ದೆಹಲಿಗೆ ಹೋಗ್ತಾರಾ ಹೋಗಲಿ. ಅದೇನು ಚಾಡಿ ಹೇಳ್ತಾರೋ ಹೇಳಲಿ. ನಮಗೂ ದೆಹಲಿ ನಾಯಕರು ಗೊತ್ತು. ನಾವು ದೆಹಲಿಗೆ ಹೊಗ್ತೀವಿ. ಮಾಜಿ ಸಚಿವ ವಿ ಸೋಮಣ್ಣರ ವಿರುದ್ಧ ಎಂಪಿ ರೇಣುಕಾಚಾರ್ಯ ಕೆಂಡಾಮಂಡಲರಾದ ಘಟನೆ ನಡೆಯಿತು.
ದಾವಣಗೆರೆ (ನ.26): ದೆಹಲಿಗೆ ಹೋಗ್ತಾರಾ ಹೋಗಲಿ. ಅದೇನು ಚಾಡಿ ಹೇಳ್ತಾರೋ ಹೇಳಲಿ. ನಮಗೂ ದೆಹಲಿ ನಾಯಕರು ಗೊತ್ತು. ನಾವು ದೆಹಲಿಗೆ ಹೊಗ್ತೀವಿ. ಮಾಜಿ ಸಚಿವ ವಿ ಸೋಮಣ್ಣರ ವಿರುದ್ಧ ಎಂಪಿ ರೇಣುಕಾಚಾರ್ಯ ಕೆಂಡಾಮಂಡಲರಾದ ಘಟನೆ ನಡೆಯಿತು.
ಇಂದು ದಾವಣಗೆರೆಯಲ್ಲಿ ಮಾಜಿ ಸಚಿವ ವಿ ಸೋಮಣ್ಣ ದೆಹಲಿಗೆ ತೆರಳಲಿರುವ ವಿಚಾರ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಿಗೆ ಬೇಕಾದರೂ ಹೋಗಲಿ. ಅದರೆ ಬಿಎಸ್‌ವೈ ಬಗ್ಗೆ ಮಾತನಾಡಿದ್ರೆ ನಾನು ಸುಮ್ನಿರಲ್ಲ. ಬಿಎಸ್ ವೈ ಕರೆದು ಹೊಡೆದರೂ ಚಿಂತೆಯಿಲ್ಲ. ನಾನು ಹೀಗೆ ಮಾತಾಡುತ್ತೇನೆ ಎಂದರು.
undefined
ಸೋಮಣ್ಣ ಎಲ್ಲ ಪಾರ್ಟಿ ನೋಡಿಕೊಂಡು ಬಂದಿದ್ದಾರೆ; ಬಿಜೆಪಿಯಲ್ಲೇ ಇರುತ್ತಾರೆ: ಶ್ರೀರಾಮುಲು
ಮಠದಲ್ಲಿ ರಾಜಕಾರಣ ಮಾಡುವ ಅಗತ್ಯವಿತ್ತಾ?
ವಿ ಸೋಮಣ್ಣ ಸಿದ್ದಗಂಗಾಮಠಕ್ಕೆ ಹೋಗಿದ್ದ ಶ್ರೀಗಳ ದರ್ಶನಕ್ಕೆ ಅಲ್ಲಿ ರಾಜಕೀಯ ಮಾಡಲಿಕ್ಕೆ ಅಲ್ಲ. ಮಠದಲ್ಲಿ ಬಿಎಸ್‌ವೈ ಮಾತಾಡುವ ಅವಶ್ಯಕತೆ ಏನಿತ್ತು? ವಿ ಸೋಮಣ್ಣ ಸಿದ್ದಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದಾರೆ. ವಿನಾಕಾರಣ ಬಿಎಸ್ ವೈ ಬಗ್ಗೆ ಮಾತನಾಡೋದು ಸರಿಯಲ್ಲ. ವಿಧಾನ ಸಭೆ ಸೋಲು ಹೊಡೆತವನ್ನು ವರಿಷ್ಠರು ನೋಡಿದ್ದಾರೆ. ಹೀಗಾಗಿ ವಿಜಯೇಂದ್ರರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದಿದ್ದೇ ಬಿಎಸ್ ವೈ. ಬಿಎಸ್ ವೈ ರೆಡಿ ಮೇಡ್ ಫುಡ್ ಅಲ್ಲ. ಸೋಮಣ್ಣ ಬಂದಿದ್ದು ಕಾಂಗ್ರೆಸ್‌ನಿಂದ. ಅವರಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಅವರು ಕಾಂಗ್ರೆಸ್ ನಿಂದ ಬಂದು ಅಧಿಕಾರ ಅನುಭವಿಸಿದ್ದಾರೆ. ಚುನಾವಣೆಯಲ್ಲಿ ಸೋತರು ಸಹ ಎಂಎಲ್ ಸಿ ಆಗಿ ಅಧಿಕಾರ ಅನುಭವಿಸಿದ್ದಾರೆ. ಬಿಎಸ್‌ವೈ ನಿಮ್ಮನ್ನೂ ಸಚಿವರನ್ನಾಗಿ ಮಾಡಿದ್ದೇ ತಪ್ಪಾ? ಕಾಂಗ್ರೆಸ್ ನಿಂದ ಬಂದು ಸಚಿವರಾಗಲಿಲ್ಲವೇ? ಆಗ ನಮಗೇನು ಸಾಮಾರ್ಥ್ಯ ಇರಲಿಲ್ಲವೆ? ನಿರಂತರವಾಗಿ ಅಧಿಕಾರ ಅನುಭವಿಸಿ ಈಗ ಬಿಎಸ್‌ವೈ ವಿರುದ್ಧ ಮಾತಾಡ್ತೀರಾ? ಎಂದು ವಾಗ್ದಾಳಿ ನಡೆಸಿದರು.
