ಈಶ್ವರಪ್ಪ ಮನೆಯಲ್ಲಿ ಸಭೆ: ಚರ್ಚಿತ ವಿಷಯ ಹೇಳಿದ್ರೆ ರಾಜೂಗೌಡನನ್ನು ವಿಜಯೇಂದ್ರ ಹೊಡಿತ್ತಿದ್ದ, ರಮೇಶ್ ಜಾರಕಿಹೊಳಿ

By Girish Goudar  |  First Published Sep 27, 2024, 12:36 PM IST

ಸಭೆಯಲ್ಲಿ ಈಶ್ವರಪ್ಪರ‌ನ್ನು‌ ಬಿಜೆಪಿಗೆ ಕರೆತರುವ ಬಗ್ಗೆ ಚರ್ಚೆಯೇ ಆಗಿಲ್ಲ. ಈಶ್ವರಪ್ಪರ‌ನ್ನು ಬಿಜೆಪಿಗೆ ಕರೆತರುವ ಶಕ್ತಿ ನನಗಿಲ್ಲ. ಈಶ್ವರಪ್ಪರನ್ನು ನಮ್ಮ ರಾಷ್ಟ್ರೀಯ ನಾಯಕರೇ ಉಚ್ಛಾಟನೆ ಮಾಡಿದ್ದಾರೆ. ಈಶ್ವರಪ್ಪ ಅವರನ್ನು ರಾಷ್ಟ್ರೀಯ ನಾಯಕರೇ ತೆಗೆದುಕೊಳ್ಳಬೇಕು ಎಂದು ತಿಳಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ


ಬೆಳಗಾವಿ(ಸೆ.27): ಈಶ್ವರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ಯಾವುದೇ ವಿಶೇಷತೆ ಏನೂ ಇಲ್ಲ. ನಾನು ಮುಂಬೈನಿಂದ ಬೆಂಗಳೂರಿಗೆ ಬಂದ‌ ತಕ್ಷಣವೇ ಯತ್ನಾಳ ‌ಕಾಲ್ ಮಾಡಿದ್ರು. ಈಶ್ವರಪ್ಪ ಮನೆಗೆ ಹೋಗಿ ಬರೋಣ ಎಂದು ಯತ್ನಾಳ ಕಾಲ್ ಮಾಡಿ ಕರೆದರು. ಆದರೆ ಅಂದು ಈಶ್ವರಪ್ಪ ‌ಮನೆಗರ ರಾಜುಗೌಡ ಬಂದಿದ್ದು ಗೊತ್ತಿರಲಿಲ್ಲ. ರಾಜುಗೌಡ ಬಂದಿದ್ದು ಗೊತ್ತಾದ್ರೆ ನಾನು ಒಳಗೆ ಹೋಗುತ್ತಿರಲಿಲ್ಲ. ಈಶ್ವರಪ್ಪ ‌ಮನೆಯಲ್ಲಿ ಯಾವುದೇ ರಾಜಕೀಯ ಚರ್ಚೆಗಳೇ ಆಗಿಲ್ಲ. ಈಶ್ವರಪ್ಪ-ಯತ್ನಾಳ ‌ಅವರು ತಮ್ಮ ಸಮುದಾಯಕ್ಕೆ ಮೀಸಲಾತಿ‌ ಕೊಡಿಸುವ ಬಗ್ಗೆ ಚರ್ಚಿಸಿದರು. ಪಂಚಮಸಾಲಿಗೆ 2 ಎ ಮೀಸಲಾತಿ, ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಬಗ್ಗೆಯಷ್ಟೇ ಚರ್ಚೆ ಆಗಿದೆ ಅಷ್ಟೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. 

