ಗ್ಯಾ​ರಂಟಿ​ಯಿಂದ ವಿಪ​ಕ್ಷ​ಗಳ ಹೊಟ್ಟೆಗೆ ಬೆಂಕಿ: ಸಂಸದ ಡಿ.ಕೆ.ಸುರೇಶ್‌

Published : Jul 25, 2023, 03:00 AM IST
ಗ್ಯಾ​ರಂಟಿ​ಯಿಂದ ವಿಪ​ಕ್ಷ​ಗಳ ಹೊಟ್ಟೆಗೆ ಬೆಂಕಿ: ಸಂಸದ ಡಿ.ಕೆ.ಸುರೇಶ್‌

ಸಾರಾಂಶ

ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನ​ಭಾಗ್ಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದು ಬಿಜೆಪಿ ಮತ್ತು ಜೆಡಿಎಸ್‌ ನಾಯಕರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ ಎಂದು ಸಂಸದ ಡಿ.ಕೆ.ಸುರೇಶ್‌ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

ಕನಕಪುರ (ಜು.25): ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನ​ಭಾಗ್ಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದು ಬಿಜೆಪಿ ಮತ್ತು ಜೆಡಿಎಸ್‌ ನಾಯಕರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ ಎಂದು ಸಂಸದ ಡಿ.ಕೆ.ಸುರೇಶ್‌ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು. ತಾಲೂಕಿನ ಸಾತನೂರು ಹೋಬಳಿಯ ಅಚ್ಚಲು ಸರ್ಕಾರಿ ಶಾಲೆ ಆವರಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಿಗೆ ಬಿಡಿಸಿಸಿ ಬ್ಯಾಂಕ್‌ ವತಿಯಿಂದ ಸಾಲ ಮಂಜೂರಾತಿ ಪತ್ರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಹೊಟ್ಟೆಉರಿಕೊಳ್ಳುತ್ತಿದ್ದಾರೆ.

ಗ್ಯಾರಂಟಿಗಳಿಂದ ಸರ್ಕಾರ ಮುಳುಗಿ ಹೋಯಿತು ಎಂದು ಬಾಯಿ ಬಡಿದುಕೊಳ್ಳುತ್ತಿದ್ದರು. ಅವರ ಸರ್ಕಾರದ ಅವಧಿ​ಯಲ್ಲಿ 40 ಪರ್ಸೆಂಟ್‌ ಕಮಿಷನ್‌ ತಿಂದಾಗ ಸರ್ಕಾರ ಮುಳುಗಲಿಲ್ಲ. ಈಗ ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದಿರುವುದು ವಿರೋಧಪಕ್ಷದ ನಾಯಕರಿಗೆ ಸಹಿ​ಸಿ​ಕೊ​ಳ್ಳಲು ಆಗು​ತ್ತಿಲ್ಲ ಎಂದು ಕಿಡಿ​ಕಾ​ರಿ​ದರು. ಮಾಜಿ ಮುಖ್ಯ​ಮಂತ್ರಿ​ಗ​ಳಾದ ಬಸವರಾಜ್‌ ಬೊಮ್ಮಾಯಿ ಮತ್ತು ಕುಮಾರಸ್ವಾಮಿ ಇಬ್ಬರು ಕೈ ಕೈ ಹಿಡಿದುಕೊಂಡು ಒದ್ದಾಡುತ್ತಿದ್ದಾರೆ. ನಾವು ಅವರ ಕೇಳಿದ್ದಕ್ಕೆಲ್ಲ ಲೆಕ್ಕ ಕೊಡುವ ಪ್ರಶ್ನೆ ಬರುವುದಿಲ್ಲ. ನಮ್ಮ ಉದ್ದೇಶ ಈ ರಾಜ್ಯದ ಬಡವರ ಕಲ್ಯಾಣವಾಗಬೇಕು. 

ಮೊಬೈಲ್‌ ನೋಡಿಕೊಂಡೇ ಬಸ್‌ ಚಲಾಯಿಸಿದ ಚಾಲಕ: ವೀಡಿಯೋ ವೈರಲ್‌

ರಾಜ್ಯದ ಜನರಿಗೆ ಒಂದು ಶಕ್ತಿ ಕೊಡುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡಲು ಬದ್ಧವಾಗಿದೆ. ತಾಲೂಕಿನಲ್ಲಿ ಬಡ್ಡಿ ರಹಿತವಾಗಿ 110 ಕೋಟಿಯಷ್ಟುಸಾಲವನ್ನು ಈಗಾಗಲೇ ರೈತರು ಪಡೆದುಕೊಂಡಿದ್ದಾರೆ. ಸಾಲ ಕೊಡುತ್ತಾರೆ ಎಂದ ಮಾತ್ರಕ್ಕೆ ಮುಗಿಬಿದ್ದು ಸಾಲ ಪಡೆಯುವುದು ಮುಖ್ಯವಲ್ಲ. ಸಾಲ ಮರುಪಾವತಿ ಮಾಡುವುದು ಅಷ್ಟೇ ಮುಖ್ಯ. ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ ಎಂದರೇನು?ನಾವು ಯಾವ ಸಾಲ ಪಡೆಯುತ್ತಿದ್ದೇವೆ ಎಂಬ ಅರಿವು ರೈತರಿಗಿರಬೇಕು. ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಅದೇ ವಿಶ್ವಾಸದ ಮೇಲೆ ಇನ್ನು ಹೆಚ್ಚಿನ ಬಡ್ಡಿ ರಹಿತ ಸಾಲ ಸೌಲಭ್ಯ ಪಡೆದು ವ್ಯಾಪಾರ ವಹಿವಾಟು ಮತ್ತು ಕೃಷಿಯಲ್ಲಿ ಹೂಡಿಕೆ ಮಾಡಿ ತಾವು ಹೆಚ್ಚಿನ ಲಾಭಗಳಿಸಿ ಅಭಿವೃದ್ಧಿಯನ್ನು ಹೊಂದುವ ದೂರದೃಷ್ಟಿಯಿಂದ ಸರ್ಕಾರ ಶೂನ್ಯಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. 

