ದಲಿತರ 187 ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ, ಬಾರ್ ಮತ್ತು ವೈನ್ಸ್ ಸ್ಟೋರ್ಗಳಿಗೆ ಹಣ ಟ್ರಾನ್ಸ್ಫರ್ ಮಾಡಿ ಅವರಿಂದ ಬ್ಲಾಕ್ ಮನಿ ತೆಗೆದುಕೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕೋಲಾರ (ಜೂ.28): ದಲಿತರ 187 ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ, ಬಾರ್ ಮತ್ತು ವೈನ್ಸ್ ಸ್ಟೋರ್ಗಳಿಗೆ ಹಣ ಟ್ರಾನ್ಸ್ಫರ್ ಮಾಡಿ ಅವರಿಂದ ಬ್ಲಾಕ್ ಮನಿ ತೆಗೆದುಕೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಕಳೆದ ವರ್ಷ ಹಾಲಿನ ಬೆಲೆ ಏರಿಕೆ ಮಾಡಿ ರೈತರಿಗೆ ಕೊಡ್ತೀವಿ ಎಂದು ನಯಾ ಪೈಸೆ ಕೊಟ್ಟಿಲ್ಲ, ಈಗ ಮತ್ತೆ ಹಾಲಿನ ಬೆಲೆ ಏರಿಕೆ ಮಾಡಿದೆ, ನಾಲ್ಕು ಲಕ್ಷ ಕೋಟಿ ಬಜೆಟ್ ಮಾಡೋ ಸರ್ಕಾರಕ್ಕೆ ಜ್ನಾನ ಇದ್ದಿದ್ದರೆ ಅದನ್ನು ವೈಜ್ನಾನಿಕವಾಗಿ ಏನು ಮಾಡಬೇಕು ಅನ್ನೋದನ್ನ ಪ್ಲಾನ್ ಮಾಡಬೇಕಿತ್ತು.
ಸರ್ಕಾರ ಮಣ್ಣು ತಿನ್ನುತ್ತಿತ್ತಾ ಅದನ್ನು ಬಿಟ್ಟು ಈಗ ಹಾಲಿನ ಬೆಲೆ ಏರಿಕೆ ಮಾಡೋದು ಸರಿಇಲ್ಲ, ಪೆಟ್ರೋಲ್-ಡೀಸಲ್, ಸ್ಟಾಂಪ್ ಡ್ಯೂಟಿ ಎಲ್ಲಾ ಬೆಲೆ ಏರಿಕೆ ಮಾಡಿದ್ದಾರೆ, ಜುಲೈ-1 ರಿಂದ ಮತ್ತೆ ಮದ್ಯದ ಬೆಲೆ ಏರಿಕೆ, ಬಡವರು ಕೂಲಿ ಮಾಡೋರು ಕುಡಿಯೋ ಮದ್ಯ ಬೆಲೆ ಏರಿಕೆ ಮಾಡಿ ದುಬಾರಿ ಬೆಲೆಯ ಮದ್ಯದ ಬೆಲೆ ಕಡಿಮೆ ಮಾಡಿದೆ, ಪ್ರೀಗಳ ಹೆಸರಲ್ಲಿ ಅವೈಜ್ನಾನಿಕ ಯೋಜನೆ ಜಾರಿಗೆ ತಂದು ಯೋಜನೆಗೆ ಹಣಹೊಂದಿಸಲು ಯೋಗ್ಯತೆ ಇಲ್ಲದೆ ಜನರನ್ನು ಲೂಟಿ ಮಾಡುತ್ತಿದೆ, ಇದರ ವಿರುದ್ದ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಅಶೋಕ್ ಹೇಳಿದರು.
