ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಶಕ್ತಿ ಯಾರಿಗೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂತರಗಂಗೆ ಬೆಟ್ಟದಂತೆ ಗಟ್ಟಿಯಾಗಿ ನಿಂತಿದ್ದಾರೆ. ಆ ಬೆಟ್ಟವನ್ನು ಕದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಕೋಲಾರ (ಜು.25): ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಶಕ್ತಿ ಯಾರಿಗೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂತರಗಂಗೆ ಬೆಟ್ಟದಂತೆ ಗಟ್ಟಿಯಾಗಿ ನಿಂತಿದ್ದಾರೆ. ಆ ಬೆಟ್ಟವನ್ನು ಕದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮ್ಮನೆ ಯಾರಾರಯರೋ ಏನೇನೋ ಹೇಳಿಕೊಂಡು ಓಡಾಡಬಹುದು. ಕಾಂಗ್ರೆಸ್‌ನ 136 ಶಾಸಕರೂ ಗಟ್ಟಿಯಾಗಿ ನಿಂತಿದ್ದಾರೆ. ಅವರನ್ನು ಅಲ್ಲಾಡಿಸಲೂ ಯಾರಿಂದಲೂ ಸಾಧ್ಯವಿಲ್ಲ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿರುವ ತನಕ ಕಾಂಗ್ರೆಸ್ ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇನ್ನು, ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅವರಿಗೆ ರಾಜ್ಯಸಭಾ ಸದಸ್ಯರನ್ನಾಗಿಲು ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಒತ್ತಾಯಪಡಿಸುತ್ತಿದ್ದಾರೆಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೊತ್ತೂರು ಮಂಜುನಾಥ್, ರಮೇಶ್‌ಕುಮಾರ್ ಅವರು ಯಾವುದೇ ಸ್ಥಾನಮಾನ ಬೇಕೆಂದು ಕೇಳಿದರೆ ಶಿಳ್ಳೆ ಹೊಡೆದಂತೆ ದೊರಕುತ್ತದೆ. ಆದರೆ ಅವರು ಇದುವರೆಗೂ ಯಾ ವುದೇ ಸ್ಥಾನಮಾನ ಬೇಕೆಂದು ಕೇಳಿಲ್ಲ, ಆ ಜಾಯಮಾನವೂ ಅವರದಲ್ಲ ಎಂದರು.
ಭದ್ರಾ ಮೇಲ್ದಂಡೆ ಶೀಘ್ರ ಪೂರ್ಣಗೊಳಿಸುವುದೇ ನಮ್ಮ ಗುರಿ: ಸಚಿವ ಡಿ.ಸುಧಾಕರ್
ಜಿಲ್ಲಾಸ್ಪತ್ರೆಗೆ 5 ಡಯಾಲಿಸಿಸ್ ಯಂತ್ರ ಕೊಡುಗೆ: ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ಹೊರ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಿರುವುದರಿಂದ ಆಸ್ಪತ್ರೆಗೆ ಹಂತ ಹಂತವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಬೇಡಿಕೆಗೆ ತಕ್ಕಂತೆ 5 ಡಯಾಲಿಸೀಸ್ ಯಂತ್ರಗಳನ್ನು ನೀಡಲಾಗುವುದು. ಅಲ್ಲದೆ ನನ್ನ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ಸೋಮವಾರ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ವೈದ್ಯರ-ದಾದಿಯರ ಹಾಗೂ ರೋಗಿಗಳ ಬಳಿ ಸಮಸ್ಯೆಗಳನ್ನು ಆಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಡಯಾಲೀಸಿಸ್‌ಗೆ 6 ಯಂತ್ರಗಳಿದ್ದು, ಅವು ಸಾಕಾಗುತ್ತಿಲ್ಲವೆಂದು ಜಿಲ್ಲಾ ಸರ್ಜನ್ ಡಾ.ವಿಜಯಕುಮಾರ್ ತಿಳಿಸಿದ್ದು, ದಾನಿಗಳಿಂದ 5 ಡಯಾಲಿಸಿಸ್ ಯಂತ್ರಗಳನ್ನು ಉಚಿತವಾಗಿ ಆಸ್ಪತ್ರೆಗೆ ನೀಡಲಾಗುವುದು ಎಂದರು.
ದಲ್ಲಾಳಿಗಳ ಹಾವಳಿಗೆ ಕಡಿವಾಣ: ಇನ್ನು ಮುಂದೆ ಆಸ್ಪತ್ರೆಯಲ್ಲಿ ದಲ್ಲಾಳ್ಳಿಗಳ ವ್ಯವಹಾರಕ್ಕೆ ಕಡಿವಾಣ ಹಾಕುವಂತೆ ಶಾಸಕ ಕೊತ್ತೂರು ಮಂಜುನಾಥ್ ಸೂಚಿಸಿದರು. ಆಸ್ಪತ್ರೆ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಆಸ್ಪತ್ರೆ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಹೇಳಿದರೆ ಜನ ಕೇಳುವುದಿಲ್ಲ, ಇದಕ್ಕೆ ಪೊಲೀಸರೇ ಸರಿ. ಪೊಲೀಸರಿಂದಲೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಆಸ್ಪತ್ರೆ ಆವರಣದಲ್ಲಿ ತಲೆಎತ್ತಿರುವ ಅಂಗಡಿಗಳನ್ನು ಖಾಲಿ ಮಾಡಿಸುವುದಾಗಿ ಜಿಲ್ಲಾ ಸರ್ಜನ್ ಡಾ.ವಿಜಯಕುಮಾರ್ ಭರವಸೆ ನೀಡಿದರು.
ಕಣ್ಣನ್ ಮಾಮ ಮೇರು ವ್ಯಕ್ತಿತ್ವದ ಮಹಾಚೈತನ್ಯ: ಗುರುರಾಜ ಕರಜಗಿ
ಪ್ರತಿ ತಿಂಗಳು ಕುಂದುಕೊರತೆ ಸಭೆ: ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಹಂತ ಹಂತವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡಲಾಗುವುದು. ಒಂದೇ ಬಾರಿಗೆ ಸರಿಪಡಿಸಲು ಸಾಧ್ಯವಿಲ್ಲ, 8 ವರ್ಷದಿಂದ ಶಾಸಕರ ಅಧ್ಯಕ್ಷತೆಯ ಕುಂದು ಕೊರತೆಗಳ ಸಭೆ ನಡೆದಿಲ್ಲ ಎಂದು ಜಿಲ್ಲಾ ಸರ್ಜನ್ ಹೇಳುತ್ತಿದ್ದಾರೆ, ಆದ್ದರಿಂದ ಸಮಸ್ಯೆಗಳ ಅಗರ ಹೆಚ್ಚಾಗಿದೆ, ಇನ್ನು ಮುಂದೆ ಪ್ರತಿ ತಿಂಗಳ ಶಾಸಕರು ನಾನು ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಗಳ ಕಡೆ ಗಮನಹರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ.ಬಾಲಸುಂದರ್, ಮುಖಂಡರಾದ ವೈ.ಶಿವಕುಮಾರ್, ಚಂಜಿಮಲೆ ರಮೇಶ್, ಜನ್ನಪ್ಪನಹಳ್ಳಿ ನವೀನ್‌ಕುಮಾರ್, ಸುಗಟೂರು ಎಸ್‌ಎಫ್‌ಎಸ್ ಅಧ್ಯಕ್ಷ ಅಂಕತಟ್ಟಿಬಾಬು ಇದ್ದರು.