ಜೆಡಿಎಸ್‌ ಬಿಜೆಪಿ ಮೈತ್ರಿ ಪರಿಣಾಮ ಹೆಚ್ಚಾಗಿ ಬೀರಿದ್ದು ನನ್ನಮೇಲೆ: ಮಾಜಿ ಶಾಸಕ ಪ್ರೀತಮ್‌ಗೌಡ!

By Sathish Kumar KH  |  First Published Nov 26, 2023, 1:52 PM IST

ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯ ಪರಿಣಾಮ ಅತಿಹೆಚ್ಚಾಗಿ ಬೀರಿರುವುದು ನನ್ನಮೇಲೆ ಎಂದು ಮಾಜಿ ಶಾಸಕ ಪ್ರೀತಮ್‌ಗೌಡ ಹೇಳಿಕೊಂಡಿದ್ದಾರೆ.


ಬೆಂಗಳೂರು (ನ.26): ರಾಜ್ಯದಲ್ಲಿ ಲೋಕಸಭಾ ಚುನಾವನೆಗೂ ಮುನ್ನ ಬಿಜೆಪಿ ಜೆಡಿಎಸ್‌ನೊಂದಿಗೆ ಹೊಂದಾಣಿಕೆಯ ಪರಿಣಾಮ ಅತಿಹೆಚ್ಚಾಗಿ ಬೀರಿರುವುದು ನನ್ನ ಮೇಲೆ. ಆದರೂ, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗಲೆಂದು ಮಹದಾಸೆಯಿಂದ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹಾಸನದ ಮಾಜಿ ಶಾಸಕ ಪ್ರೀತಮ್‌ಗೌಡ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಸೋಮಣ್ಣ, ಯತ್ನಾಳ್ ಹಿರಿಯರಿದ್ದಾರೆ. ಜೆಡಿಎಸ್ ಜೊತೆ ಹೊಂದಾಣಿಕೆ ಆದಾಗ ಎಫೆಕ್ಟ್ ಆದ ವ್ಯಕ್ತಿಯಲ್ಲಿ ಪ್ರೀತಮ್ ಗೌಡ ಸಹ ಒಬ್ಬರು. ಆದರೆ, ಮತ್ತೆ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿ ಆಗಬೇಕು ಅಂತ ಇಚ್ಚೆ ಪಟ್ಟಿದ್ದೇವೆ‌. ಅದಕ್ಕಾಗಿ ಒಟ್ಟಾಗಿ ಕೆಲಸ‌ ಮಾಡ್ತಿದ್ದೇವೆ. ಅದಕ್ಕೆ‌ ಸೋಮಣ್ಣ, ಯತ್ನಾಳ್ ಹೊರತಲ್ಲ. ಸೋಮಣ್ಣ ಮತ್ತು ಯತ್ನಾಳ್ ಕೂಡ ಮೋದಿ ಪ್ರಧಾನಿಯಾಗಿ ಆಗಬೇಕು ಅಂತ ಹೇಳಿದ್ದಾರೆ. ಕಾಲ‌ಕ್ರಮೇಣ ಎಲ್ಲವೂ ಸರಿಯಾಗಲಿದೆ. ಮೋದಿ ಅವರನ್ನ ಪ್ರಧಾನಮಂತ್ರಿ ಮಾಡೋಣ? ಲೋಕಸಭಾ ಚುನಾವಣಾಗೆ ಬಹಳ ಹೆಚ್ಚಿನ ಶಕ್ತಿಯನ್ನು ಸೋಮಣ್ಣ, ಯತ್ನಾಳ್ ಕೂಡ ಮಾಡ್ತಾರೆ ಎಂದು ಹೇಳಿದರು.

Latest Videos

undefined

ಮೈಸೂರು ಮಹಾರಾಜರ ನೇತೃತ್ವದಲ್ಲಿ ನೇಪಾಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ ಬಿಬಿಎಂಪಿ

ಕುಮಾರಸ್ವಾಮಿ ಭೇಟಿಗಿಂತ ನಾನು ಹಾಸನದ ಕಾರ್ಯಕರ್ತನಾಗಿರ್ತೇನೆ: ಕುಮಾರಸ್ವಾಮಿ ಮನೆಗೆ ನೀವೂ ಭೇಟಿಯಾಗ್ತೀರಾ ಎಂದು ಮಾಧ್ಯಮದ ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪ್ರೀತಮ್‌ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ಭೇಟಿ ಮಾಡಿರಲಿಲ್ಲ. ಹಾಗಾಗಿ ಅವರು ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಹೋಗ್ತಿದ್ದಾರೆ. ವಿಜಯೇಂದ್ರ ಜೊತೆ ನಾನು ಕುಮಾರಸ್ವಾಮಿ ಭೇಟಿಗೆ ಹೋಗುವುದು ಈಗ ಮುಖ್ಯವಾಗುವುದಿಲ್ಲ. ನಾನು ಹಾಸನದ ಕಾರ್ಯಕರ್ತ, ಹಾಸನಕ್ಕೆ ಮಾತ್ರ ಸೀಮಿತವಾಗಿರ್ತೇನೆ ಎಂದು ಹೇಳಿದರು.

ಗಂಡ ಜೈಲಿಗೆ.. ಹೆಂಡತಿ ಪರಲೋಕಕ್ಕೆ..ಮಕ್ಕಳು ಅನಾಥ..! ಪ್ರೀತಿಸಿದವಳನ್ನು ಪತಿರಾಯ ಕೊಂದಿದ್ದೇಕೆ ?

ವಿಜಯೇಂದ್ರ ಕೂಡ 4 ಬಾರಿ ಮುಖ್ಯಮಂತ್ರಿ ಆಗ್ತಾರೆ: ಯಡಿಯೂರಪ್ಪ ಅವರಿಗಾದ ಗತಿಯೇ ವಿಜಯೇಂದ್ರಗೆ ಆಗಲಿದೆ ಎಂದು ಸಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ. ಆದರೆ, ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ಮಾತಿನ ಅರ್ಥದಲ್ಲಿ ವಿಜಯೇಂದ್ರ ಕೂಡ ನಾಲ್ಕು ಬಾರಿ ಸಿಎಂ ಆಗ್ತಾರೆ. ಅಶ್ವಮೇಧ ಯಾಗ ಕುದುರೆ ಕಟ್ಟಿದ್ದಾರೆ. ಹರಕೆಯ ಕುರಿ ಯಾರು ಅನ್ನೋದು ಮುಂದೆ ಗೊತ್ತಾಗುತ್ತದೆ. ವಿಜಯೇಂದ್ರ ಅವರ ಶಕ್ತಿ ಏನು? ರಾಜಕೀಯ ತಂತ್ರಗಾರಿಕೆ ಏನು? ಅಂತ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ. ಮೈತ್ರಿ ವಿಚಾರದಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದವರಲ್ಲಿ ಪ್ರೀತಮ್ ಗೌಡ ಕೂಡ ಒಬ್ಬರು. ಕಾಲ‌ ಕ್ರಮೇಣ ಎಲ್ಲವೂ ಸರಿ ಹೋಗಲಿದೆ. ಅವರೆಲ್ಲರೂ ಹಿರಿಯರಿದ್ದಾರೆ. ಎಲ್ಲರೂ ಒಟ್ಟಾಗಿ ಲೋಕಸಭಾ ಚುನಾವಣೆಗೆ ಕೆಲಸ ಮಾಡುತ್ತಾರೆ ಎಂದರು.

click me!