ಕಾಂಗ್ರೆಸ್ ಮಾಡಿದ ತಪ್ಪಿಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಲಿ: ಆರ್.ಅಶೋಕ್
ಸರ್ಕಾರ ಪಾಪರ್ ಆಗಿದೆ: ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂಪಾಯಿ ಹಣ ಅವ್ಯವಹಾರ ಆಗಿದೆ,ಅದರಲ್ಲಿ ನಾಗೇಂದ್ರ ಪಾಲು 20 ಪರ್ಸೆಂಟ್ ಆದರೆ 80 ಪರ್ಸೆಂಟ್ ಲೂಟಿ ಮಾಡಿರೋದು ಸಿದ್ದರಾಮಯ್ಯ ಅಂಡ್ ಗ್ಯಾಂಗ್. ಅದಕ್ಕೆ ನಾವು ಸಿದ್ದರಾಮಯ್ಯನವರ ರಾಜೀನಾಮೆಗೆ ಪಟ್ಟು ಹಿಡಿದು ವಿಧಾನಸಭೆಯಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ಒಂದು ವಿಕೆಟ್ ಬಿದ್ದಿರೋದಲ್ಲ ಇನ್ನು ಮೂರು ನಾಲ್ಕು ವಿಕೆಟ್ ಬೀಳೋದಿದೆ, ಜನಕ್ಕೆ ಅರ್ಥವಾಗಿದೆ ಇದೊಂದು ಲೂಟಿ ಸರ್ಕಾರ 2000 ರೂಪಾಯಿ ಹೆಸರಲ್ಲಿ ಜನರನ್ನು ಲೂಟಿ ಮಾಡಿದ್ದಾರೆ, ರಾಜ್ಯದಲ್ಲಿ ಡೆಂಗ್ಯೂ ಜ್ವರ ತಾಂಡವಾಡ್ತಿದೆ, ಜನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ, ಕುಡಿಯೋ ನೀರು ಕೊಡಲು ಇವರ ಬಳಿ ಹಣ ಇಲ್ಲ. ರಾಜ್ಯದಲ್ಲಿ ಸರ್ಕಾರ ಪಾಪರ್ ಆಗಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಏನು ಪಾಪಿ ನಾ: ರಾಜ್ಯದಲ್ಲಿ ಸಿಎಂ ಎಕ್ಸ್ಪ್ರೈರಿ ಆಗಿದ್ದಾರೆ, ಡಿ.ಕೆ ಶಿವಕುಮಾರ್ ಅವರು ಅವರ ತಮ್ಮ ಸೋತಿದ್ದಾರೆ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ, ಪರಮೇಶ್ವರ್ ಅವರನ್ನು ಸೋಲಿಸಿದ ರೀತಿಯಲ್ಲೇ ಡಿಕೆಶಿ ಅವರನ್ನು ಸೋಲಿಸಿದ್ದಾರೆ, ಡಿಕೆಶಿ ಮುಖ್ಯಮಂತ್ರಿ ಕೇಳ್ತಾರೆ ಎಂದು ಅವರನ್ನು ಸೋಲಿಸಿದ್ದಾರೆ ಈಗ ಡಿಕೆಶಿ ಚದುರಂಗದಾಟ ಶುರುಮಾಡಿದ್ದಾರೆ, ಅದಕ್ಕಾಗಿ ನಿನ್ನೆ ಸ್ವಾಮೀಜಿ ಕೈಯಲ್ಲಿ ಹೇಳಿಸಿದ್ದಾರೆ ಸಿದ್ದರಾಮಯ್ಯನವರೆ ನೀವು ಸಾಕು, ನೀನು ಧರ್ಮಾತ್ಮನಾಗಿದ್ದಾರೆ ರಾಜೀನಾಮೆ ಕೊಟ್ಟು ಡಿಕೆಶಿ ಅವರನ್ನು ಸಿಎಂ ಮಾಡು ಸ್ವಾಮೀಜಿ ಹೇಳಿಸಿದ್ದಾರೆ.
ಆರ್.ಅಶೋಕ್ ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಎಚ್.ವಿಶ್ವನಾಥ್
ಹಾಗಾದ್ರೆ ಸಿದ್ದರಾಮಯ್ಯ ಏನು ಪಾಪಿ ನಾ ಎಂದು ಪ್ರಶ್ನಿಸಿದ ಆರ್.ಅಶೋಕ್, ಇದರ ಸೂತ್ರದಾರ ಯಾರೆಂದು ರಾಜ್ಯದ ಜನತೆಗೆ ಗೊತ್ತಿದೆ, ಇನ್ನೊಂದು ಕಡೆ ಮೂರು ಡಿಸಿಎಂ ಮಾಡಿ ಎಂದು ಗೊಂದಲ ಇದೆ, ಮತ್ತೊಂದೆಡೆ ಎಲ್ಲರನ್ನು ಡಿಸಿಎಂ ಮಾಡಿ ಎಂದು ರಾಜ್ಯದ ಜನರನ್ನು ಲೂಟಿ ಮಾಡಲು ಪ್ಲಾನ್ ಮಾಡುತ್ತಿದ್ದಾರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಗೊಂದಲದಲ್ಲಿದೆ, ಹೆಚ್ಚು ದಿನ ಈ ಸರ್ಕಾರ ಇರೋದಿಲ್ಲ ಇವರ ಪಾಪದಿಂದ ಕಾಂಗ್ರೆಸ್ ಶಾಸಕರುಗಳ ಶಾಪದಿಂದಲೇ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಆರ್.ಅಶೋಕ್ ಹೇಳಿದರು.