ಕೋಲಾರದಲ್ಲಿ ರಾಹುಲ್‌ ಸ್ಪರ್ಧಿಸಿದರೂ ಗೆಲ್ಲುವುದು ವರ್ತೂರು: ಸಂಸದ ಮುನಿಸ್ವಾಮಿ

By Govindaraj S  |  First Published Jan 1, 2023, 11:59 PM IST

ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬೆಲ್ಲ ಊಹಾಪೋಹಗಳಿಗೆ ಕಡಿವಾಣ ಹಾಕಿ. ಏಕೆಂದೆರೆ ಸಿದ್ದರಾಮಯ್ಯ ಅಲ್ಲ ಸ್ವತಃ ರಾಹುಲ್‌ ಗಾಂಧಿಯೇ ಇಲ್ಲಿ ಸ್ಪರ್ಧಿಸಿದರೂ ಈ ಬಾರಿ ನಮ್ಮ ಬಿಜೆಪಿ ಅಭ್ಯರ್ಥಿ ವರ್ತೂರು ಹುಲಿ ಗೆಲ್ಲುವುದು ಶತಃಸಿದ್ಧ ಎಂದು ಸಂಸದ ಎಸ್‌.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.


ಕೋಲಾರ (ಜ.01): ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬೆಲ್ಲ ಊಹಾಪೋಹಗಳಿಗೆ ಕಡಿವಾಣ ಹಾಕಿ. ಏಕೆಂದೆರೆ ಸಿದ್ದರಾಮಯ್ಯ ಅಲ್ಲ ಸ್ವತಃ ರಾಹುಲ್‌ ಗಾಂಧಿಯೇ ಇಲ್ಲಿ ಸ್ಪರ್ಧಿಸಿದರೂ ಈ ಬಾರಿ ನಮ್ಮ ಬಿಜೆಪಿ ಅಭ್ಯರ್ಥಿ ವರ್ತೂರು ಹುಲಿ ಗೆಲ್ಲುವುದು ಶತಃಸಿದ್ಧ ಎಂದು ಸಂಸದ ಎಸ್‌.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ವಕ್ಕಲೇರಿಯಲ್ಲಿ ಬೃಹತ್‌ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಹತ್ತು ವರ್ಷಗಳ ಕಾಲ ವರ್ತೂರು ಪ್ರಕಾಶ್‌ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳು ಅವರಿಗೆ ಶ್ರೀರಕ್ಷೆ ಆಗಲಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಅವರು ಖಂಡಿತ ಗೆಲುವು ಸಾಧಿಸುತ್ತಾರೆ ಎಂದರು.

ಸಿದ್ದರಾಮಯ್ಯ ಸೋಲು ಖಚಿತ: ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿ ಈಗ ಕೋಲಾರಕ್ಕೆ ಬರುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ದಲಿತ ನಾಯಕ ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕಿತ್ತು. ಅವರನ್ನು ಸೋಲಿಸಿದರು ಮಲ್ಲಿಕಾರ್ಜುನ ಖರ್ಗೆಯನ್ನೂ ಸೋಲಿಸಿದರು. ಎಚ್‌.ವಿಶ್ವನಾಥ್‌, ಎಂಟಿಬಿ ನಾಗರಾಜ್‌ ಇವರನ್ನೆಲ್ಲ ಹಾಳು ಮಾಡಿರುವ ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಕೋಲಾರದ ಜನ ಅವರನ್ನು ಸೋಲಿಸುತ್ತಾರೆ ಎಂದು ಹೇಳಿದರು. ರಾಜ್ಯ-ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಅಹಿಂದ ಪರ ಮತ್ತು ದಲಿತಪರ ಆಡಳಿತ ನೀಡುತ್ತಿದ್ದು, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್‌ ಆಗಮನದಿಂದ ಆನೆ ಬಲ ಬಂದಂತಾಗಿದ್ದು, ಮುಂಬರುವ ದಿನಗಳಲ್ಲಿ ಕೋಲಾರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಖಚಿತ ಎಂದರು.

