ಶಾಸಕರೊಬ್ಬರು ಫೋನ್ ಮಾಡಿ ನಾನೇ CM, ಸಹಕಾರ ಕೊಡಿ ಅಂದ್ರು: ರೇಣುಕಾಚಾರ್ಯ ಬಾಂಬ್

By Suvarna News  |  First Published Jun 14, 2021, 10:41 PM IST

* ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು
* ಹೊಸ ಬಾಂಬ್ ಸಿಡಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ 
* ಬಹಿರಂಗವಾಗಿ ಭಿನ್ನಮತ ನಡೆಸುವವರ ವಿರುದ್ಧ ಕ್ರಮಕ್ಕೆ ಆಗ್ರಹ


ದಾವಣಗೆರೆ, (ಜೂನ್.14): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಜೋರಾಗಿದೆ. ಸಿಎಂ ಬಿಎಸ್‌ವೈ ವಿರೋಧಿ ಬಣ ಹೈಕಮಾಂಡ್‌ಗೆ ದೂರು ನೀಡಿದೆ. 

ಇನ್ನು ಈ ಬಗ್ಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಚಾರ್ಯ ಪ್ರತಿಕ್ರಿಯಿಸಿದ್ದು,  ತಮ್ಮ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್ ವಿರುದ್ಧ ಕಿಡಿಕಾರಿದ್ದಾರೆ.

Tap to resize

Latest Videos

ಮಹತ್ವದ ನಿರ್ಧಾರ ಕೈಗೊಂಡ ಶಾಸಕರ ನಿಯೋಗ: ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಕೆ ಬಿರುಸು

ವಿಜಯಪುರದ ಶಾಸಕ ಫೋನ್ ಮಾಡಿ ನಾನೇ ಮುಖ್ಯಮಂತ್ರಿ ಸಹಕಾರ ಕೊಡಿ ಎಂದಿದ್ದಾರೆ. ವಿಜಯಪುರ ಶಾಸಕ ಕೆಲ ಎಮ್‌ಎಲ್‌ಎಗಳಿಗೆ ಫೋನ್ ಮಾಡಿದ್ದಾರೆ. ನಾನೇ ಮುಂದಿನ ಸಿಎಂ ನನಗೆ ಬೆಂಬಲ ನೀಡಿ ಎಂದಿದ್ದಾರೆ. ಹೈಕಮಾಂಡ್​ನಿಂದ ಸ್ಪಷ್ಟ ಸೂಚನೆ ಬಂದಿದ್ದರೂ ಈ ರೀತಿ ಮಾತನಾಡ್ತಾರೆ ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ಕಿಡಿಕಾರಿದರು. 

ಕೆಲವರು ಸಿಎಂ ಆಗಬೇಕು ಎಂದು ಈಗಾಗಲೇ ಸೂಟುಬೂಟು ಹೊಲಿಸಿದ್ದಾರೆ. ಕೆಲವರು ಅರುಣ್ ಸಿಂಗ್ ರಾಜ್ಯಕ್ಕೆ ಬಂದ್ರು ದೆಹಲಿಗೆ ಹೋಗಿದ್ದಾರೆ. ಯಡಿಯೂರಪ್ಪನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರು ಹೇಳಿದ ಮೇಲೂ ಬಹಿರಂಗವಾಗಿ ಭಿನ್ನಮತ ನಡೆಸುತ್ತಾರೆ. ಯಾರೇ ತಪ್ಪು ಮಾಡಿದ್ರೂ ಅವರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
 

click me!