ಬಿಜೆಪಿಯವರು ಸಾರ್ವಜನಿಕರಿಗೆ ದಾಖಲೆ ಕೊಟ್ಟು ಮಾತಾಡಲಿ. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನಸೌಧ (ಜು.25): ಬಿಜೆಪಿಯವರು ಸಾರ್ವಜನಿಕರಿಗೆ ದಾಖಲೆ ಕೊಟ್ಟು ಮಾತಾಡಲಿ. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮುಡಾ ಹಗರಣ ವಿರುದ್ಧ ಬಿಜೆಪಿ ನಾಯಕರು ಮೈಸೂರಿಗೆ ಪಾದಯಾತ್ರೆ ಹೊರಟಿರುವ ವಿಚಾರ ಸಂಬಂಧ ಇಂದು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಯವರು ಮೈಸೂರಿಗೆ ಹೋಗಲಿ ಯಾರು ಬೇಡ ಎಂದರು. ಬಹಳ ಸಂತೋಷ್ ಹೋಗಲಿ, ವೆದರ್ ತುಂಬಾ ಚೆನ್ನಾಗಿದೆ. ನಡೆದುಕೊಂಡೇ ಹೋಗಲಿ ಎಂದು ಟಾಂಗ್ ನೀಡಿದರು.
ಸಿಎಂ ಸಿದ್ದರಾಮಯ್ಯರ ಒಂದು ಕೂದಲೂ ಕಿತ್ಕೊಳ್ಳೋಕಾಗೊಲ್ಲ; ಕೇಂದ್ರದ ನಾಯಕರಿಗೆ ಪ್ರದೀಪ್ ಈಶ್ವರ್ ಸವಾಲು!
ದೇವರಾಜ್ ಟ್ರಕ್ ಟರ್ಮಿನಲ್, ಅತಿವೃಷ್ಟಿ, ಇಡಿ ಪ್ರಕರಣ ಇತ್ತು. ಇವೆಲ್ಲ ಚರ್ಚೆ ಮಾಡದೇ ಮುಡಾವನ್ನೇ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡ್ತಿದ್ದಾರೆ. ಏನೇನು ದಾಖಲೆಗಳಿವೆಯೋ ಕೊಡಲಿ, ಬೇಡ ಅಂದೋರು ಯಾರು? ಬಿಜೆಪಿ ಜೆಡಿಎಸ್ ದಾಖಲೆ ಇಟ್ಟುಕೊಂಡು ಮಾತಾಡಲಿ ಕೇಂದ್ರದ ಬಜೆಟ್‌ನಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಇದರ ಬಗ್ಗೆ ಮಾತನಾಡಲು ಬಿಜೆಪಿಯವರು ತಯಾರಿಲ್ಲ. ಭೋವಿ ನಿಗಮ, ಬಾಸ್ಕೋ ಕೇಸ್ ಬಗ್ಗೆ ಚರ್ಚಿಸಲು ತಯಾರಿಲ್ಲ. ಅವರು ಹಾಕಿದ ತಾಳಕ್ಕೆ ಕುಣಿಯಲು ನಾವು ರೆಡಿಯಿಲ್ಲ ಎಂದರು.
ಮುಡಾ ಹಗರಣದ ವಿರುದ್ಧ ಹೋರಾಟಕ್ಕೆ ಬಿಜೆಪಿಗೆ ಕಾಂಗ್ರೆಸ್ಸಿಂದಲೇ ಒತ್ತಡ: ವಿಜಯೇಂದ್ರ
ಇನ್ನು ನೀಟ್ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವರು, ನಮ್ಮ ರಾಜ್ಯ ಯಾವಾಗಲೂ ಪ್ರಗತಿಪರ ರಾಜ್ಯ. ನೀಟ್ ಬರೋ ಮೊದಲೇ ನಾವು ಸಿಇಟಿ ಮಾಡಿದ್ದೆವು. ಗುಜರಾತ್ ವಿದ್ಯಾರ್ಥಿನಿ ಒಬ್ಬಳು ಬೆಳಗಾವಿಗೆ ಬಂದು ನೀಟ್ ಪರೀಕ್ಷೆ ಬರೆಯುತ್ತಾಳೆ. ಅವಳಿಗೆ 704 ಮಾರ್ಕ್ಸ್ ಬರುತ್ತೆ. ಅದರೆ ಅವಳು ನೋಡಿದ್ರೆ ಪಿಯುಸಿ ಸಹ ಪಾಸ್ ಆಗಿಲ್ಲ. ನಮ್ಮ ಮಕ್ಕಳು ಭವಿಷ್ಯವನ್ನು ಅವರ ಕೈಯಲ್ಲಿ ಕೊಟ್ಟು ಹಾಳು ಮಾಡಲ್ಲ. ಕರ್ನಾಟಕದಲ್ಲೇ ಹೆಚ್ಚಿನ ಮೆಡಿಕಲ್ ಕಾಲೇಜು ಇರೋದು. ಹೀಗಾಗಿ ನಾವು ನೀಟ್ ವಿರುದ್ಧ ರೆಸಲ್ಯೂಷನ್ ಪಾಸ್ ಮಾಡಿದ್ದೇವೆ ಎಂದರು.