ಮಾಜಿ ಸಚಿವ ಈಶ್ವರಪ್ಪ ಮನೆಯಲ್ಲಿ ಬಿಜೆಪಿ ನಾಯಕರ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸಭೆಯಲ್ಲಿ ಈಶ್ವರಪ್ಪರ‌ನ್ನು‌ ಬಿಜೆಪಿಗೆ ಕರೆತರುವ ಬಗ್ಗೆ ಚರ್ಚೆಯೇ ಆಗಿಲ್ಲ. ಈಶ್ವರಪ್ಪರ‌ನ್ನು ಬಿಜೆಪಿಗೆ ಕರೆತರುವ ಶಕ್ತಿ ನನಗಿಲ್ಲ. ಈಶ್ವರಪ್ಪರನ್ನು ನಮ್ಮ ರಾಷ್ಟ್ರೀಯ ನಾಯಕರೇ ಉಚ್ಛಾಟನೆ ಮಾಡಿದ್ದಾರೆ. ಈಶ್ವರಪ್ಪ ಅವರನ್ನು ರಾಷ್ಟ್ರೀಯ ನಾಯಕರೇ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. 

Latest Videos

undefined

ವಿಜಯೇಂದ್ರ ನಾಯಕತ್ವ ಬಗ್ಗೆ ನಿಲ್ಲದ ಅಸಮಾಧಾನ: ಬಂಗಾರಪ್ಪ ನಿವಾಸದಲ್ಲಿ ಅತೃಪ್ತರ ಸಭೆ

ಸಭೆಯಲ್ಲಿ ನಿಜವಾಗಿ ಚರ್ಚೆ ಆದ ವಿಷಯ ಮಾಧ್ಯಮಗಳ ಎದುರು ರಾಜೂಗೌಡ ಹೇಳಿಲ್ಲ. ನಿಜವಾದ ಚರ್ಚಿತ ವಿಷಯ ಹೇಳಿದ್ರೆ ರಾಜೂಗೌಡನನ್ನು ವಿಜಯೇಂದ್ರ ಹೊಡಿತ್ತಿದ್ದ ಎಂದು ಹೇಳಿದ್ದಾರೆ. 

ಈಶ್ವರಪ್ಪ ‌ಆರ್‌ಸಿಬಿ ಬ್ರಿಗೇಡ್ ಸ್ಥಾಪನೆ ಬಗ್ಗೆ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ಪ್ರಜಾಪ್ರಭುತ್ವದಲ್ಲಿ ‌ಯಾರು ಏನು ಬೇಕಾದರೂ ‌ಸಂಘಟನೆ‌ ಮಾಡಬಹುದು, ಅವರ ಹಕ್ಕಿದೆ. ಈಶ್ವರಪ್ಪ ಹಿಂದುಳಿದ ವರ್ಗಗಳ ನಾಯಕ. ಆದರೆ ಅವರ ಮನೆಯಲ್ಲಿ ಸೇರಿದನ್ನು ರಾಜಕೀಯ ಮಾಡಿದ್ದರ ಬಗ್ಗೆ ಬೇಜಾರಿದೆ. ರಾಜೂಗೌಡ ಬಿಎಸ್‌ವೈ ಶಿಷ್ಯಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜೂಗೌಡ ಸ್ವಭಾವ ಮೊದಲಿನಿಂದಲೂ ಹೀಗೆ ಇದೆ. ನಾವು ಭಿನ್ನಮತೀಯ ನಾಯಕರು ಅಲ್ಲವೇ ಅಲ್ಲ. ಪಕ್ಷ ಶುದ್ಧೀಕರಣಕ್ಕಾಗಿ ಸಭೆ ಮಾಡ್ತಿದ್ದೇವೆ, ಸಂಘಟನೆಗೆ ಸಭೆ, ಪಕ್ಷದ ಚೌಕಟ್ಟಿನಲ್ಲಿ ನಾವು ಕೆಲಸ ಮಾಡ್ತಿದ್ದೇವೆ ಎಂದ ರಮೇಶ್ ‌ಜಾರಕಿಹೊಳಿ ತಿಳಿಸಿದ್ದಾರೆ. 

click me!