ನಾಡದೇವತೆ ಚಾಮುಂಡೇಶ್ವರಿಯ ಗೌರವ ಸಂರಕ್ಷಣೆಗಾಗಿ ಮಹಿಷ ದಸರಾ ವಿರೋಧಿಸಿ, ಅ.13 ರಂದು ಬೆಳಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟ ಚಲೋ ಹಮ್ಮಿಕೊಂಡಿರುವುದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮಂಗಳೂರು (ಅ.05): ನಾಡದೇವತೆ ಚಾಮುಂಡೇಶ್ವರಿಯ ಗೌರವ ಸಂರಕ್ಷಣೆಗಾಗಿ ಮಹಿಷ ದಸರಾ ವಿರೋಧಿಸಿ, ಅ.13 ರಂದು ಬೆಳಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟ ಚಲೋ ಹಮ್ಮಿಕೊಂಡಿರುವುದಾಗಿ ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಲಾಗುವುದು. ವಾಹನಗಳಲ್ಲಿ ಬರುವವರು ವಾಹನದಲ್ಲಿ ಬರಬಹುದು.
ಕಾರ್ಯಕ್ರಮದಲ್ಲಿ 5 ಸಾವಿರ ಮಂದಿ ಪಾಲ್ಗೊಂಡು ಪೂಜೆ ಸಲ್ಲಿಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಪೊಲೀಸ್ ಸೇರಿದಂತೆ ಇತರ ಅಧಿಕಾರಿಗಳಿಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸುತ್ತೇನೆಂದರು. ರೂಢಿಗತವಾಗಿ ನಡೆದುಕೊಂಡು ಬಂದಿರುವ ಚಾಮುಂಡಿ ತಾಯಿಯ ದಸರಾ ಆಚರಣೆಯನ್ನು ಬಿಟ್ಟು, ಮಹಿಷಾ ದಸರಾ ಆಚರಿಸುವುದು ಸರಿಯಲ್ಲ, ಇದರಿಂದ ಚಾಮುಂಡಿ ತಾಯಿಗೆ ಅಪಮಾನವಾಗದಂತೆ ಈ ಬಾರಿಯೂ ಅಚ್ಚುಕಟ್ಟಾಗಿ ದಸರಾ ನಡೆಯಬೇಕೆಂಬುದೇ ನಮ್ಮ ಆಶಯ ಎಂದು ಹೇಳಿದರು.
ಸಾರ್ವಜನಿಕ ಟಾಯ್ಲೆಟ್ ಸ್ಥಿತಿಗತಿ ವರದಿ ನೀಡದ ಸರ್ಕಾರಕ್ಕೆ5 ಲಕ್ಷ ದಂಡ ವಿಧಿಸಿದ ಹೈಕೋರ್ಟ್!
ಇದೇ ವೇಳೆ ಶಿವಮೊಗ್ಗದ ರಾಗಿಗುಡ್ಡ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಂದ ನಂತರ ಮಹಿಷ ದಸರಾ ಆಚರಿಸುವವರು ತಲೆ ಎತ್ತುತ್ತಿದ್ದಾರೆ. ಪ್ರಸ್ತುತ ರಾಕ್ಷಸರ ರಾಜ್ಯಭಾರ ನಡೆಯುತ್ತಿದೆ. ಈ ಘಟನೆಗೆ ಸಂಬಧಿಸಿದಂತೆ ಪ್ರಕರಣವನ್ನು ಹಿಂದಕ್ಕೆ ಪಡೆಯುವ ಪ್ರಯತ್ನವೂ ನಡೆದಿದೆ ಎಂದರಲ್ಲದೆ, ಪಿಎಫ್ಐ ಸಂಘಟನೆಗೆ ಸಿದ್ದರಾಮಯ್ಯ ಪರೋಕ್ಷ ಸಹಕಾರ ನೀಡುತ್ತಿದ್ದಾರೆ. ಗಲಭೆಗಳಾದಾಗ ಹತ್ತಿಕ್ಕುವ ಬದಲಿಗೆ ದಾರಿ ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದೂ ಅವರು ಆರೋಪಿಸಿದರು.
