'ಪಾಪದ ಕೊಡ ತುಂಬಿದಾಗ ಈ ಸರ್ಕಾರ ತಾನಾಗೇ ಬೀಳುತ್ತೆ..' ಸಚಿವ ಎನ್ಎಸ್ ಬೋಸರಾಜುಗೆ ಆರ್ ಅಶೋಕ್ ತಿರುಗೇಟು

By Ravi JanekalFirst Published Oct 4, 2024, 1:00 PM IST
Highlights

ಕಾಂಗ್ರೆಸ್‌ನವರು ನನ್ನ ರಾಜೀನಾಮೆ ಕೇಳಿದ್ದರು. ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 24 ಗಂಟೆಯೊಳಗೆ ರಾಜೀನಾಮೆ ಕೊಡಿಸುವಂತೆ ಗಡುವು ನೀಡಿದ್ದೆ. ಇನ್ನೂ ಸಮಯವಿದೆ ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಕೊಡಿಸಲಿ ನೋಡೋಣ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಸವಾಲು ಹಾಕಿದರು.

ಚಿತ್ರದುರ್ಗ (ಅ.4): ಕಾಂಗ್ರೆಸ್‌ನವರು ನನ್ನ ರಾಜೀನಾಮೆ ಕೇಳಿದ್ದರು. ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 24 ಗಂಟೆಯೊಳಗೆ ರಾಜೀನಾಮೆ ಕೊಡಿಸುವಂತೆ ಗಡುವು ನೀಡಿದ್ದೆ. ಇನ್ನೂ ಸಮಯವಿದೆ ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಕೊಡಿಸಲಿ ನೋಡೋಣ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಸವಾಲು ಹಾಕಿದರು.

ಇಂದು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಅವರು, ಮುಡಾ ಹಗರಣದ ಬಗ್ಗೆ ಮಾತಾಡಿದ್ದಕ್ಕೆ ನಾವು ಹುಚ್ಚರಂತೆ ಕಾಣುತ್ತೇವೆ. ಅಧಿಕಾರ, ಹಣ ಇದ್ದಾಗ ಈ ರೀತಿ ಮಾತುಗಳನ್ನಾಡುತ್ತಾರೆ. ನಾನು ಅವರಂತೆ ಕೆಳಮಟ್ಟಕ್ಕಿಳಿದು ಪ್ರತಿಕ್ರಿಯೆ ನೀಡಲು ಹೋಗಲ್ಲ ಆರ್ ಅಶೋಕ್, ಹೆಚ್‌ಡಿಕೆ ಇಬ್ಬರೂ ಹುಚ್ಚರಂತೆ ಮಾತಾಡುತ್ತಾರೆ ಎಂದ ಸಚಿವ ಎನ್‌ಎಸ್‌ ಬೋಸರಾಜು ಗೆ ತಿರುಗೇಟು ನೀಡಿದರು.

Latest Videos

ಹೆಚ್‌ಡಿ ಕುಮಾರಸ್ವಾಮಿ, ಆರ್ ಅಶೋಕ್ ಇಬ್ಬರೂ ಹುಚ್ಚರು: ಎನ್‌ಎಸ್ ಬೋಸರಾಜು ಕಿಡಿ

ಅಧಿಕಾರ ಬಿಳಿಸಲು ಬಿಜೆಪಿ 14 ಶಾಸಕರಿಗೆ ಆಮಿಷವೊಡ್ಡಿ ಆಪರೇಷನ್ ಕಮಲಕ್ಕೆ ಯತ್ನಿಸಿದ್ದರು ಎಂಬ ಸಚಿವ ಎನ್ ಎಸ್‌ ಬೋಸರಾಜು ಆರೋಪ ಮಾಡಿದ್ದಾರೆ. ನಾನು ಈಗಲೂ ಕೇಳ್ತೇನೆ ಆ 14 ಶಾಸಕರು ಯಾರೆಂದು ಹೇಳಲಿ, ದೂರು ದಾಖಲಿಸಲಿ.  ಯಾಕೆ ದೂರು ದಾಖಲಿಸಿಲ್ಲ? ಆಗಿದ್ದರೆ ತಾನೇ? ಸುಖಾಸುಮ್ಮನೆ ಆರೋಪ ಮಾಡುವುದಲ್ಲ ಆ ಬಗ್ಗೆ ಏನಾದರೂ ದಾಖಲೆಗಳಿದ್ದಲ್ಲಿ ತೋರಿಸಲಿ, ಆಪರೇಷನ್ ಕಮಲಕ್ಕೆ ಯತ್ನ ಆಗಿದ್ದರೆ ದೂರು ಕೊಡಲಿಲ್ಲ ಏಕೆ? ಎಂದು ಪ್ರಶ್ನಿಸಿದರು.

ಮುಡಾ ಹಗರಣ ಬಯಲು ಮಾಡಿದ್ದು ಯಾರು?

