ಪ್ರಿಯಾಂಕ್ ಖರ್ಗೆ ದುರಂಹಕಾರ ಮಾತಿನಲ್ಲೇ ಗೊತ್ತಾಗುತ್ತದೆ: ಜಗದೀಶ್‌ ಶೆಟ್ಟರ್‌

By Kannadaprabha News  |  First Published Jan 1, 2025, 8:40 AM IST

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ಅವರಿಗೆ ಸೊಕ್ಕು, ಅಹಂಕಾರ ಎಷ್ಟಿದೆ ಎನ್ನುವುದು ಅವರ ಮಾತಿನ ಶೈಲಿಯಿಂದಲೇ ತಿಳಿದು ಬರುತ್ತದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್‌ ಶೆಟ್ಟರ್‌ ಆರೋಪಿಸಿದರು. 


ಬೆಳಗಾವಿ (ಜ.01): ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ಅವರಿಗೆ ಸೊಕ್ಕು, ಅಹಂಕಾರ ಎಷ್ಟಿದೆ ಎನ್ನುವುದು ಅವರ ಮಾತಿನ ಶೈಲಿಯಿಂದಲೇ ತಿಳಿದು ಬರುತ್ತದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್‌ ಶೆಟ್ಟರ್‌ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಚಿವ ಪ್ರಿಯಾಂಕ ಖರ್ಗೆ ಅವರದ್ದು ಅಹಂಕಾರದ ಮಾತು. ನನ್ನ ತಪ್ಪಿಲ್ಲ ಅನ್ನೋದು ಬೇರೆ. ಈ ರೀತಿ ಪ್ರತಿ ಪಕ್ಷದ ಬಗ್ಗೆ ಅಹಂಕಾರದ ಬಗ್ಗೆ ಮಾತಾಡೋದು ಸರಿಯಲ್ಲ. ಅವರ ಅಹಂಕಾರದ ಮಾತಿನಿಂದಲೇ ಈ ಹಿಂದೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಸೋತಿದ್ದರು. 

ಈ ರೀತಿ ಟೆಂಕಾರದ ಮಾತು ನಡೆಯುವುದಿಲ್ಲ. ಪ್ರಿಯಾಂಕ ರಾಜೀನಾಮೆ ಕೊಡುವವರೆಗೂ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ಹೇಳಿದರು. ಹಿಂದೆ ಇಂತಹದೇ ಪ್ರಕರಣದಲ್ಲಿ ಈಶ್ವರಪ್ಪನವರ ರಾಜೀನಾಮೆಗೆ ಕಾಂಗ್ರೆಸ್ ನವರು ಹೋರಾಟ ಮಾಡಿದ್ದರು. ಈ ವೇಳೆ ನೈತಿಕ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಿದ್ದರು‌. ಸಚಿನ್ ಕುಟುಂಬಸ್ಥರು ನೇರವಾಗಿ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪ ಮಾಡಿದ್ದಾರೆ‌. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಖರ್ಗೆ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರು.

Tap to resize

Latest Videos

ಸಿಎಂ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಭ್ರಷ್ಟಾಚಾರ ಮೀತಿ‌ಮೀರಿದೆ. ಸಿದ್ದರಾಮಯ್ಯ ಅವರದ್ದು ಲಾಸ್ಟ್ ಲೆಗ್ ಆಫ್‌ ಪಾಲಿಟಿಕ್ಸ್. ಸಿದ್ದರಾಮಯ್ಯನವರ ಆಪ್ತರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಎಲ್ಲಾ ಕಡೆಯಿಂದಲೂ ಹಣ ಬಳಿದುಕೊಳ್ಳುವುದು ಶುರುವಾಗಿದೆ.ಇದರ ನೇರ ಪರಿಣಾಮ ಗುತ್ತಿಗೆದಾರರ ಮೇಲೆ ಆಗುತ್ತಿದೆ ಎಂದು ಟೀಕಿಸಿದ ಅವರು, ಇಡೀ ವ್ಯವಸ್ಥೆ ಕೇಂದ್ರ ಸರ್ಕಾರದ ಗಮನಕ್ಕೆ ಇದ್ದೇ ಇರುತ್ತದೆ. ನಾವೂ ಸಹ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು. ಸಿ.ಟಿ. ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ ಸಭಾಪತಿ ಮಧ್ಯಸ್ಥಿಕೆಯಲ್ಲಿ ಮುಗಿದು ಹೋಗುವ ಪ್ರಕರಣ. ಸಭಾಪತಿ ವ್ಯಾಪ್ತಿಗೆ ಬರುವ ಕೇಸ್ ನ್ನು ಪೊಲೀಸರು ತಮ್ಮ ಕಡೆ ತೆಗೆದುಕೊಂಡಿದ್ದು ಕಾನೂನು ಬಾಹಿರವಾಗಿದೆ. 

ಸಿಎಂ ಸಿದ್ದರಾಮಯ್ಯಗೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆವ ಶಕ್ತಿಯಿಲ್ಲ: ಜನಾರ್ದನ ರೆಡ್ಡಿ

ಇದನ್ನು ಸಭಾಪತಿ ಸುಪರ್ದಿಗೆ ಬಿಟ್ಟು ಬಿಡಿ ಅವರು ನಿರ್ಧಾರ ತೆಗೆದುಕೊಳ್ಳಲಿ. ಸಿಟಿ ರವಿಯವರನ್ನ ಟಾರ್ಗೆಟ್ ಮಾಡುವುದನ್ನು ಸರ್ಕಾರ ನಿಲ್ಲಿಸಲಿ ಎಂದರು. ಸಿದ್ದರಾಮಯ್ಯನವರು ಇಲ್ಲಿವರೆಗೂ ಸೇಪ್ ಇದ್ದರು. ಮುಡಾ ಹಗರಣದ ಕುರಿತು ಚರ್ಚೆ ಆಗಲಾರಂಭಿಸಿತು. ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಡೈವರ್ಟ್ ಮಾಡುವ ಸಲುವಾಗಿ ಬಿಜೆಪಿಯವರ ಮೇಲೆ ಕೇಸ್ ಹಾಕಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಯಡಿಯೂರಪ್ಪ ಅವರ ಮೇಲೆ ಪೋಕ್ಸೊ ಕೇಸ್ ಹಾಕಿಸಿದ್ದೀರಿ ಒಂದು ವರ್ಷದ ಹಿಂದೆ ಪ್ರಕರಣ ಆಗಿದ್ದಾಗ ಯಾಕೆ ಕೇಸ್ ಮಾಡಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು. ಯಲ್ಲಮ್ಮ ದೇವಸ್ಥಾನಕ್ಕೆ ಕೇಂದ್ರ ಸರ್ಕಾರ ನೂರು ಕೋಟಿ ಅನುದಾನ ನೀಡಿದೆ. ಇಂದು ಮಧ್ಯಾಹ್ನ ಅಧಿಕಾರಗಳ ಸಭೆ ಕರೆದು ಶೀಘ್ರವೇ ಕಾಮಗಾರಿ ಆರಂಭದ ಕುರಿತು ಅಧಿಕಾರಿಗಳ ಜೊತೆಗೆ ಚರ್ಚಿಸುವುದಾಗಿ ತಿಳಿಸಿದರು.

click me!