ಭೂಗಳ್ಳ ಅಂತ ಯಾರಿಗೆ ಸಂಸದರು ಕರೆದಿದ್ದಾರೆ. ಸಂಸದ ಮುನಿಸ್ವಾಮಿ ಒಬ್ಬ ಸೈಕೋ, ನಾಲ್ಕು ವರ್ಷಗಳಿಂದ ಪ್ರೆಸ್ ಮೀಟ್ ಹಾಗೂ ಸಾರ್ವಜನಿಕವಾಗಿ ಹೇಳಿಕೊಂಡು ತಿರುಗುತ್ತಿದ್ದಾನೆ. ಆರೋಪ ಸಾಬೀತು ಮಾಡು ಎಂದು ಹೇಳಿದ್ದೇನೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಖಾರವಾಗಿ ನುಡಿದರು.
ಕೋಲಾರ (ಸೆ.27): ಭೂಗಳ್ಳ ಅಂತ ಯಾರಿಗೆ ಸಂಸದರು ಕರೆದಿದ್ದಾರೆ. ಸಂಸದ ಮುನಿಸ್ವಾಮಿ ಒಬ್ಬ ಸೈಕೋ, ನಾಲ್ಕು ವರ್ಷಗಳಿಂದ ಪ್ರೆಸ್ ಮೀಟ್ ಹಾಗೂ ಸಾರ್ವಜನಿಕವಾಗಿ ಹೇಳಿಕೊಂಡು ತಿರುಗುತ್ತಿದ್ದಾನೆ. ಆರೋಪ ಸಾಬೀತು ಮಾಡು ಎಂದು ಹೇಳಿದ್ದೇನೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಖಾರವಾಗಿ ನುಡಿದರು. ಜನತಾ ದರ್ಶನ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, ನನ್ನ ಮೇಲೆ 15 ಕ್ರಿಮಿನಲ್ ಕೇಸ್ ನನ್ನ ಮೇಲೆ ಇದೆ ಅಂತ ಮುನಿಸ್ವಾಮಿ ಹೇಳಿತ್ತಿದ್ದಾನೆ.
ನನ್ನ ಮೇಲೆ ಒಂದೂ ಕ್ರಿಮಿನಲ್ ಕೇಸ್ ಇಲ್ಲ, ನನ್ನ ಬಗ್ಗೆ ಮಾತನಾಡಿದ್ರೆ ಪರಿಣಾಮ ನೆಟ್ಟಗೆ ಇರೋದಿಲ್ಲ ಎಂದು ತಾಕೀತು ಮಾಡಿದರು. ಮುಂದಿನ ಲೇಕಸಭಾ ಚುನಾವಣೆಯಲ್ಲಿ ಮುನಿಸ್ವಾಮಿ ಠೇವಣಿ ಇಲ್ಲದೆ ಸೋಲ್ತಾರೆ. ಸಚಿವರ ಅಕ್ಕಪಕ್ಕ ಕುಳಿತಿರುವ ಭೂಗಳ್ಳರು ಅಂತ ಹೇಳಿದಿಯಾ, ಆಗಾದರೆ ನಾನು ಅಥವಾ ಕೋಲಾರ ಶಾಸಕ ಇಬ್ಬರು ಭೂಗಳ್ಳರಾ, ಪ್ರಚಾರಗಿಟ್ಟಿಸಿಕೊಳ್ಳೋದಕ್ಕೆ ಮಾತನಾಡಬೇಡ ಎಂದು ಸಂಸದ ಮುನಿಸ್ವಾಮಿಗೆ ಎಚ್ಚರಿಕೆ ನೀಡಿದರು.
ಚಾಮರಾಜನಗರಕ್ಕೆ ಭೇಟಿ ನೀಡಿದಷ್ಟು ಅಧಿಕಾರ ಗಟ್ಟಿ: ಸಿಎಂ ಸಿದ್ದರಾಮಯ್ಯ
ಜನರ ಮುಂದೆ ಸಂಸದ, ಶಾಸಕರ ಬಂಡವಾಳ ದರ್ಶನ: ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಡುವೆ ಆರಂಭವಾದ ಜಟಾಪಟಿ ಕೆಲಕಾಲ ಅಲ್ಲೋಲಕಲ್ಲೋಲ ಸೃಷ್ಟಿ ಸಿತು. ಇವರಿಬ್ಬರ ಜಟಾಪಟಿ ನಿಯಂತ್ರಿಸಲು ಮಧ್ಯಪ್ರವೇಶಿಸಿದ ಎಸ್ಪಿ ನಾರಾಯಣಸ್ವಾಮಿ ಅವರು ಸಂಸದ ಮುನಿಸ್ವಾಮಿಯನ್ನು ಹಿಡಿದುಕೊಂಡು ವೇದಿಕೆಯಿಂದ ಕರೆದೊಯ್ದರು. ವೇದಿಕೆ ಎದುರು ಕುಳಿತಿರುವ ಜನರಿಗೆ ಈ ದೃಶ್ಯಗಳು ಪುಕ್ಕಟ್ಟೆ ಮನೋರಂಜನೆ ನೀಡಿದವು.
