ಬರಪರಿಹಾರ ಕೇಂದ್ರ ಬಿಡುಗಡೆ ಮಾಡಿಲ್ಲ ಎನ್ನುವ ಸಿದ್ದರಾಮಯ್ಯನವರೆ ನೀವೆಷ್ಟು ಕೊಟ್ಟಿದ್ದೀರಾ: ಸಂಸದ ಪ್ರತಾಪ್ ಸಿಂಹ

By Govindaraj S  |  First Published Jan 28, 2024, 8:25 PM IST

ರಾಜ್ಯದಲ್ಲಿ 25 ಸಂಸದರಿದ್ದೀರಾ, ಬರಪರಿಹಾರ ಮಾತ್ರ ತರಲು ಆಗಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಮೋಸವಾಗುತ್ತಿದೆ ಎನ್ನುವ ಸಿಎಂ ಸಿದ್ದರಾಮಯ್ಯನವರೆ ಬರಪರಿಹಾರಕ್ಕೆ ನೀವೆಷ್ಟು ಕೊಟ್ಟಿದ್ದೀರಾ ಹೇಳಿ ಎಂದು ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜ.28): ರಾಜ್ಯದಲ್ಲಿ 25 ಸಂಸದರಿದ್ದೀರಾ, ಬರಪರಿಹಾರ ಮಾತ್ರ ತರಲು ಆಗಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಮೋಸವಾಗುತ್ತಿದೆ ಎನ್ನುವ ಸಿಎಂ ಸಿದ್ದರಾಮಯ್ಯನವರೆ ಬರಪರಿಹಾರಕ್ಕೆ ನೀವೆಷ್ಟು ಕೊಟ್ಟಿದ್ದೀರಾ ಹೇಳಿ ಎಂದು ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಬರ ಬಂದು ರಾಜ್ಯದಲ್ಲಿ 34 ಸಾವಿರ ಕೋಟಿ ನಷ್ಟವಾಗಿದೆ ಎಂದು ವರದಿ ಕೊಟ್ಟಿದ್ದೀರ. ಆದರೆ ಇದುವರೆಗೆ ನೀವು ಬಿಡುಗಡೆ ಮಾಡಿರುವುದು ಕೇವಲ 105 ಕೋಟಿ. ಇದೇನಾ ನಿಮಗೆ ರೈತರು, ಜನರ ಮೇಲೆ ಇರುವ ಕಾಳಜಿ ಎಂದು ಪ್ರತಾಪ ಸಿಂಹ ಲೇವಡಿ ಮಾಡಿದ್ದಾರೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮೋಸ ಮಾಡಿಲ್ಲ, 16 ರಾಜ್ಯಗಳಿಗೆ ಬರ, ನೆರೆ ಪರಿಹಾರ ನೀಡಿಲ್ಲ. 

Tap to resize

Latest Videos

ಬರದ ಸಂಬಂಧ ಪರಿಶೀಲನೆ ಮಾಡಲಾಗುತ್ತಿದೆ. ಅದನ್ನು ಕೇಂದ್ರ ಎಲ್ಲಾ ರಾಜ್ಯಗಳಿಗೂ ಒಟ್ಟಿಗೆ ಕೊಟ್ಟೇ ಕೊಡುತ್ತದೆ. ಅದಕ್ಕೂ ಮುಂಚೆ ನೀವೆ ರೈತರಿಗೆ ಪರಿಹಾರ ಬಿಡುಗಡೆ ಮಾಡಿ ನಂತರ ಕೇಂದ್ರದಿಂದ ಬರುವ ಹಣವನ್ನು ನಿಮ್ಮ ಸರ್ಕಾರ ಇಟ್ಟುಕೊಳ್ಳಬಹುದಲ್ಲ. ಇಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಸಾಹೇಬ್ರು, ಬಸವರಾಜ ಬೊಮ್ಮಾಯಿ ಸಾಹೇಬ್ರು ಹಾಗೆಹೇ ಮಾಡಿದ್ದಾರೆ ಎಂದಿದ್ದಾರೆ. ಕೊಡಗಿಗೆ ಬಂದು ಬರೀ ಭಾಷಣ ಮಾಡಿ, ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದೀರಿ ಎಂದು ಕುಟುಕಿದ್ದಾರೆ. ಜಿಲ್ಲೆಗೆ 29 ಕೋಟಿ ವೆಚ್ಚದಲ್ಲಿ ನಾವು ಕ್ರಿಟಿಕಲ್ ಕೇರ್ ಸೆಂಟರ್ ಕೊಟ್ಟಿದ್ದೇವೆ. ಆದರೆ ನಿಮ್ಮ ಸರ್ಕಾರ ಇದುವರೆಗೆ ಅದರ ಕಾಮಗಾರಿ ಆರಂಭಿಸಿಲ್ಲ. 

