ದೇಶವನ್ನು ಹಾಳು ಮಾಡಿರುವ ಕಾಂಗ್ರೆಸ್‌ನವರಿಗೆ ನೆಮ್ಮದಿಯಿಂದ ಇರಲು ಬಿಡಬಾರದು: ಸಂಸದ ಅನಂತಕುಮಾರ ಹೆಗಡೆ

By Govindaraj S  |  First Published Mar 13, 2024, 8:03 AM IST

ತಾವು ಇರುವ ತನಕ ಖಂಡಿತ ಕಾಂಗ್ರೆಸ್‌ಗೆ ನೆಮ್ಮದಿ ಕೊಡುವುದಿಲ್ಲ. ದೇಶವನ್ನು ಲೂಟಿ ಮಾಡಿರುವ, ದೇಶವನ್ನು ಹಾಳು ಮಾಡಿರುವ ಕಾಂಗ್ರೆಸ್‌ನವರಿಗೆ ನೆಮ್ಮದಿಯಿಂದ ಇರಲು ಬಿಡಬಾರದು ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದರು.


ಕಾರವಾರ (ಮಾ.13): ತಾವು ಇರುವ ತನಕ ಖಂಡಿತ ಕಾಂಗ್ರೆಸ್‌ಗೆ ನೆಮ್ಮದಿ ಕೊಡುವುದಿಲ್ಲ. ದೇಶವನ್ನು ಲೂಟಿ ಮಾಡಿರುವ, ದೇಶವನ್ನು ಹಾಳು ಮಾಡಿರುವ ಕಾಂಗ್ರೆಸ್‌ನವರಿಗೆ ನೆಮ್ಮದಿಯಿಂದ ಇರಲು ಬಿಡಬಾರದು ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಹಿಂದೂ ವಿರೋಧಿ, ಅಭಿವೃದ್ಧಿ ವಿರೋಧಿ, ದೇಶ ವಿರೋಧಿ, ದಲಿತ ವಿರೋಧಿ, ಮಹಿಳಾ ವಿರೋಧಿ ಆಗಿದ್ದು, ನಮ್ಮ ದೇಶದಲ್ಲಿ ಇರಬಾರದು. 

ನಮಗೆ ವಿರೋಧ ಪಕ್ಷ ಬೇಕು. ಆದರೆ ಒಳ್ಳೆಯ ವಿರೋಧ ಪಕ್ಷ ಬರಬೇಕು.  ಕಾಂಗ್ರೆಸ್ ಹೊರತಾಗಿ ಮತ್ತೊಂದು ರಚನಾತ್ಮಕವಾಗಿರುವ ವಿರೋಧ ಪಕ್ಷ ಗೆದ್ದು ಬರಲಿ. ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ವಿರೋಧ ಪಕ್ಷ ಇರಬೇಕು. ಆದರೆ ಈ ರೀತಿಯ ಮನೆಮುರುಕ ಕಾಂಗ್ರೆಸ್ ಇರಬಾರದು. ದೇಶದಲ್ಲಿ ಕಾಂಗ್ರೆಸ್ ಮಾಡಿರುವ ಅವಾಂತರಗಳನ್ನು ನೋಡಿದರೆ ಯಾರಿಗೂ ನಿದ್ದೆ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ನಡುವೆ ಕೆಲವರು ಹೋಲಿಕೆ ಮಾಡುತ್ತಿದ್ದಾರೆ. 

Latest Videos

undefined

ಜನಸಾಮಾನ್ಯರ ಹಿತಕ್ಕಾಗಿ ಗ್ಯಾರಂಟಿ ಯೋಜನೆ ಜಾರಿ: ಸಚಿವ ಎಚ್.ಕೆ.ಪಾಟೀಲ್‌

ಆದರೆ ಆನೆಗೂ ಕುರಿಗೂ ಇರುವಂತಹ ಅಜಗಜಾಂತರ ವ್ಯತ್ಯಾಸ ಬುದ್ಧಿವಂತರಿಗೆ ಗೊತ್ತಾಗಿದೆ. ಆನೆ ಮತ್ತು ಕುರಿಯನ್ನು ಯಾರೂ ಕೂಡಾ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು. ಉತ್ತರ ಕನ್ನಡದಲ್ಲಿ ಕಳೆದ ಬಾರಿ ಸಿಕ್ಕ ಲೀಡ್ ದಕ್ಷಿಣ ಭಾರತದಲ್ಲೇ ದಾಖಲೆಯಾಗಿತ್ತು. ಹಳೆಯ ದಾಖಲೆಯನ್ನು ಅಳಿಸಿ ಹೊಸ ದಾಖಲೆಯನ್ನು ಬರೆಯಬೇಕು. ಬಿಜೆಪಿ ಮತ್ತೆ ಅಜೇಯ ಶಕ್ತಿಯಾಗಿ ಬೆಳೆದು ಬರಬೇಕು. ಅಭ್ಯರ್ಥಿ ಯಾರೇ ಇರಲಿ, ಬಿಜೆಪಿ ಗೆಲುವು ಸಾಧಿಸಬೇಕು ಎಂದರು.

