ಸಿದ್ದರಾಮಯ್ಯನವರು ಮಂಡಿಸಿದ್ದು ಅಲ್ಪಸಂಖ್ಯಾತರ ಓಲೈಕೆಯ ಬಜೆಟ್: ಸಂಸದ ಯದುವೀರ್ ಒಡೆಯರ್ ಟೀಕೆ

Published : Mar 07, 2025, 10:33 PM ISTUpdated : Mar 07, 2025, 10:55 PM IST
ಸಿದ್ದರಾಮಯ್ಯನವರು ಮಂಡಿಸಿದ್ದು ಅಲ್ಪಸಂಖ್ಯಾತರ ಓಲೈಕೆಯ ಬಜೆಟ್: ಸಂಸದ ಯದುವೀರ್ ಒಡೆಯರ್ ಟೀಕೆ

ಸಾರಾಂಶ

ಸಿಎಂ ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯದ ಬಜೆಟ್ ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ ಆಗಿದೆ ಎಂದು ಮೈಸೂರು ಕೊಡಗು ಸಂಸದ ಯದುವೀರ್ ಸಂಸದ ಯದುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮಾ.07): ಸಿಎಂ ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯದ ಬಜೆಟ್ ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ ಆಗಿದೆ ಎಂದು ಮೈಸೂರು ಕೊಡಗು ಸಂಸದ ಯದುವೀರ್ ಸಂಸದ ಯದುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಅವರು. ಬಜೆಟ್ ನಲ್ಲಿ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುವ ಬಜೆಟ್ ಅಲ್ಪಸಂಖ್ಯಾತರಿಗಾಗಿಯೇ ಬಹಳಷ್ಟು ಯೋಜನೆ ರೂಪಿಸಿದ್ದಾರೆ. ಇದರಿಂದ ನಮಗೇನು ಸಮಸ್ಯೆ ಇಲ್ಲ. ಆದರೆ ಎಲ್ಲರಿಗೂ ಒಳ್ಳೆಯದಾಗಬೇಕು, ಲಾಭವಾಗಬೇಕು ಅಲ್ಲವೆ.? ನೋಡಿದರೆ ಹಿಂದೂಗಳಿಗೆ ಕೊಡಬೇಕಾಗಿರುವುದನ್ನು ಕೊಡುವುದರಲ್ಲಿ ಸರ್ಕಾರ ವಿಪಲವಾಗಿದೆ. 

ಅದು ಮುಖ್ಯವಾಗಿ ಬಜೆಟ್ ನಲ್ಲಿ ಎದ್ದು ಕಾಣುತ್ತಿದೆ. ಬರೀ ಅಲ್ಪಸಂಖ್ಯಾತರನ್ನು ಓಲೈಸಿರುವ ರೀತಿ ಬಜೆಟ್ ರೂಪಿಸಿರುವುದು ಕಾಣುತ್ತದೆ. ರಾಜ್ಯದಲ್ಲಿ ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದಕ್ಕೆ ಸರ್ಕಾರ ಮುಂದಾಗಿದೆ. ಆದರೆ ವಿದೇಶದಲ್ಲಿ ಓದುವ ಅಲ್ಪಸಂಖ್ಯಾತರಿಗೆ ಇದ್ದ ಸಹಾಯಧನವನ್ನು 20 ರಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತರ ವಿದ್ಯಾಭ್ಯಾಸಕ್ಕಾಗಿ ಅವರು ಅವಕಾಶ ನೀಡುತ್ತಿದ್ದಾರೆ. ಒಳ್ಳೆಯ ಕೆಲಸವಿದ್ದರೆ ನಾವು ಬೆಂಬಲಿಸುತ್ತೇವೆ. ಆದರೆ ಬರೀ ಘೋಷಣೆಗಳು ಆಗುತ್ತಿವೆ ಅಷ್ಟೇ. ಘೋಷಣೆಗಳು ಅನುಷ್ಠಾನ ಆಗುವುದರಲ್ಲಿ ವಿಫಲವಾಗುತ್ತಿವೆ. 

ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್‌

ಕೇಂದ್ರದ ಹಲವು ಯೋಜನೆಗಳನ್ನು ಪೂರೈಸಲು ಬಜೆಟಿನಲ್ಲಿ ರಾಜ್ಯದ ಪಾಲು ಕೊಡುವ ನಿರೀಕ್ಷೆ ಇತ್ತು. ಮೈಸೂರು ಏರ್ ಪೋರ್ಟಿನ ಅಭಿವೃದ್ಧಿಗೆ ಕೇವಲ 120 ಕೋಟಿ ಬೇಕಿತ್ತು. ಆದರೆ ಇದುವರೆಗೆ ಅದರ ಮಾಹಿತಿ ಇಲ್ಲ. ಮೈಸೂರು ಕುಶಾಲನಗರ ರೈಲ್ವೆ ಸಂಪರ್ಕ ಆಗಬೇಕಾಗಿತ್ತು. ಅದಕ್ಕಾಗಿ ಭೂಸ್ವಾದೀನಕ್ಕೆ ಅನುದಾನ ನಿಗಧಿ ಮಾಡಬೇಕಾಗಿತ್ತು. ಅದರಲ್ಲೂ ಕೂಡ ಏನೂ ಕೊಟ್ಟಿಲ್ಲ. ಕನಿಷ್ಠ ಕೊಡಗಿನ ರಸ್ತೆಗಳ ಅಭಿವೃದ್ಧಿಗಾದರೂ ಅನುದಾನ ಕೊಡಬೇಕಾಗಿತ್ತು. ಅದನ್ನು ಮಾಡಿದ್ದರೂ ಕೊಡಗಿಗೆ ದೊಡ್ಡ ಲಾಭವಾಗುತಿತ್ತು. ಕೊಡಗು ಜಿಲ್ಲೆಯ ಎಲ್ಲಾ ರಸ್ತೆಗಳು ಗುಂಡಿಬಿದ್ದಿವೆ. ಅದರ ಬಗ್ಗೆಯೂ ನಿರೀಕ್ಷೆ ಇತ್ತು. 