Tap to resize

Latest Videos

ಕಳಸಾ ಬಂಡೂರಿ, ನಾವು ನುಡಿದಂತೆ ನಡೆದುಕೊಂಡಿದ್ದೇವೆ: ಸಿಎಂ ಬೊಮ್ಮಾಯಿ

ತಲೆಮಾರಿಗೆ ಅಗುವಷ್ಟು ಹಣ: ಈ ಹಿಂದೆ ಸರ್ಕಾರದಿಂದ 100 ರೂ ಬಿಡುಗಡೆಯಾದರೆ 20 ರು.ಗಳು ಮಾತ್ರ ಫಲಾನುಭವಿಗೆ ತಲುಪುತ್ತಿತ್ತು. ಶ್ರೀನಿವಾಸಪುರ ಶಾಸಕರು ಕಾಂಗ್ರೆಸ್‌ ಆಡಳಿತದಲ್ಲಿ 3-4 ತಲೆಮಾರುಗಳಿಗೆ ಆಗುವಷ್ಟುಹಣ ಮಾಡಿದ್ದೇವೆ ಎಂದು ಒಪ್ಪಿ ಕೊಂಡಿದ್ದಾರೆ. ನಮ್ಮ ಮಾಲೂರು ಶಾಸಕರು ಕಲ್ಲು, ಮಣ್ಣು ಹಾಲು, ತುಪ್ಪ, ಮಜ್ಜಿಗೆ ಕೊಡ ಬಿಡುತ್ತಿಲ್ಲ. ಇಷ್ಟೆಅಲ್ಲದೆ ಒಕ್ಕೂಟದ ಅಧ್ಯಕ್ಷರಾಗಿರುವ ಅವರು ಒಂದು ಕಾರಿಗೆ ಮಾತ್ರ ಡಿಸೇಲ್‌ ಹಾಕಿಸಿಕೊಳ್ಳದೆ ತಮ್ಮ ಮನೆಯಲ್ಲಿನ ಮೂರು ಕಾರುಗಳಿಗೆ ಒಕ್ಕೂಟದ ಹಣದಲ್ಲಿ ಪೆಟ್ರೋಲ್‌, ಡಿಸೇಲ್‌ ಹಾಕಿಸಿಕೊಳ್ಳುತ್ತಿದ್ದಾರೆ, ಹೀಗಿರುವಾಗ ಇನ್ನೆನು ತಾನೆ ಜನರಿಗೆ ಬಿಡುತ್ತಾರೆ ನೀವೆ ಹೇಳಿ ಎಂದು ಪ್ರಶ್ನಿಸಿದರು.

Uttara Kannada: ಅಭಿವೃದ್ಧಿಯಾದಂತೆ ಬೇಡಿಕೆ ಹೆಚ್ಚಳ: ಸಚಿವ ಶಿವರಾಮ ಹೆಬ್ಬಾರ

ಮಾಜಿ ಸಚಿವ ವರ್ತೂರು ಪ್ರಕಾಶ್‌ ಮಾತನಾಡಿ, ವಕ್ಕಲೇರಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಆಗಬೇಕಾದ ಕೆಲಸಗಳು ಬೇಕಾದಷ್ಟುಇದ್ದು ಗ್ರಾಮಸ್ಥರು ನನಗೆ ಮನವಿ ಮಾಡಿದ್ದು, ನನಗೆ ಅಧಿಕಾರ ಇಲ್ಲದಿದ್ದರೂ ಕೂಡ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಬಳಿ 10 ಕೋಟಿ ಹಣ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ತಂದಿದ್ದೇನೆ, ಸಂಸದರ ಅನುದಾನದ ಅಡಿಯಲ್ಲಿ ಸುಮಾರು 10 ಲಕ್ಷ ರೂಗಳ ಕಾಮಗಾರಿ ಮಾಡಿಸಿಕೊಡುತ್ತೇನೆ ಎಂದರು. ಮಾಜಿ ಶಾಸಕರಾದ ಮಂಜುನಾಥಗೌಡ, ವೈ.ಸಂಪಂಗಿ, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್‌, ಬಂಕ್‌ ಮಂಜುನಾಥ್‌, ಅರುಣ್‌ ಪ್ರಸಾದ್‌, ಸಿ.ಡಿ.ರಾಮಚಂದ್ರಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಪ್ರೇಮಸಾಗರ ಗೌಡ ಇದ್ದರು.

click me!