ಮಾಧ್ಯಮಗಳು ಬೇವರ್ಸಿ ನಾಯಿಗಳಂತೆ ವರ್ತಿಸುತ್ತಿದ್ದಾರೆ: ಯಾವುದೇ ನೈತಿಕತೆ ಇಲ್ಲದ ಮಾಧ್ಯಮಗಳು ಕೇವಲ ಟೀಕಿಸುವುದನ್ನು ಮಾತ್ರ ಮಾಡುತ್ತಿದೆ. ಇಂಥ ಬೇವರ್ಸಿ ಮಾಧ್ಯಮಕ್ಕೆ ನಾನು ಅಂಜುವುದಿಲ್ಲ ಎಂದು ಸಂಸದ ಅನಂತಕುಮಾ‌ರ್ ಹೆಗಡೆ ತಿಳಿಸಿದರು. ತಾಲೂಕಿನ ಹಿಲ್ಲೂರಿನಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಾಧ್ಯಮಗಳು ಏನೂ ಬೇಕಾದರೂ ಬರೆದುಕೊಳ್ಳಲಿ. ಬೇವರ್ಸಿಗಳು ಏನೂ ಬೇಕಾದರೂ ಒದರಾಡಲಿ, ಸಾಮಾಜಿಕ ಜಾಲತಾಣದಲ್ಲಿ ಬೇಕಾದ್ದ ಚರ್ಚೆ ಆಗಲಿ. ಇದಕ್ಕೆ ವಿಚಲಿತರಾಗಬಾರದೆಂದು ಕಾರ್ಯಕರ್ತರಿಗೆ ಅನಂತ ಕುಮಾರ ಹೆಗಡೆ ಕಿವಿಮಾತು ಹೇಳಿದರು.

ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಮೆದುಳು ಕೇಂದ್ರ ಶುರು: ಸಚಿವ ದಿನೇಶ್ ಗುಂಡೂರಾವ್‌

ನೀವು ಯಾವುದೋ ಸಾಮಾನ್ಯ ಪಕ್ಷದ ಕಾರ್ಯಕರ್ತರಲ್ಲ. ದೇಶ ಆಡಳಿತ ಮಾಡುತ್ತಿರುವ ಪಕ್ಷದ ಕಾರ್ಯಕರ್ತರು. ಬೇರೆ ಯಾರೋ ಪತ್ರಿಕೆಯಲ್ಲಿ, ವಾಟ್ಸ್‌ಆ್ಯಪ್‌ನಲ್ಲಿ ಏನೇನೋ ಹೇಳಿದ್ರು ಅಂತಾ ವಿಚಲಿತರಾಗಬಾರದು. ಆನೆ ನಡೆದಿದ್ದೆ ದಾರಿ ಎಂಬಂತೆ ನಡೆಯಬೇಕು ಎಂದರು. ಆನೆ ನಡಿತಾ ಇದರೆ ನಾಯಿಗಳು ಬೋಗಳತಾ ಇರುತ್ತವೆ. ಆನೆ ನಡಿತಾ ಇದ್ರೆ ಯಾವಗಲಾದರೂ ನಾಯಿ ಕಡೆ ಗಮನ ಕೊಡುತ್ತಾ? ನಾಯಿಗಳಿಗೂ ಗೊತ್ತು ನಾವು ಎಷ್ಟೆ ಬೊಗಳಿದ್ರು ಆನೆಗೆ ಏನು ಮಾಡೊಕೆ ಆಗಲ್ಲ ಅಂತಾ. ನಾಯಿಗಳು ಬೋಗಳದೆ ಇದ್ರೆ ಆನೆ ಗಾಂಭೀರ್ಯಕ್ಕೆ ಬೆಲೆ ಇರಲ್ಲ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

click me!