ಕೀಳುಮಟ್ಟದ ಭಾಷೆ ನಮಗೂ ಬರುತ್ತೆ:
ಬಿಎಸ್‌ವೈ ಬಗ್ಗೆ ಕೀಳು ಮಟ್ಟದ ಭಾಷೆ ಬಳಸುತ್ತೀರಾ? ನಮಗೂ ಬರುತ್ತೆ. ವಿಜಯೇಂದ್ರಗೆ ಪಟ್ಟ ಕಟ್ಟಿರೋದು ಸುಮ್ಮನೆ ಅಲ್ಲ. ಅವರು ಸಹ ಪಕ್ಷ ಸಂಘಟನೆ ಮಾಡಿದ್ದಾರೆ. ಹಿಂದಿನ ಚುನಾವಣೆ ಅವರ ಸಾಧನೆ ಏನು ಅಂತ ಬಿಜೆಪಿ ನಾಯಕರಿಗೆ ಗೊತ್ತಿದೆ ಹೀಗಾಗಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ. ಹೋದಲ್ಲೆಲ್ಲ ರಾಷ್ಟ್ರೀಯ ನಾಯಕರಿಗೆ ಅಪಮಾನ ಮಾಡುತ್ತಿದ್ದೀರಿ. ಇಷ್ಟು ದಿನ ಬಾಯಿಗೆ ಬೀಗ ಹಾಕಿ ಸುಮ್ಮನೇ ಇದ್ದೆ. ಇನ್ಮುಂದೆ ಹೀಗೆ ಮಾತನಾಡಿದ್ರೆ ಸುಮ್ಮನಿರೊಲ್ಲ ಎಂದು ಎಚ್ಚರಿಕೆ ನೀಡಿದರು.
ಡಿಕೆಶಿ ಕೇಸ್ ಹಿಂಪಡೆದು ಪ್ರಜಾಪ್ರಭುತ್ವದ ಕಗ್ಗೊಲೆ: ರೇಣುಕಾಚಾರ್ಯ
ಗಾಜಿನ ಮನೆಯಲ್ಲಿ ಕುಳಿತು ಜಾತಿಗಣತಿ ವರದಿ:
ಜಾತಿ ಗಣತಿ ಅವೈಜ್ಞಾನಿಕವಾಗಿದೆ. ಈಗಾಗಲೇ ಲಿಂಗಾಯತ, ಒಕ್ಕಲಿಗ ಸಮುದಾಯ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವರದಿ ಗಾಜಿನಮನೆಯಲ್ಲಿ ಕುಳಿತು ತಯಾರಿಸಿದ್ದಾರೆ. ಮನೆಮನೆಗೆ ಹೋಗಿ ವರದಿ ತಯಾರಿಸಬೇಕಿತ್ತು ಆದರೆ ಹಾಗೆ ಮಾಡಿಲ್ಲ. ಈ ವರದಿ ಅವೈಜ್ಞಾನಿಕವಾಗಿದೆ. ತರಾತುರಿ ಏನಿದೆ, ಆರು ತಿಂಗಳ ಆಗಲಿ, ಸರಿಯಾಗಿ ಮಾಡೋಣ ಎಂದರು.