ನೀವು ಶೂನ್ಯ ದರದಲ್ಲಿ ಪಡೆಯುವ ಸಾಲದ ಹಣಕ್ಕೆ ಸರ್ಕಾರ ಅಪೇಕ್ಷೆ ಬ್ಯಾಂಕಿಗೆ ಬಡ್ಡಿ ಪಾವತಿ ಮಾಡುತ್ತದೆ. ಅದನ್ನು ನೀವು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳಿದರು. ಹೊಸ ಸಂಘಗಳನ್ನು ರಚನೆ ಮಾಡುವುದು ಮುಖ್ಯವಲ್ಲ. ಅದನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವುದು ಬಹಳ ಮುಖ್ಯ. ನಗರದ ಸಹಕಾರ ಸಂಘ ಒಂದರಲ್ಲಿ 18 ಕೋಟಿ ರು. ಅವ್ಯವಹಾರ ನಡೆದಿದೆ. ನಿರ್ದೇಶಕರು ಆಡಳಿತ ಮಂಡಳಿಯತ್ತ ಸರಿಯಾಗಿ ಗಮನಹರಿಸದೆ ಅಧಿಕಾರಿಗಳು ಆನ್‌ಲೈನ್‌ ಜೂಜಾಡಲು 18 ಕೋಟಿ ಕಳೆದಿದ್ದಾರೆ. ಈಗ ಅದರ ಹೊಣೆಯನ್ನು ಆಡಳಿತ ಮಂಡಳಿ ಹೊರಬೇಕು. ಹಾಗಾಗಿ ಸಂಘದ ನಿರ್ದೇಶಕರು ಆಡಳಿತ ಮಂಡಳಿ ಜವಾಬ್ದಾರಿ ವಹಿಸಿ ನಡೆಸಿಕೊಂಡು ಹೋಗಬೇಕು ಎಂದು ಸುರೇಶ್‌ ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯಎಸ್‌.ರವಿ ಮಾತನಾಡಿ, ಸಂಘ ರಚನೆ ಮಾಡುವವರೆಗೂ ಇರುವ ಹುರುಪು ಸಂಘವನ್ನು ಮುನ್ನಡೆಸಿಕೊಂಡು ಹೋಗುವಾಗ ಇರುವು ದಿಲ್ಲ. ಸಭೆಗಳಿಗೆ ಸಂಘದ ಸದಸ್ಯರು ನಿರ್ದೇಶಕರೇ ಬರುವುದಿಲ್ಲ. ಸಂಘವನ್ನು ರಚನೆ ಮಾಡುವಾಗ ಇರುವ ಸದ​ಸ್ಯರು ಮುಂದಿನ ದಿನಗಳಲ್ಲಿಯೂ ಇರಬೇಕು. ಬಿಡಿಸಿಸಿ ಬ್ಯಾಂಕಿನಿಂದ 1.29 ಕೋಟಿ ಸಾಲ ಮಂಜೂರಾಗಿದ್ದು, ಪ್ರತಿಯೊಬ್ಬರಿಗೂ ಜಮೀನಿನ ಆಧಾರದ ಮೇಲೆ 1-2 ಲಕ್ಷದವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಈ ಹಣವನ್ನು ಕೃಷಿಗೆ ಬಳಸಿಕೊಂಡು ಉತ್ತಮ ಆದಾಯ ಗಳಿ​ಸು​ವಂತೆ ಸಲಹೆ ನೀಡಿದರು.

ಭದ್ರಾ ಮೇಲ್ದಂಡೆ ಶೀಘ್ರ ಪೂರ್ಣಗೊಳಿಸುವುದೇ ನಮ್ಮ ಗುರಿ: ಸಚಿವ ಡಿ.ಸುಧಾಕರ್‌

ಈ ವೇಳೆ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ವಿಜಯದೇವ್‌, ಮುಖಂಡ ವಿಶ್ವನಾಥ್‌, ತಾಪಂ ಮಾಜಿ ಉಪಾಧ್ಯಕ್ಷ ನಾಗಣ್ಣ, ಕೃಷ್ಣಪ್ಪ, ಸುಮಂಗಳ, ಗ್ರಾಪಂ ಅಧ್ಯಕ್ಷೆ ಶಿವಮ್ಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್‌, ಉಪಾಧ್ಯಕ್ಷೆ ಶಶಿಕಲಾ, ನಿರ್ದೇಶಕರಾದ ನಿಂಗೇಗೌಡ, ಅಭಿನಂದನ್‌ ಕುಮಾರ್‌, ಸವಿತಾ, ಲೋಕೇಶ್‌, ವರದರಾಜು, ಸಿದ್ದರಾಜು, ವೆಂಕಟೇಶ, ನಾಗೇಶ್‌, ಯೋಗೇಶ್‌, ಮುಖ್ಯ ಕಾರ್ಯನಿರ್ವಾಹಕ ವಿಜಯ ಕುಮಾರ್‌ ಮತ್ತಿ​ತ​ರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!