ಕನಕ ಭವನಕ್ಕೆ ಸಿಎಂ ಸಿದ್ದರಾಮಯ್ಯ 75 ಲಕ್ಷ ನೀಡಲು ಒಪ್ಪಿದ್ದಾರೆ: ಶಾಸಕ ಗಣೇಶ್‌ ಪ್ರಸಾದ್‌

2018 ರಿಂದಲೂ ಕೊಡಗಿನಲ್ಲಿ ಪ್ರವಾಹ ಆಗುತ್ತಿದ್ದು, ಆಗ ನೀವು ಮಳೆಯಿಂದ ನಷ್ಟ ಅನುಭವಿಸಿದವರಿಗೆ 3.500 ಕೊಡುತ್ತಿದ್ದಿರಿ. ಆದರೆ ಯಡಿಯೂರಪ್ಪನವರ ಸರ್ಕಾರ 10 ಸಾವಿರ ಕೊಟ್ಟಿತ್ತು. ಶ್ರೀರಂಗಪಟ್ಟಣದಿಂದ ಕುಶಾಲನಗರದವರೆಗೆ 4130 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದು ಇತರೆ ಕಾಮಗಾರಿಗಳು ಸೇರಿ 6000 ಕೋಟಿ ಆಗುವ ಸಾಧ್ಯತೆ ಇದೆ. ಆ ಅನುದಾನವನ್ನು ನಾನು ತರುತ್ತೇನೆ. 2025 ಫೆಬ್ರವರಿಯ ಒಳಗೆ ಅದರ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರ ಬಳಕೆಗೆ ಮುಕ್ತಗೊಳಿಸುತ್ತೇನೆ. ನ್ಯಾಷನಲ್ ಹೈವೇ ರಿಟೈನಿಂಗ್ ಗಾಗಿ 100 ಕೋಟಿ ತಂದಿದ್ದೇನೆ. 

ಇದಕ್ಕಾಗಿಯೇ ಕೊಡಗಿನ ಜನತೆ ನನನ್ನು ಆಶಿರ್ವದಿಸಿ ಗೆಲ್ಲಿಸಿದ್ದಾರೆ. ನೀವು ಯಾರದೋ ಚಪ್ಪಾಳೆಗಾಗಿ ಏನು ಬೇಕಾದರೂ ಮಾತನಾಡಬೇಡಿ. ಅಂಕಿ ಅಂಶಗಳೇ ಬೇರೆ ಇರುತ್ತವೆ ಸಿದ್ದರಾಮಯ್ಯನವರೆ ಎಂದರು. ಪೊನ್ನಣ್ಣನವರೇ ಸುಮ್ಮನೇ ಏನೇನೋ ಮಾತನಾಡಬೇಡಿ. ಸಿಎಂ ಕಾನೂನು ಸಲಹೆಗಾರರಾಗಿ ಸೈರನ್ ಹಾಕಿಕೊಂಡು ಓಡಾಡಿದರೆ ಸಾಲದು. ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದೀರಿ ಹೇಳಿ. ನಿಮ್ಮ ಸರ್ಕಾರದಿಂದ ಅನುದಾನ ತಂದು 7 ಅಡಿ ಡಾಂಬರು ಹಾಕಿಸಿದ್ದೀರ ಹೇಳಿ. ಕೊಡವ ಸಮಾಜಗಳಿಗೆ ಅನುದಾನ ಬಿಡುಗಡೆ ಆಗಿರುವುದನ್ನು ದಾಖಲೆ ಸಹಿತ ಬಿಡುಗಡೆ ಮಾಡಿದ್ದೇನೆ. 

ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿರುವುದೇ ನನಗೆ ಹೆಮ್ಮೆ: ಸಚಿವ ಬೈರತಿ ಸುರೇಶ್‌

ಈ ಬಾರಿಯೂ ರಾಜ್ಯದಲ್ಲಿ 28 ಸ್ಥಾನಗಳನ್ನು ಜನರು ಆಶೀರ್ವದಿಸುತ್ತಾರೆ. ಇಡೀ ಮೈಸೂರಿಗೆ ಕುಡಿಯುವ ನೀರು, ಕಸ ವಿಲೇವಾರಿ ಘಟಕಗಳನ್ನು ತಂದಿದ್ದು ನಾನು. ಇವೆಲ್ಲ ಅಭಿವೃದ್ಧಿ ಕೆಲಸಗಳಲ್ಲವೇ ಸಿದ್ದರಾಮಯ್ಯನವರೇ. ಕೊಡಗಿನಲ್ಲಿ ನೀವು ಮಾಡಿರುವ ಕಾಮಗಾರಿಗಳ ಶಂಕುಸ್ಥಾಪನೆಗೆ ಟೆಂಡರ್ ಆಗಿಲ್ಲ. ಗುತ್ತಿಗೆದಾರರ ಯಾರೆಂದು ಗೊತ್ತಾಗಿಲ್ಲ. ಆಗಲೇ ಬಂದು ಶಂಕುಸ್ಥಾಪನೆ ಮಾಡಿದ್ದೀರಿ. ಕೊಡಗಿಗೆ ಬಂದು ಪ್ರತಾಪ ಸಿಂಹನನ್ನು ಸೋಲಿಸಿ ಅಂತ ನೀವೇನು ಹೇಳುವುದು.? ಮೈಸೂರಿನಲ್ಲೇ ಜನರು ನಿಮ್ಮ ಮಾತು ಕೇಳಲ್ಲ. ಇನ್ನು ದೇಶ ಭಕ್ತರು ಇರುವ ಜಿಲ್ಲೆ ಕೊಡಗಿನಲ್ಲಿ ಜನ ನಿಮ್ಮ ಮಾತು ಕೇಳುತ್ತಾರಾ ಎಂದು ಸಿಎಂ ಸಿದ್ದರಾಮಯ್ಯ ಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

click me!