ಕಿಡಿ ಹೊತ್ತಿಸಿದ ಸಂಸದರ ಆರೋಪ: ಜನತಾದರ್ಶನ ಆರಂಭವಾದ ಸ್ವಲ್ಪ ಸಮಯದಲ್ಲಿ ಸಂಸದ ಮುನಿಸ್ವಾಮಿ ಆಗಮಿಸಿದರು, ಕಾರ್ಯಕ್ರಮದಲ್ಲಿ ಕೆಲಕಾಲ ಇದ್ದು ವಾಪಸ್ ಹೋಗುವ ಸಂದರ್ಭದಲ್ಲಿ ಸಂಸದರು, ಸಚಿವ ಭೈರತಿ ಸುರೇಶ್ ಪಕ್ಕದಲ್ಲಿ ಕುಳಿತಿದ್ದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿರನ್ನು ನೋಡಿಕೊಂಡು ಎಲ್ಲ ಭೂಗಳ್ಳರನ್ನು ಅಕ್ಕಪಕ್ಕ ಕುಳಿಸಿಕೊಂಡು ಜನತಾ ದರ್ಶನ ಮಾಡ್ತಾ ಇದ್ದಾರೆ ಎಂದರು.
ಇದರಿಂದ ಆಕ್ರೋಶಗೊಂಡ ಎಸ್.ಎನ್.ನಾರಾಯಣಸ್ವಾಮಿ ಸಂಸದರಿಗೆ ಏಕವಚನದಲ್ಲಿ ಬೈಯ್ಯಲು ಶುರು ಮಾಡಿದರು. ಈ ವೇಳೆ ಇಬ್ಬರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು, ಈ ವೇಳೆ ಸಂಸದ ಮುನಿಸ್ವಾಮಿಯನ್ನ ತಬ್ಬಿಕೊಂಡ ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ ಸಂಸದರನ್ನು ಹಿಡಿದುಕೊಂಡು ವೇದಿಕೆಯಿಂದ ಹೊರಗೆ ಕರೆದುಕೊಂಡು ಹೋದರು.
ಮಂಗಳೂರು ಖಾಸಗಿ ಸಿಟಿ ಬಸ್ ಮಾಲೀಕರಿಗೆ ಕಮಿಷನರ್ ಖಡಕ್ ಕ್ಲಾಸ್: ಸಭೆಯಲ್ಲಿ ನಡೆದಿದ್ಧೇನು
ನಾರಾಯಣಸ್ವಾಮಿ ಭೂಗಳ್ಳ: ಈ ವೇಳೆ ಸಾಕಷ್ಟು ತಳ್ಳಾಟ ನೂಕಾಟ ಜೊತೆಗೆ ಕಾರ್ಯಕ್ರಮದ ವೇದಿಕೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಸಚಿವ ಸುರೇಶ್ ಮಧ್ಯ ಪ್ರವೇಶ ಮಾಡಿ ಇಬ್ಬರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದರಾದರೂ ಪ್ರಯೋಜನವಾಗಿಲ್ಲ, ನಂತರ ಕೆಲ ಹೊತ್ತಿನ ನಂತರ ಮತ್ತೆ ಸಂಸದ ಮುನಿಸ್ವಾಮಿ ವೇದಿಕೆ ಮೇಲೆ ಬಂದು ಸಚಿವ ಸುರೇಶ್ ಎದುರು ತಮ್ಮ ಅಹವಾಲು ಹೇಳಿದರು, ಬಳಿಕ ಮಾತನಾಡಿದ ಸಂಸದ ಮುನಿಸ್ವಾಮಿ ಶಾಸಕ ನಾರಾಯಣಸ್ವಾಮಿ ಒಬ್ಬ ಭೂಗಳ್ಳ ಎಂದರು.