ಮತ್ತೊಂದು ಕಡೆ ಆದಿವಾಸಿಗಳಿಗೆ ಮೂಲಸೌಕರ್ಯ ಕೊಡುವ ಕೆಲಸ ಆಗಿಲ್ಲ. ಕಾಡು ಬಿಟ್ಟು ನಾಡಿಗೆ ಬಂದಿರುವ ಜನರಿಗೂ ಮೂಲಸೌಕರ್ಯ ಕೊಟ್ಟಿಲ್ಲ. ಇದೆಲ್ಲವೂ ರಾಜ್ಯದ ಬಜೆಟ್ನಲ್ಲಿ ನಿರೀಕ್ಷೆಯಿತ್ತು. ಸಿಎಂ ಸಿದ್ದರಾಮಯ್ಯನವರು 16 ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಈಗಲಾದರೂ ಒಂದು ಒಳ್ಳೆಯ ಕೆಲಸ ಮಾಡಬಹುದಿತ್ತು. ಆದರೆ ಆ ಕೆಲಸವನ್ನು ಮಾಡಿಲ್ಲ. ಹೀಗಾಗಿ ಬಜೆಟ್ ನಲ್ಲಿ ನನಗೆ ಯಾವುದೇ ತೃಪ್ತಿಯಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ಮಡಿಕೇರಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಬೆಂಗಳೂರು ಅರಮನೆ ಮೈದಾನದ ವಿಷಯದಲ್ಲಿ ಸುಪ್ರೀಂಕೋರ್ಟಿಗೆ ಸಲ್ಲಿಸಬೇಕಾಗಿರುವ ಟಿಡಿಆರ್ ಅನ್ನು ತಪ್ಪಿಸುವುದಕ್ಕಾಗಿಯೇ ಬೆಂಗಳೂರು ಅರಮನೆ ಮಸೂದೆ 2025 ನ್ನು ಸರ್ಕಾರ ತಂದಿದೆ ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು ಅರಮನೆ ಜಾಗದ ವಿಷಯದಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈಗಾಗಲೇ ಸುಪ್ರೀಂಕೋರ್ಟ್ ಟಿಡಿಆರ್ ಡೆಪಾಸಿಟ್ ಮಾಡಲು ಹೇಳಿತ್ತು. ಟಿಡಿಆರ್ ಡೆಪಾಸಿಟ್ ಮಾಡದಿದ್ದರೆ ನೀವು ಕಂಟೆಂಪ್ಟ್ ನಲ್ಲಿ ಇರುತ್ತೀರಾ ಅಂತ ನ್ಯಾಯಾಲಯ ಹೇಳಿತ್ತು. ಟಿಡಿಆರ್ ಯಾರಿಗೆ ಬರಬೇಕು ಅಂತ ನಾವು ಹೇಳುತ್ತೇವೆ ಎಂದಿತ್ತು. ಅದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಸರ್ಕಾರ ಶಾಸನ ಸಭೆಯ ಮೊರೆ ಹೋಗಿದೆ. ಅದಕ್ಕಾಗಿ ಕಾನೂನು ರೂಪಿಸುವುದಕ್ಕೆ ಮುಂದಾಗಿದೆ. ಕಾನೂನಾತ್ಮಕ ಹೋರಾಟವೇ ನಮಗೆ ಇರುವ ದಾರಿಯಾಗಿದ್ದು, ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. 

ಕೊಡಗು ವಿಶ್ವವಿದ್ಯಾಲಯ ಉಳಿಸಿ: ಸಿ ಅಂಡ್ ಡಿ ಲ್ಯಾಂಡ್ ಭೂಮಿಯನ್ನು ರೈತರಿಗೆ ದಾಖಲೆ ಮಾಡಿಕೊಡಿ

25 ರಿಂದ 30 ವರ್ಷದಿಂದ ಹೋರಾಡುತ್ತಿದ್ದೇವೆ, ಅದು ಮುಂದುವರಿಯಲಿದೆ. ದೇಶದ ಪ್ರತಿ ಪ್ರಜೆಗೆ ಸಂವಿಧಾನದಲ್ಲಿ ಹಕ್ಕುಗಳಿವೆ, ಅದರಂತೆ ನಮಗೂ ನಮ್ಮ ಹಕ್ಕು ಕೊಡುವಂತೆ ಕೇಳುತ್ತಿದ್ದೇವೆ. ಸುಪ್ರೀಂಕೋರ್ಟ್ ಕೂಡ ಪದೇ ಪದೇ ನಮ್ಮಪರವಾಗಿ ತೀರ್ಪು ನೀಡಿದೆ. ಇದರಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ಕಾನೂನು ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಬೆಂಗಳೂರು ಅರಮನೆ ಮೈದಾನ ಅಷ್ಟೇ ಅಲ್ಲ, ಮೈಸೂರಿನ ಗರಿಕೆಮಾಳ ಇರಬಹುದು, ಕುರಬಾರಳ್ಳಿ ಆಲನಹಳ್ಳಿ ಜಮೀನು ಇರಬಹುದು. ಇಲ್ಲವುಗಳ ವಿಷಯದಲ್ಲೂ ಇದೇ ರೀತಿ ಆಗುತ್ತಿದೆ ಎಂದು ಮಡಿಕೇರಿಯಲ್ಲಿ ಸಂಸದ ಯದುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