ಉಪ ಚುನಾಣೆ: ಸುಪ್ರೀಂಕೋರ್ಟ್ ಮಹತ್ವದ ಆದೇಶ, ಮಾಜಿ ಸಿಎಂಗೆ ಬಿಗ್ ರಿಲೀಫ್..!

By Suvarna NewsFirst Published Nov 2, 2020, 2:53 PM IST
Highlights

ಉಪಚುನಾವಣೆಯಲ್ಲಿ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ವಿರುದ್ಧ ಚುನಾವಣೆ ಆಯೋಗ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ.  ಇದರಿಂದ ಕಾಂಗ್ರೆಸ್‌ ನಾಯಕಗೆ ಬಿಗ್ ರಿಲೀಫ್ ಸಿಕ್ಕಿದೆ.

ನವದೆಹಲಿ, (ನ.02): ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಮಧ್ಯಪ್ರದೇಶ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಕಮಲ್​​​ನಾಥ್​​​ರನ್ನು ಕೈಬಿಟ್ಟಿದ್ದ ಚುನಾವಣಾ ಆಯೋಗದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದರಿಂದಾಗಿ ಕಮಲ್​​ನಾಥ್​ಗೆ ರಿಲೀಫ್ ಸಿಕ್ಕಂತಾಗಿದೆ.

 ಸತತವಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪದಡಿ ಕಮಲ್​​ನಾಥ್​​ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈಬಿಡಲಾಗಿತ್ತು. ಒಂದು ವೇಳೆ ಅವರು ಚುನಾವಣೆ ಪ್ರಚಾರದಲ್ಲಿ ಭಾಗಿಯಾದಲ್ಲಿ ಆ ಕ್ಷೇತ್ರದ ಅಭ್ಯರ್ಥಿಗೆ ಕಮಲ್ ನಾಥ್ ಚುನಾವಣಾ ಪ್ರಚಾರದ ಎಲ್ಲಾ ವೆಚ್ಚವನ್ನು ಸೇರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಖಡಕ್ ಆಗಿ ಹೇಳಿತ್ತು.

ಮಾಜಿ ಸಿಎಂ, ಕಾಂಗ್ರೆಸ್ ನಾಯಕಗೆ ಬಿಗ್ ಶಾಕ್...!

ಚುನಾವಣೆ ಆಯೋಗದ ಈ ಆದೇಶವನ್ನು ಪ್ರಶ್ನಿಸಿ ಕಮಲ್​ನಾಥ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದ ಆದೇಶಕ್ಕೆ  ತಡೆ ನೀಡಿ ಇಂದು (ಸೋಮವಾರ) ಆದೇಶ ಹೊರಡಿಸಿದೆ.

ಬಿಜೆಪಿ ನಾಯಕಿ ಇಮ್ರತಿ ದೇವಿ ಅವರನ್ನು 'ಐಟಂ' ಎಂದು ಕರೆಯುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದ ಕಮಲ್ ನಾಥ್, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆಯೇ ಹೊರತು ಕ್ಷಮೆ ಕೋರಿಲ್ಲ.

ಮಧ್ಯಪ್ರದೇಶದ ಉಪಚುನಾಣೆ ಪ್ರಚಾರದಲ್ಲಿ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಕಮಲ್ ನಾಥ್, ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿದ್ದಾರೆ. 

click me!