
ಹುಬ್ಬಳ್ಳಿ (ಜೂ.28): ಸಿದ್ದರಾಮಯ್ಯ ಐದು ವರ್ಷ ಇರಬೇಕು ಎನ್ನುವ ಕ್ಲಿಯರ್ ಸಿಗ್ನಲ್ ಅನ್ನು ಹೈಕಮಾಂಡ್ ಕೊಡಬೇಕಿತ್ತು. ಸಿದ್ದರಾಮಯ್ಯ ಅವರನ್ನ ಕೈಕಟ್ಟಿ ಹಾಕುವ ಕೆಲಸ ನಡೆಯುತ್ತಿದೆ ಎಂದ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಪದವಿ ಕಿತ್ತಾಟ ವಿಚಾರವಾಗಿ ಸಂಸದ ಜಗದೀಶ್ ಶೆಟ್ಟರ್ ಈ ರೀತಿಯಾಗಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯರನ್ನು ಕೈಕಟ್ಟಿ ಹಾಕುವುದರಿಂದ ರಾಜ್ಯದಲ್ಲಿ ಅತಂತ್ರ ಸರ್ಕಾರ ಆಗುತ್ತೆ. ಇಂತಹ ಪರಿಸ್ಥಿತಿಯಿಂದ ಸರ್ಕಾರಕ್ಕೂ ಡ್ಯಾಮೇಜ್ ಆಗುತ್ತೆ. ಆಡಳಿತ ವ್ಯವಸ್ಥೆ ಹದಗಡುತ್ತಿದೆ ಆಂತರಿಕ ಕಲಹದಿಂದ ಸರ್ಕಾರಕ್ಕೆ ತೊಂದರೆ ಆಗುತ್ತೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ದೃಢವಾದ ನಿರ್ಧಾರ ತೆಗೆದುಕೊಂಡು ಎಸ್.. ಆರ್.. ನೋ ಅಂತ ಹೇಳಬೇಕು.
ಒಂದು ಡಿಸಿಎಂ ಇದ್ದಿದ್ದು ಮೂರು ಡಿಸಿಎಂ ಆಗಲಿ ಮುಖ್ಯಮಂತ್ರಿ ಬದಲಾವಣೆ ಆಗಲಿ ಅನ್ನೋ ಗೊಂದಲ ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಯಾರ ಮನಸಲ್ಲಿ ಏನಿದೆ ಅನ್ನೋದನ್ನ ಬೇರೆಯವರಿಂದ ಹೇಳಿಸುವ ಪ್ರಯತ್ನ ಆಗುತ್ತಿದೆ. ಏನು ಹೇಳಬೇಕು ಅನ್ನೋದನ್ನ ಹೈಕಮಾಂಡ್ ಮುಂದೆ ಹೇಳಬೇಕು. ನಾನು ಕಾಂಗ್ರೆಸ್ ನಲ್ಲಿ ಇದ್ದರೂ ಕೂಡ ಈ ಬಗ್ಗೆ ಗೊತ್ತಾಗಿರಲಿಲ್ಲ. ಸಿಎಂ ಹುದ್ದೆಗಾಗಿ ಮೊದಲಿನಿಂದಲೂ ಗುದ್ದಾಟ ಇದ್ದೇ ಇದೆ. ಈಗಲೂ ಅದು ಮುಂದುವರೆದಿದೆ. ಬಿಜೆಪಿ ಆಪರೇಷನ್ ಕಮಲ ಮತ್ತೊಂದು ಮಾಡುವುದು ಬೇಕಾಗಿಲ್ಲ. ಕಾಂಗ್ರೆಸ್‌ನ ಒಳ ಬೇಗುದಿಯಿಂದ ಶಾಸಕರ ಅಸಮಾಧಾನವೇ ಸರ್ಕಾರಕ್ಕೆ ಎಫೆಕ್ಟ್ ಆಗುತ್ತೆ ಎಂದರು.
ನೀಟ್ ಬಗ್ಗೆ ಅಧ್ಯಯನ ಬೇಕೇ? ಬೇಡವೇ ಚರ್ಚೆಯಾಗಲಿ: ಸಚಿವ ದಿನೇಶ್ ಗುಂಡೂರಾವ್
ಗ್ಯಾರಂಟಿ ಯೋಜನೆಗಳಿಂದ ಎಲೆಕ್ಷನ್ ನಲ್ಲಿ ಲಾಭ ಆಗುತ್ತೆ ಅಂತ ತಿಳಿದುಕೊಂಡಿದ್ದರು. ಲಾಭ ಆಗಿಲ್ಲ ಹೀಗಾಗಿ ವಾಪಸ್ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಗ್ಯಾರಂಟಿ ಅನುಷ್ಠಾನಕ್ಕಾಗಿ ಸರ್ಕಾರದ ಖಜಾನೆ ಖಾಲಿ ಆಗುತ್ತಿದೆ. ವರಮಾನ ಹೆಚ್ಚಿಗೆ ಮಾಡಿಕೊಳ್ಳಲು ಡೀಸೆಲ್ ಪೆಟ್ರೋಲ್ ಹಾಲು, ಬಸ್ ಪ್ರಯಾಣ ದರ ಹೆಚ್ಚಳ ಮಾಡಿದ್ರು. ಜನಸಾಮಾನ್ಯರು ಬಡವರು ಬಹಳ ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನತೆಗೆ ತೊಂದರೆಯಾಗುತ್ತಿದೆ. ಇದನ್ನೆಲ್ಲ ವಿಚಾರ ಮಾಡಿ ಸಿದ್ದರಾಮಯ್ಯನವರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.