂ ಸಿದ್ದರಾಮಯ್ಯ ಜನ ತಿಳ್ಕೊಂಡಷ್ಟು ಪರಿಶುದ್ಧರೇನಲ್ಲ: ಸಿಟಿ ರವಿ ವಾಗ್ದಾಳಿ

ಸಾರಾಂಶ

ಸಿದ್ದರಾಮಯ್ಯ ಅವರ ಸಾರ್ವಜನಿಕ ಜೀವನ ಹೇಳಿಕೊಂಡಷ್ಟು ಪರಿಶುದ್ಧವೇನಲ್ಲ. ತಮ್ಮ ಭ್ರಷ್ಟಾಚಾರ ಹೊರಗೆ ಬರಬಾರದು ಅಂತಾ ಪೂರ್ವ ತಯಾರಿ ಮಾಡಿಕೊಂಡು ಭ್ರಷ್ಟಾಚಾರ ಮಾಡುವವರು ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.

ಬೆಂಗಳೂರು (ಸೆ.27): ಸಿದ್ದರಾಮಯ್ಯ ಅವರ ಸಾರ್ವಜನಿಕ ಜೀವನ ಹೇಳಿಕೊಂಡಷ್ಟು ಪರಿಶುದ್ಧವೇನಲ್ಲ. ತಮ್ಮ ಭ್ರಷ್ಟಾಚಾರ ಹೊರಗೆ ಬರಬಾರದು ಅಂತಾ ಪೂರ್ವ ತಯಾರಿ ಮಾಡಿಕೊಂಡು ಭ್ರಷ್ಟಾಚಾರ ಮಾಡುವವರು ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.

ಮುಡಾ ಹಗರಣ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೇಲೆ 65 ಕ್ಕೂ ಹೆಚ್ಚು ಭ್ರಷ್ಟಾಚಾರ ದ ಆರೋಪಗಳಿವೆ. ತನಿಖೆ ಆಗದಂತೆ ಮುನ್ನೆಚ್ಚರಿಕೆವಹಿಸಿ ಅವರಿಗೆ ಅವರೇ ಪ್ರಾಮಾಣಿಕರೆಂದು ಹೇಳಿಕೊಳ್ತಾ ಇದ್ದಾರೆ. ಈಗ ಈ ಪ್ರಕರಣದಲ್ಲಿ ಸಿಬಿಐ ತನಿಖೆ ಆಗದಂತೆ ಅಧಿಕಾರವನ್ನು ಮೊಟಕುಗೊಳಿಸಿರುವುದರ ಹಿಂದೆ ಇದೇ ದುರುದ್ದೇವಿದೆ ಇನ್ನೇನಿಲ್ಲ. ಇಲ್ಲದಿದ್ರೆ ಅವರಿಗೆ ಸಿಬಿಐ ತನಿಖೆ ಬಗ್ಗೆ ಭಯ ಯಾಕೆ ಬರಬೇಕು ಎಂದು ಪ್ರಶ್ನಿಸಿದರು.

ಗೋಧ್ರಾ ಪ್ರಕರಣದಲ್ಲಿ ನೀವು ರಾಜೀನಾಮೆ ಕೊಟ್ರಾ? ಪ್ರಧಾನಿ ಮೋದಿಗೆ ಸಿಎಂ ತಿರುಗೇಟು

ಸಿದ್ದರಾಮಯ್ಯ ನಿಜವಾಗಲೂ ಪ್ರಾಮಾಣಿಕರಾಗಿದ್ದಾರೆ. ಮೈಮೇಲೆ ಕಪ್ಪು ಚುಕ್ಕೆ ಇಲ್ಲದಿದ್ರೆ, ಭ್ರಷ್ಟಾಚಾರ ರಹಿತ ರಾಜಕಾರಣ ಮಾಡಿದ್ದರೆ ಯಾವ ತನಿಖೆಗೂ ಹೆದರಬೇಕಿಲ್ಲ. ಎಷ್ಟೇ ಶುದ್ಧಹಸ್ತರೆಂದು ಹೇಳಿಕೊಂಡರು ಕಾಂಗ್ರೆಸ್ ಪರಮಭ್ರಷ್ಟ ಸರ್ಕಾರವಾಗಿದೆ. ರಾಜ್ಯಪಾಲರ ಪತ್ರಕ್ಕೆ ಸಂಪುಟ ದ ನಿರ್ಣಯದ ಬಳಿಕವೇ ಉತ್ತರ ಕೊಡಬೇಕು ಎಂಬ ಹಾಸ್ಯಾಸ್ಪದ ನಿರ್ಧಾರ ಕೂಡಾ ತೆಗೆದುಕೊಂಡಿದ್ದೀರಿ. ರಾಜ್ಯಪಾಲರ ಪತ್ರಕ್ಕೂ ಉತ್ತರ ನೀಡುವ ಅಧಿಕಾರವೂ ಮುಖ್ಯ ಕಾರ್ಯದರ್ಶಿಗೆ ಇಲ್ಲವಾ? ಪಾರದರ್ಶಕತೆ ಪ್ರಜಾಪ್ರಭುತ್ವದ ಭಾಗ ಆಗಬೇಕು. ರಾಜ್ಯಪಾಲರ ಪತ್ರಕ್ಕೆ ಉತ್ತರ ಕೊಡಲೇಬಾರದು ಎಂಬ ನಿಲುವು ಪ್ರಜಾಪ್ರಭುತ್ವ ದ ಆಶಯಕ್ಕೆ ವಿರುದ್ದವಾಗಿದೆ. ಅವಕಾಶ ಇದ್ದಿದ್ದರೆ ಲೋಕಾಯುಕ್ತಕ್ಕೂ ಭೀಗ ಹಾಕ್ತಾ ಇದ್ರೋ ಏನೋ.? ಎಂದು ಹರಿಹಾಯ್ದರು.

