
ಬೆಂಗಳೂರು, (ನ.02): ರಾಜರಾಜೇಶ್ವರಿ ವಿಧಾನಸಭಾ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆಬಿಬಿದ್ದು, ನಾಳೆ ಅಂದ್ರೆ ನ.03ರಂದು ಮತದನಾ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಾಳೆ (ನ.03) ಚುನಾವಣಾ ಹಿನ್ನೆಲೆಯಲ್ಲಿ ಎಲ್ಲಾ ವ್ಯವಸ್ಥೆಗಳು ಮಾಡಿದ್ದೇವೆ 20 % ಚುನಾವಣಾ ಸಿಬ್ಬಂದಿಯ ನ್ನು ಹೆಚ್ಚುವರಿ ನೇಮಕ ಮಾಡಿದ್ದು, ಯಾರಿಗಾದ್ರೂ ಹುಷಾರ್ ಇಲ್ಲವಾದರೆ ತಕ್ಷಣ ಸಿಬ್ಬಂದಿ ಬದಲಾಯಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಶಿರಾ, ಆರ್‌ಆರ್ ನಗರ ಪ್ರಚಾರ ಅಬ್ಬರ ಅಂತ್ಯ, ನಾಳೆ ಮತದಾನ!
ಇನ್ನು ಸಿಂಟಮ್ಸ್ ಇದ್ದವರಿಗೆ ಯಾರನ್ನು ಕೆಲಸಕ್ಕೆ ಬರುವಂತೆ ಒತ್ತಾಯ ಮಾಡಿಲ್ಲ . 678 ಭೂತ್ ಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಆಗಿದೆ. ಮತ ಚಲಾಯಿಸುವ ವ್ಯಕ್ತಿಗೆ ಬಲಗೈಗೆ ಹ್ಯಾಂಡ್ ಗ್ಲೌಸ್ ನೀಡ್ತೇವೆ. ಬಳಿಕ ಎಡಗೈನ ಮಧ್ಯ ಬೆರಳಿಗೆ ಶಾಹಿ ಹಚ್ಚಲಾಗುತ್ತೆ ಎಂದು ವಿವರಿಸಿದರು.
ಕೊರೋನಾ ಸೋಂಕಿತರಿಗೂ ಅವಕಾಶ
ಕೊರೋನಾ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ನೀಡುತ್ತೇವೆ. ಈಗಾಗಲೇ ಕೋವಿಡ್ ಸೋಂಕಿತರ ಮನೆಗೆ ಅಂಬ್ಯುಲೆನ್ಸ್ ಕಳಿಸುತ್ತೇವೆ. ಅವರಿಗೆ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಬಳಿಕ ಅವರನ್ನು ಅಂಬ್ಯುಲೆನ್ಸ್ ಮೂಲಕವೇ ಮನೆಗೆ ಬಿಡುತ್ತೇವೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.
ಮತದಾರರಿಗೆ ಥರ್ಮಲ್ ಸ್ಕ್ರಿನಿಂಗ್, ಟೆಂಪರೇಚರ್ ಚೆಕ್ ಅಪ್ ಮಾಡಿ ಮತ ಕೇಂದ್ರಕ್ಕೆ ಬಿಡುತ್ತೇವೆ. ಎಲ್ಲಾ ವ್ಯವಸ್ಥೆಗಳು ಆಗಿದ್ದು, ಬೆಳಗ್ಗೆ 7 ರಿಂದ ಸಂಜೆ ಆರು ಗಂಟೆ ತನಕ ಮತದಾನಕ್ಕೆ ಅವಕಾಶ ನೀಡಲಾಗಿದೆ. 6 ಗಂಟೆ ಒಳಗೆ ಕ್ಯೂನಲ್ಲಿ ನಿಂತವರಿಗೂ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಆರ್‌ಆರ್ ನಗರ ಉಪಚುನಾವಣೆ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.