ಸೋಲುವ ಭಯದಿಂದ ಸ್ಪೀಕರ್‌ ಆಗಲು ಬಹುತೇಕರು ಹಿಂದೇಟು!

By Kannadaprabha NewsFirst Published May 22, 2023, 12:31 PM IST
Highlights

ವಿಧಾನ ಸಭಾಧ್ಯಕ್ಷರಾದವರು ನಂತರದ ಚುನಾವಣೆಯಲ್ಲಿ ಸೋತಿರುವುದೇ ಹೆಚ್ಚು, ಹೀಗಾಗಿ ಬಹುತೇಕರು ಸಭಾಧ್ಯಕ್ಷರಲು ಹಿಂದೇಟು ಹಾಕುತ್ತಾರೆ. ಸದ್ಯ ಸ್ಪೀಕರ್‌ ಆಗಲು ಅನೇಕರು ಹಿಂಜರಿಯುತ್ತಿರುವುದು ಇದೇ ಕಾರಣಕ್ಕೆ ಎನ್ನಲಾಗಿದೆ.

ಬೆಂಗಳೂರು (ಮೇ.22) : ವಿಧಾನ ಸಭಾಧ್ಯಕ್ಷರಾದವರು ನಂತರದ ಚುನಾವಣೆಯಲ್ಲಿ ಸೋತಿರುವುದೇ ಹೆಚ್ಚು, ಹೀಗಾಗಿ ಬಹುತೇಕರು ಸಭಾಧ್ಯಕ್ಷರಲು ಹಿಂದೇಟು ಹಾಕುತ್ತಾರೆ. ಸದ್ಯ ಸ್ಪೀಕರ್‌ ಆಗಲು ಅನೇಕರು ಹಿಂಜರಿಯುತ್ತಿರುವುದು ಇದೇ ಕಾರಣಕ್ಕೆ ಎನ್ನಲಾಗಿದೆ.

1994 ರಿಂದ 1999ರ ವರೆಗೆ ಸಭಾಧ್ಯಕ್ಷರಾಗಿದ್ದ ಕೆ.ಆರ್‌. ರಮೇಶ್‌ಕುಮಾರ್‌ ಅವರು 1999ರಲ್ಲಿ ಸೋತಿದ್ದರು. 1999ರಿಂದ 2004ವರೆಗೆ ಎಸ್‌.ಎಂ. ಕೃಷ್ಣ ಸರ್ಕಾರದಲ್ಲಿ ಸಭಾಧ್ಯಕ್ಷರಾಗಿದ್ದ ಆಗಿದ್ದ ಎಂ.ವಿ. ವೆಂಕಟಪ್ಪ ಅವರು 2004ರ ಚುನಾವಣೆಯಲ್ಲಿ ಸೋತಿದ್ದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಸ್ಪೀಕರ್ ಆಗುವ ಅರ್ಹತೆ ನನಗೆ ಇಲ್ಲ- ಆರ್.ವಿ. ದೇಶಪಾಂಡೆ

2004ರ ಸಮ್ಮಿಶ್ರ ಸರ್ಕಾರದದಲ್ಲಿ ಸಭಾಧ್ಯಕ್ಷರಾಗಿದ್ದ ಕೆ.ಆರ್‌. ಪೇಟೆ ಕ್ಷೇತ್ರದ ಕೃಷ್ಣ ಅವರು 2008ರ ಚುನಾವಣೆಯಲ್ಲಿ ಸೋತಿದ್ದರು. 2013ರಲ್ಲಿ ಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ, 2016 ರಲ್ಲಿ ಸಭಾಧ್ಯಕ್ಷರಾಗಿದ್ದ ಕೆ.ಬಿ. ಕೋಳಿವಾಡ ಇಬ್ಬರೂ 2018ರ ಚುನಾವಣೆಯಲ್ಲಿ ಸೋತರು. 2018 ರಿಂದ 2023ರ ಅವಧಿಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಭಾಧ್ಯಕ್ಷರಾಗಿದ್ದ ಕೆ.ಆರ್‌. ರಮೇಶ್‌ ಕುಮಾರ್‌ ಹಾಗೂ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಇಬ್ಬರೂ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಸಭಾಧ್ಯಕ್ಷರಾಗಿದ್ದ ಜಗದೀಶ್‌ ಶೆಟ್ಟರ್‌ (2008-09) ಹಾಗೂ ಕೆ.ಜಿ. ಬೋಪಯ್ಯ (2009-13) ಅವರು ಮಾತ್ರ ಪುನರ್‌ ಆಯ್ಕೆಯಾಗಿರುವುದು ವಿಶೇಷವಾಗಿದೆ.

ದೇಶಪಾಂಡೆಗೆ ಸಚಿವ ಸ್ಥಾನ ನೀಡಿ

ಜೋಯಿಡಾ: ಹಳಿಯಾಳ ಕ್ಷೇತ್ರದ ಹಿರಿಯ ಶಾಸಕ ಆರ್‌.ವಿ. ದೇಶಪಾಂಡೆ(RV Deshpande) 9 ಬಾರಿ ಒಂದೇ ಕ್ಷೇತ್ರದಲ್ಲಿ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕ್ಷೇತ್ರದ ಜನತೆ ದೇಶಪಾಂಡೆ ಅವರನ್ನು ಉಪಮುಖ್ಯಮಂತ್ರಿ ಮಾಡುತ್ತಾರೆ. ಒಳ್ಳೆಯ ಖಾತೆ ಕೊಡುತ್ತಾರೆ ಎಂಬ ಭಾವನೆ ಹೊಂದಿದ್ದರು. ಆದರೆ ಅದೆಲ್ಲ ಹುಸಿಯಾಗಿದೆ ಎಂದು ಜೋಯಿಡಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಯ್‌ ದೇಸಾಯಿ ಹೇಳಿದ್ದಾರೆ

ಸಮಸ್ಯೆಗೆ ಸ್ಪಂದಿಸದ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ: ಆರ್‌.ವಿ. ದೇಶಪಾಂಡೆ.

ದೇಶಪಾಂಡೆ ಅವರನ್ನು ಹೊರಗಿಟ್ಟು ಮೊದಲನೇ ಹಂತದಲ್ಲಿ ಮಂತ್ರಿಮಂಡಲ ರಚಿಸಲಾಗಿದೆ. ಇದು ಕ್ಷೇತ್ರದ ಜನತೆಗೆ ಮಾಡಿದ ಅವಮಾನ. ದೇಶಪಾಂಡೆ ಸಚಿವರಾದರೆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಸಂಭ್ರಮಿಸುತ್ತಿದ್ದರು. ಈಗಾಗಲೇ ದೇಶಪಾಂಡೆ ಸಭಾಧ್ಯಕ್ಷ ಸ್ಥಾನ ನನಗೆ ಸರಿಯಾದುದಲ್ಲವೇನೋ ಎಂಬ ಮಾತನ್ನು ಆಡಿರುವುದು ಅವರ ಬೆಂಬಲಿಗರಲ್ಲಿ ಅವರು ಸಚಿವರಾಗುವ ಕನಸು ಮೂಡಿಸಿದೆ. ಅದನ್ನು ಪಕ್ಷ ನನಸು ಮಾಡಬೇಕು ಎಂದಿದ್ದಾರೆ.

click me!