ಬೆಂಗಳೂರು ರೈಲು ಸಂಚಾರದ ಅವಧಿ ಕಡಿತಕ್ಕೆ ಕ್ರಮ: ಮೈಸೂರು- ಬೆಂಗಳೂರು ನಡುವಿನ ರೈಲು ಪ್ರಯಾಣದ ಸಮಯವನ್ನು ಮತ್ತಷ್ಟು ಕಡಿತಗೊಳಿಸಲು ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ಸಭೆ ಜತೆ ಗತಿಶಕ್ತಿ ಯೋಜನೆ ಕುರಿತು ಸಭೆ ನಡೆಸಿದ ಅವರು, ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ಆದ ಮೇಲೆ ಕೇವಲ 2 ಗಂಟೆಯಲ್ಲಿ ಬಸ್ ಮೂಲಕ ಬೆಂಗಳೂರು ತಲುಪಬಹುದು. ಆದರೆ ರೈಲಿನಲ್ಲಿ ಈಗಲೂ 3 ಗಂಟೆ ತೆಗೆದುಕೊಳ್ಳುವುದಾದರೆ ಜನರು ಹೇಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.
ಆದ್ದರಿಂದ ಕೂಡಲೇ ಎಲ್ಲೆಲ್ಲಿ ಸಮಯ ವ್ಯರ್ಥವಾಗುವುದನ್ನು ತಡೆಗಟ್ಟಬಹುದೋ ಅಲ್ಲಲ್ಲಿ ವೇಗವಾಗಿ ನಿಲ್ದಾಣ ತಲುಪುವಂತೆ ಮಾಡಿ. ಅಂತೆಯೇ ಹೈ ಸ್ಪೀಡ್ ರೈಲು ಯೋಜನೆ ಜಾರಿಗೊಳಿಸುವ ಸಂಬಂಧ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದರು. ಪ್ರಸ್ತುತ ಎಲ್ಲಾ ರೈಲುಗಳು ಮೈಸೂರು ಕೇಂದ್ರ ರೈಲ್ವೆ ನಿಲ್ದಾಣದಿಂದ ಸಂಚರಿಸುತ್ತಿವೆ. ಈ ಪೈಕಿ ನಾಲ್ಕು ಮೆಮು ರೈಲನ್ನು ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಈ ತಿಂಗಳೊಳಗೆ ಸಂಚರಿಸುವಂತೆ ನೋಡಿಕೊಳ್ಳಲಾಗುವುದು. ಸಂಬಂಧಿಸಿದ ಸಚಿವರೊಡನೆ ಮಾತುಕತೆ ನಡೆಸಿ ದಸರಾ ಅದಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.
ಫೆಬ್ರವರಿಗೆ ಮೆಟ್ರೋ ಹಳದಿ ಮಾರ್ಗ ಸೇವೆಗೆ ನೀಡಲು ಕ್ರಮವಹಿಸಿ: ಸಂಸದ ತೇಜಸ್ವಿ ಸೂರ್ಯ
ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರಂ ವಿಸ್ತರಣೆ ಮಾಡಲಾಗುತ್ತಿದೆ. ಮೈಸೂರು ಕೇಂದ್ರ ರೈಲ್ವೆ ನಿಲ್ದಾಣವನ್ನು ಸುಮಾರು 356 ಕೋಟಿ ವೆಚ್ಚದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ನಾಗನಹಳ್ಳಿ ಬಳಿ ನಿರ್ಮಿಸಲು ಉದ್ದೇಶಿಸಿದ್ದ ಟರ್ಮಿನಲ್ ಕಾಮಗಾರಿಗೆ ರಾಜ್ಯ ಸರ್ಕಾರ ಅಗತ್ಯ ಭೂಮಿ ನೀಡದ ಹಿನ್ನೆಲೆಯಲ್ಲಿ ಹಾಲಿ ಇರುವ ರೈಲು ನಿಲ್ದಾಣದ ಸಮೀಪವಿದ್ದ ಸುಮಾರು 60 ಎಕರೆ ಪ್ರದೇಶದಲ್ಲಿ ಈ ಎಲ್ಲಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.ಪ್ರಸ್ತುತ ಸಂಚರಿಸುತ್ತಿರುವ ಕಾವೇರಿ ಎಕ್ಸ್ಪ್ರೆಸ್, ಚೆನ್ನೈ ಇಂಟರ್ ಸಿಟಿ ಎಕ್ಸ್ ಪ್ರೆಸ್, ಕಾಚಿಗುಡ, ಹಂಪಿ ಎಕ್ಸ್ಪ್ರೆಸ್, ಗೋಲ್ ಗುಂಬಜ್ ಎಕ್ಸೆಪ್ರೆಸ್ ರೈಲನ್ನು ಸೂಪರ್ ಫಾಸ್ಟ್ ರೈಲಾಗಿ ಪರಿವರ್ತಿಸಲಾಗುವುದು ಎಂದರು.