ನಿಮ್ಮದೇ ಸರ್ಕಾರ ಕೆಂಪಣ್ಣ ಆಯೋಗ ರಚನೆ ಮಾಡಿತ್ತು. ಆದ್ರೆ ಕೆಂಪಣ್ಣ ವರದಿ ಬಹಿರಂಗ ಮಾಡದೇ ಇನ್ನೊಂದು ಆಯೋಗ ರಚನೆ ಮಾಡಿದ್ಯಾಕೆ? ಕಾಲ ಹರಣ ಮಾಡಲು, ಮತ್ತೊಂದು ಆಯೋಗ ರಚನೆ ಮಾಡಿದ್ರಾ? ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ವಿತಂಡವಾದ ಮಾಡ್ತಾ ಇದ್ದಾರೆ. ಕುಮಾರಸ್ವಾಮಿ, ಮೋದಿ ಅವರ ಬಗ್ಗೆ ಮಾತಾಡ್ತಾ ಇದ್ದಾರೆ. ಮೋದಿ ಅವರ ಮೇಲೆ ಭ್ರಷ್ಟಾಚಾರ ಆರೋಪ ಮಾಡ್ತಾ ಇದ್ದಾರೆ. ನಿಮ್ಮ ಹಾಗೆ ಮೋದಿ ಅವರು ಭ್ರಷ್ಟಾಚಾರ ಆರೋಪ ಹೊತ್ತಿಲ್ಲ. ಸಿದ್ದರಾಮ್ಯಯ ತಮ್ಮ ಮೇಲಿನ ಆರೋಪಗಳು ಮರೆಮಾಚಲು ಮೋದಿಯವರ ಹೆಸರನ್ನು ಎಳೆದು ತರ್ತಾ ಇದ್ದಾರೆ.

ಸಿದ್ದರಾಮಯ್ಯನವರೇ ನಿಮ್ಮದು ಬರೀ ವಿತಂಡವಾದ. ನ್ಯಾಯಮೂರ್ತಿ ಸಂತೋಷ್ ಹಗ್ಡೆ ಅಂತವರ ಮಾತಾದರೂ ಕೇಳಿ. ಕೋಳಿವಾಡ ಅವರು ಪಕ್ಷವನ್ನು ಉಳಿಸುವ ಮಾತು ಆಡಿದರು ಆದರೆ ದುರ್ಯೋಧನ ನ ಸಮರ್ಥನೆ ಮಾಡುವವರರು ಶಕುನಿ ಅಂತಹವರ ಮಾತು ಕೇಳ್ತಾರೆ. ವಿಧುರನಂತಹವರನ್ನು ದೂರ ಇಡ್ತಾರೆ. ರಾಜಕೀಯ ಕುರುಕ್ಷೇತ್ರ ಕ್ಕೆ ಆಹ್ವಾನ ಕೊಡ್ತಾ ಇದ್ದಾರೆ. ಇದಕ್ಕೆ ನಾವೂ ಸಿದ್ದರಿದ್ದೇವೆ. ಮೋದಿಯವರು ಗೋಧ್ರಾ ಘಟನೆ ಬಳಿಕ ಜನರ ಆದೇಶ ಪಡೆದರು ಹೈಕೋರ್ಟ್ ಛೀಮಾರಿ ಹಾಕಿದ ಮೇಲೂ ನಾನ್ಯಾಕೆ ರಾಜೀನಾಮೆ ಕೊಡಬೇಕು ಅನ್ನುವ ನಿಮಗೆ ಮೋದಿಯವರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ತಿರುಗೇಟು ನೀಡಿದರು.

ನಾನ್ಯಾಕೆ ರಾಜೀನಾಮೆ ಕೊಡಲಿ, ನಾನು ಯಾವ ತಪ್ಪು ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

ಕೊನೆದಾಗಿ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸವಾಲು ಹಾಕುತ್ತೇನೆ, ರಾಜೀನಾಮೆ ಕೊಟ್ಟು ಸರ್ಕಾರ ವಿಸರ್ಜನೆ ಮಾಡಿ ಜನರ ಬಳಿಗೆ ಹೋಗೋಣ. ಕಾಂಗ್ರೆಸ್, ಬಿಜೆಪಿ ಬಗ್ಗೆ ಜನರೇ ತೀರ್ಪು ಕೊಡಲಿ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಹ ಬೇಲ್ ಮೇಲೆ ಇದ್ದಾರೆ. ಅವರು ಅವರು ಭ್ರಷ್ಟಾಚಾರವನ್ನು ಸಮರ್ಥನೆ ಮಾಡದೇ ಇನ್ಯಾರು ಮಾಡ್ತಾರೆ. ಅವರ ಮೇಲೆ ಇರುವ ಆರೋಪ ಅದಾಯಕ್ಕಿಂತ ಹೆಚ್ಚು ಸಂಪಾದನೆ ಮಾಡಿದ್ದಾರೆ ಅಂತಾ. ಬೇವಿನಕಾಯಿಗೆ ಹಾಗಲಕಾಯಿ ತಾನೇ ಸಾಕ್ಷಿ ಹೇಳಬೇಕು ಎಂದು ಲೇವಡಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?