ಮುಡಾ ಹಗರಣ ಬಯಲು ಮಾಡಿದವರು ಯಾರು, ಜ್ಞಾನ ಇರಬೇಕಲ್ಲ. ಮುಡಾ ಯಾರ ಅಧಿಕಾರದಲ್ಲಿದೆ, ಮುರಿಗೌಡ ಯಾರು? ಮುಡಾ ಹಗರಣದ ಸೈಟ್ ಬೆಲೆ 80-90ಲಕ್ಷ ಎಂದೇ ಭಾವಿಸಿದ್ದೆವು. ಸಿಎಂ ಹಿಂದೆ ನಿಂತ ವ್ಯಕ್ತಿ ಹೇಳಿದ್ದು ಕೇಳಿ 62 ಕೋಟಿ ಎಂದು ಹೇಳಿದ್ದರು. ನಿಮ್ಮ ಹಿಂಬಾಲಕರೇ ನಿಮಗೆ ಖೆಡ್ಡಾ ತೋಡಿದ್ದಾರೆ. ಇದನ್ನೇ 'ಸಂಗೊಳ್ಳಿ ರಾಯಣ್ಣಗೆ ಆದ ಸ್ಥಿತಿ ನನಗೂ ಆಗುತ್ತಿದೆ' ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು. ಏನಿದರ ಅರ್ಥ? ಪಕ್ಷದೊಳಗೆ ಸಿಎಂ ಕುರ್ಚಿಗೆ ನಡೆಯುತ್ತಿರುವ ಗುದ್ದಾಟದಿಂದ ಮುಡಾ ಹಗರಣ ಬಯಲಿಗೆ ಬಂದಿದೆ. ಕಾಂಗ್ರೆಸ್ ಪಕ್ಷದವರೇ ಹಗರಣವನ್ನು ಬಯಲು ಮಾಡಿದ್ದಾರೆ. ವಿರೋಧ ಪಕ್ಷದವರಾಗಿ ನಾವು ಪ್ರಶ್ನಿಸಿದ್ದೇವೆ. ಮುಡಾ ಹಗರಣ ಗಂಭೀರವಾಗಿ. ಇದೆಲ್ಲ ನೋಡಿಕೊಂಡು ವಿಪಕ್ಷವಾಗಿ ನಾವು ಸುಮ್ಮನಿರಬೇಕ? ಸಿಎಂ ಸಿದ್ದರಾಮಯ್ಯರ ವಿರುದ್ಧ ಪ್ರಶ್ನಿಸಿದರೆ ಹುಚ್ಚರು ಎಂದ ಎನ್‌ ಬೋಸರಾಜು ವಿರುದ್ಧ ಹರಿಹಾಯ್ದರು.
 

ಸಿದ್ದರಾಮಯ್ಯ ಜೀವನಾಧರಿತ 'ಲೀಡರ್ ರಾಮಯ್ಯ' ಚಿತ್ರದ ಚಿತ್ರೀಕರಣ ವಿಳಂಬ; ತಮಿಳಿನ ಆ ಸ್ಟಾರ್ ನಟನಿಗೆ ಕಾಯುತ್ತಿದೆ ಚಿತ್ರತಂಡ?

ಈ ಸರ್ಕಾರ ಬೀಳಿಸಲು ನಾವು ಹೋಗಲ್ಲ. ಪಾಪದ ಕೊಡ ತುಂಬಿದಾಗ ಅದಾಗೇ ಬೀಳುತ್ತದೆ, ಬೀಳಬೇಕು. ನಾವು ಸರ್ಕಾರ ಅತಂತ್ರ ಮಾಡುವುದು, ಬಿಳಿಸುವ ಯತನ್ ಮಾಡುವುದಿಲ್ಲ. ಕಾಂಗ್ರೆಸ್‌ನಲ್ಲೇ ಅಧಿಕಾರಕ್ಕೆ ಬಂದಾಗಿಂದ ಸಿಎಂ ಕುರ್ಚಿಗೆ ಏಳೆಂಟು ಜನ ಸಚಿವರೇ ಟವೆಲ್ ಹಾಕಿ ಕೂತಿದ್ದಾರೆ. ಅಧಿಕಾರಕ್ಕಾಗಿ ಅವರಿಗೆ ಅವರೇ ವಿರೋಧಿಗಳು. ಸಿದ್ದರಾಮಯ್ಯ ಅವರ ಪಕ್ಷದವರೇ, ತಮ್ಮ ಸುತ್ತಮುತ್ತ ಇರುವವರೇ ವಿರೋಧಿಗಳು. ಇದೀಗ ಬಯಲಾಗಿರುವ ಮುಡಾ ಹಗರಣ ಕಾಂಗ್ರೆಸ್ ನವರಿಂದಲೇ ವಿಪಕ್ಷಕ್ಕೆ ದಾಖಲೆಗಳು ಸಿಗುತ್ತಿವೆ. ಅದು ಸಿದ್ದರಾಮಯ್ಯರಿಗೆ, ಹೆಚ್‌ಸಿ ಮಹದೇವಪ್ಪಗೆ ಗೊತ್ತಿರೋದ್ರಿಂದಲೇ 'ನಮ್ಮಲ್ಲೇ ಅಧಿಕಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ' ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಬಿಜೆಪಿ ಮೇಲೆ ಆರೋಪ ಮಾಡುವುದೇ ಯಾಕೆ? ಎಂದು ಸಚಿವ ಎನ್‌ಎಸ್ ಬೋಸರಾಜ ವಿರುದ್ಧ ಹರಿಹಾಯ್ದರು.

click me!